ETV Bharat / bharat

ಆರೋಗ್ಯ ಕಾರ್ಯಕರ್ತ ಸಾವು: ವ್ಯಾಕ್ಸಿನ್​ಗೂ ಸಾವಿಗೂ ಸಂಬಂಧ ಇಲ್ಲ ಎಂದ ಆರೋಗ್ಯ ಇಲಾಖೆ - ಕೋವಿಡ್ 19 ಲೇಟೆಸ್ಟ್ ನ್ಯೂಸ್

ವ್ಯಾಕ್ಸಿನ್ ಪಡೆದ ವ್ಯಕ್ತಿ ಸಾವಿಗೀಡಾದ ಘಟನೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ತೆಲಂಗಾಣ ಆರೋಗ್ಯ ಇಲಾಖೆ, ಪ್ರಾಥಮಿಕ ಸಂಶೋಧನೆಗಳ ಪ್ರಕಾರ ಅವರ ಸಾವಿಗೂ ವ್ಯಾಕ್ಸಿನೇಷನ್​ಗೂ ಸಂಬಂಧವಿಲ್ಲ ಎಂದು ಹೇಳಿದೆ.

Man dies in Telangana after taking COVID-19 shot
ವ್ಯಾಕ್ಸಿನ್ ಪಡೆದ ಆರೋಗ್ಯ ಕಾರ್ಯಕರ್ತ ಸಾವು
author img

By

Published : Jan 21, 2021, 6:56 AM IST

ಹೈದರಾಬಾದ್ (ತೆಲಂಗಾಣ): ಕೋವಿಡ್ -19 ಲಸಿಕೆ ತೆಗೆದುಕೊಂಡು 18 ಗಂಟೆಗಳ ನಂತರ ನಿರ್ಮಲ್ ಪ್ರದೇಶದ ಆಸ್ಪತ್ರೆಯಲ್ಲಿ ನಿಧನರಾದ 42 ವರ್ಷದ ಆರೋಗ್ಯ ಕಾರ್ಯಕರ್ತ, ವ್ಯಾಕ್ಸಿನೇಷನ್​ಗೆ ಸಂಬಂಧವಿಲ್ಲದ ಕಾರಣದಿಂದ ಸಾವನ್ನಪ್ಪಿದ್ದಾರೆ ಎಂದು ತೆಲಂಗಾಣ ಆರೋಗ್ಯ ಇಲಾಖೆ ಪ್ರಾಥಮಿಕ ಸಂಶೋಧನೆಗಳನ್ನು ಉಲ್ಲೇಖಿಸಿ ಹೇಳಿದೆ.

ಕುಂತಲಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಬೆಳಗ್ಗೆ 11.30 ರ ಸುಮಾರಿಗೆ ಈ ವ್ಯಕ್ತಿಗೆ ಲಸಿಕೆ ನೀಡಲಾಗಿದೆ ಎಂದು ಇಲಾಖೆ ತಿಳಿಸಿದೆ. ಬುಧವಾರ ಮುಂಜಾನೆ 2.30 ರ ಸುಮಾರಿಗೆ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ ಮತ್ತು ಬೆಳಗ್ಗೆ 5:30 ರ ಸುಮಾರಿಗೆ ಅವರನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು.

"ಪ್ರಾಥಮಿಕ ಸಂಶೋಧನೆಗಳ ಪ್ರಕಾರ ಅವರ ಸಾವಿಗೂ ವ್ಯಾಕ್ಸಿನೇಷನ್​ಗೂ ಸಂಬಂಧವಿಲ್ಲ ಎಂದು ತೋರುತ್ತದೆ ಮತ್ತು ಮಾರ್ಗಸೂಚಿಗಳ ಪ್ರಕಾರ, ವೈದ್ಯರ ತಂಡದಿಂದ ಮರಣೋತ್ತರ ಪರೀಕ್ಷೆ ನಡೆಸಲಾಗುವುದು" ಎಂದು ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ.

ಜಿಲ್ಲಾ ಎಇಎಫ್‌ಐ ಇಂದ ಈ ವಿಷಯವನ್ನು ಪರಿಶೀಲಿಸಲಾಗುತ್ತಿದೆ ಮತ್ತು ವರದಿಯನ್ನು ರಾಜ್ಯ ಎಇಎಫ್‌ಐ ಸಮಿತಿಗೆ ಸಲ್ಲಿಸಲಾಗುವುದು, ಅದು ತನ್ನದೇ ಆದ ವರದಿಯನ್ನು ಕೇಂದ್ರ ಎಇಎಫ್‌ಐ ಸಮಿತಿಗೆ ಸಲ್ಲಿಸುತ್ತದೆ.

ತಾತ್ಕಾಲಿಕ ವರದಿಗಳ ಪ್ರಕಾರ ಬುಧವಾರ ಸಂಜೆ 6:00 ರವರೆಗೆ ಒಟ್ಟು 7,86,842 ಮಂದಿಗೆ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.