ನವದೆಹಲಿ: ತ್ವರಿತ ಸಾಲ ಒದಗಿಸುವ ಆ್ಯಪ್ನ ಏಜೆಂಟರಿಂದ ಕಿರುಕುಳಕ್ಕೊಳಗಾದ ಯುವಕ ಇಲ್ಲಿನ ದ್ವಾರಕಾದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಹರೀಶ್(25) ಮೃತ ಯುವಕ. ಮೃತನ ಕುಟುಂಬದ ಮಾಹಿತಿ ಪ್ರಕಾರ, ಹರೀಶ್ ತ್ವರಿತ ಸಾಲ ಒದಗಿಸುವ ಆ್ಯಪ್‌ನಿಂದ ಸಣ್ಣ ಮೊತ್ತದ ಸಾಲವನ್ನು ತೆಗೆದುಕೊಂಡಿದ್ದ. ಸಾಲದ ಮೊತ್ತಕ್ಕಿಂತ 30 ಪಟ್ಟು ಹೆಚ್ಚು ಮರುಪಾವತಿ ಮಾಡಿದ್ದ. ಆದರೆ ನಂತರವೂ ಆ್ಯಪ್ ಏಜೆಂಟರು ಹಣ ನೀಡುವಂತೆ ಕಿರುಕುಳ ನೀಡಿದ್ದಾರೆ. ಇದರಿಂದ ಬೇಸತ್ತ ಹರೀಶ್ ದ್ವಾರಕ ವಲಯದಲ್ಲಿರುವ ಆತನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಇದನ್ನು ಓದಿ: ಎನ್‌ಡಿಆರ್‌ಎಫ್‌ಗೆ ವರ್ಷಾಂತ್ಯದಲ್ಲಿ ವಿಶ್ವಸಂಸ್ಥೆ ಮಾನ್ಯತೆ
ಅಷ್ಟೇ ಅಲ್ಲದೆ ಏಜೆಂಟರು ಹರೀಶ್ ಹೆಸರಿನಲ್ಲಿ ವಾಟ್ಸಪ್ ಗ್ರೂಪ್ ಮಾಡಿ ಆತನ ಸಂಬಂಧಿಕರಿಗೆ ಆಕ್ಷೇಪಾರ್ಹ ಸಂದೇಶಗಳನ್ನು ಕಳುಹಿಸಿದ್ದರಂತೆ. ಇದರಿಂದ ಸಾಕಷ್ಟು ನೋವು ಅನುಭವಿಸಿದ್ದ ಹರೀಶ್ ಈ ನಿರ್ಧಾರಕ್ಕೆ ಬಂದಿದ್ದಾನೆ ಎಂದು ಆತನ ಕುಟುಂಬಸ್ಥರು ತಿಳಿಸಿದ್ದಾರೆ. ಆದರೆ ಈ ಬಗ್ಗೆ ಪೊಲೀಸರಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.
ಇನ್ನು ಇತ್ತೀಚಿನ ದಿನಗಳಲ್ಲಿ ತ್ವರಿತ ಸಾಲ ಒದಗಿಸುವ ಆ್ಯಪ್ಗಳಿಂದ ಮೋಸ ಹೋದ ಅನೇಕ ಕೇಸ್ಗಳು ಠಾಣೆಯಲ್ಲಿ ದಾಖಲಾಗುತ್ತಿವೆ. ತೆಲಂಗಾಣದಲ್ಲಿ ಇಲ್ಲಿಯವರೆಗೆ 6 ಮಂದಿ ಇದೇ ತರಹದ ಸಮಸ್ಯೆಗೆ ಬಲಿಯಾಗಿದ್ದಾರೆ.