ETV Bharat / bharat

ಕಂಗನಾ ಅಭಿಮಾನಿಯೆಂದು ಸಂಜಯ್​ ರಾವತ್​ಗೆ ಬೆದರಿಕೆ: ಯುವಕನ ಬಂಧನ - ಮುಂಬೈ ಪೊಲೀಸರು

ಕಂಗನಾ ಅಭಿಮಾನಿಯೆಂದು ಹೇಳಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಶಿವಸೇನೆ ಸಂಸದ ಸಂಜಯ್​ ರಾವತ್​ಗೆ ಬೆದರಿಕೆ ಹಾಕಿದ ಯುವಕನನ್ನು ಕೋಲ್ಕತ್ತಾದಲ್ಲಿ ಮುಂಬೈ ಪೊಲೀಸರು ಅರೆಸ್ಟ್​​ ಮಾಡಿದ್ದಾರೆ.

Youth arrested for threatning sanjay rout over kangna case
ಕಂಗನಾ ಅಭಿಮಾನಿಯೆಂದು ಸಂಜಯ್​ ರಾವತ್​ಗೆ ಬೆದರಿಕೆ
author img

By

Published : Sep 11, 2020, 5:02 PM IST

ಕೋಲ್ಕತ್ತಾ: ನಟಿ ಕಂಗನಾ ರನೌತ್​ ಹೆಸರು ಬಳಸಿಕೊಂಡು ಶಿವಸೇನೆ ಸಂಸದ ಸಂಜಯ್​ ರಾವತ್​ಗೆ ಬೆದರಿಕೆ ಹಾಕಿದ ಕೋಲ್ಕತ್ತಾ ಮೂಲದ ಯುವಕನೋರ್ವನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಕೋಲ್ಕತ್ತಾದ ಟೋಲಿಗಂಜ್ ನಗರದ ನಿವಾಸಿ ಪಲಾಶ್ ಘೋಷ್ ಬಂಧಿತ ಆರೋಪಿ. ಈತ ಸಾಮಾಜಿಕ ಜಾಲತಾಣದಲ್ಲಿ ಕಂಗನಾ ಅಭಿಮಾನಿಯೆಂದು ಹೇಳಿಕೊಂಡು ಸಂಜಯ್​ ರಾವತ್​ಗೆ ಬೆದರಿಕೆ ಹಾಕಿದ್ದಾನೆ ಎಂದು ರಾವತ್ ದೂರು ನೀಡಿದ್ದರು. ​ಇಂದು ಬೆಳಗ್ಗೆ ಕೋಲ್ಕತ್ತಾ ಪೊಲೀಸರ ಜೊತೆ ಪಲಾಶ್ ಘೋಷ್ ನಿವಾಸಕ್ಕೆ ತೆರಳಿದ ಮುಂಬೈ ಪೊಲೀಸರು ಆರೋಪಿಯನ್ನು ಅರೆಸ್ಟ್​​ ಮಾಡಿದ್ದಾರೆ.

ಬಾಲಿವುಡ್​ ನಟ ಸುಶಾಂತ್​ ಸಿಂಗ್ ರಜಪೂತ್​ ಸಾವಿನ ವಿಚಾರ, ಡ್ರಗ್ಸ್​​ ಹಾಗೂ ಮೂವಿ ಮಾಫಿಯಾ ವಿರುದ್ಧ ದನಿ ಎತ್ತಿರುವ ನಟಿ, ಮುಂಬೈಯನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಲಿಕೆ ಮಾಡಿದ ಬಳಿಕ ಕಂಗನಾ ಹಾಗೂ ಸಂಜಯ್​ ರಾವತ್ ನಡುವೆ ಕಾದಾಟ ಆರಂಭವಾಗಿದೆ. ಇದರ ನಡುವೆಯೇ ರಾವತ್​ಗೆ ಬೆದರಿಕೆ ಹಾಕಿದ ಯುವಕನೀಗ ಅರೆಸ್ಟ್​ ಆಗಿದ್ದು, ಕೋಲ್ಕತ್ತಾ ಸಿಟಿ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗುವುದು. ಬಳಿಕ ಆರೋಪಿಯನ್ನು ಮುಂಬೈಗೆ ಕರೆದೊಯ್ಯಲಾಗುವುದು ಎಂದು ಮೂಲಗಳು ತಿಳಿಸಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.