ನವದೆಹಲಿ: ನೀರು ಹಂಚಿಕೆಗಾಗಿ ನಡೆದ ಹೊಡೆದಾಟದಲ್ಲಿ ವ್ಯಕ್ತಿಯೊಬ್ಬನನ್ನ ಜನರ ಗುಂಪೊಂದು ಹೊಡೆದು ಕೊಂದು ಹಾಕಿದ ಘಟನೆ ನವದೆಹಲಿಯಲ್ಲಿ ನಡೆದಿದೆ.
ರಾಷ್ಟ್ರ ರಾಜಧಾನಿಯ ನಜಾಫರ್ಗಢ ಏರಿಯಾದಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಕುಡಿಯುವ ನೀರಿನ ವಿಷಯವಾಗಿ ಈ ಗಲಾಟೆ ಉಂಟಾಗಿದೆ.
ವ್ಯಕ್ತಿಯೊಬ್ಬನನ್ನ ಅವರ ನೆರೆ ಹೊರೆಯವರು ಮತ್ತು ಜನರು ಗುಂಪುಗೂಡಿ ದಾಳಿ ಮಾಡಿ ಹಲ್ಲೆ ನಡೆಸಿದ್ದರಿಂದ ತೀವ್ರವಾಗಿ ಗಾಯಗೊಂಡು ಅಸುನೀಗಿದ್ದಾನೆ. ಈ ಸಂಬಂಧ ಪೊಲೀಸರು ನೆರೆಹೊರೆಯವರ ಮೇಲೆ ಎಫ್ಐಆರ್ ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ.