ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಚುನಾವಣೆಗೂ ಮುನ್ನವೇ ರಾಜಕೀಯ ಸಮರದ ಕಾವು ಏರುತ್ತಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಂಜುರಾ ಜಿಲ್ಲೆಯ ಬುಡಕಟ್ಟು ಸಮುದಾಯದ ಪಕ್ಷದ ಕಾರ್ಯಕರ್ತರ ಮನೆಯಲ್ಲಿ ಬಿಜೆಪಿ ನಾಯಕರ ಜತೆ ಕುಳಿತು ಊಟ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಡೆ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಬುಡಕಟ್ಟು ಕುಟುಂಬಸ್ಥರು ಸಿದ್ಧಪಡಿಸಿದ ಆಹಾರವನ್ನು ಅಮಿತ್ ಶಾ ತಿನ್ನಲಿಲ್ಲ. ಹೊರಗಿನಿಂದ ಪಾರ್ಸಲ್ ತಂದಿದ್ದ ಊಟ ಮಾಡಿದ್ದಾರೆ. ಅಮಿತ್ ಶಾ ಅವರ ಬಂಕುರಾ ಕಾರ್ಯಕ್ರಮ ಒಂದು ಪಬ್ಲಿಕ್ ಶೋ. ಬಿಜೆಪಿ ನಾಯಕರ ಬುಡಕಟ್ಟು ಕುಟುಂಬಸ್ಥರೊಂದಿಗಿನ ಊಟದ ಫೋಟೋ ಪ್ರದಶರ್ನಕ್ಕೆ ಮಾತ್ರ ಸೀಮಿತ ಎಂದು ಅಣಕವಾಡಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪಶ್ಚಿಮ ಬಂಗಾಳ ಪ್ರವಾಸದ ವೇಳೆಯಲ್ಲಿ ಬುಡಕಟ್ಟು ಕುಟುಂಬದ ಮನೆಯೊಂದರಲ್ಲಿ ಪಕ್ಷದ ಮುಖಂಡರು ಸೇರಿ ಊಟ ಮಾಡಿದ್ದರು.
ಮಧ್ಯಪ್ರದೇಶ ರಾಜಕೀಯ.. ಚೌಹಾಣ್ ಭದ್ರಕೋಟೆಯಲ್ಲಿ 'ಕೈ' ಸ್ಥಿತಿ ಅಧೋಗತಿ..!
ಬಂಕುರಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಮತಾ ಬ್ಯಾನರ್ಜಿ ಮಾತನಾಡಿ, ಬಂಗಾಳದಲ್ಲಿ ಟಿಎಂಸಿ ಮತ್ತೆ ಅಧಿಕಾರಕ್ಕೆ ಬರಲಿದೆ. ನಮ್ಮ ಸರ್ಕಾರ ಬಂಗಾಳದಲ್ಲಿ ತನ್ನ ಅಧಿಕಾರ ಉಳಿಸಿಕೊಳ್ಳಲಿದೆ. ನಾವು ಉಚಿತ ಪಡಿತರ ವಿತರಣೆ ಅವಧಿ ಮತ್ತಷ್ಟು ವಿಸ್ತರಿಸಿದ್ದೇವೆ ಎಂದರು.
ನಾವು ನಮ್ಮ ಜನರನ್ನು ಚೆನ್ನಾಗಿ ನೋಡಿಕೊಂಡಿದ್ದೇವೆ. ಜೂನ್ವರೆಗೆ ಉಚಿತ ಪಡಿತರವನ್ನು ಘೋಷಿಸಿದ್ದೇವೆ. ಸುಳ್ಳು ಆರೋಪಗಳು ಹೆಚ್ಚು ಕಾಲ ನಿಲ್ಲುವುದಿಲ್ಲ. ಅಮಿತ್ ಶಾ ಸುಳ್ಳು ಭರವಸೆ ನೀಡುತ್ತಿದ್ದಾರೆ. ಜನರು ಇದನ್ನು ಅರ್ಥಮಾಡಿಕೊಂಡಿದ್ದಾರೆ ಎಂದು ಟೀಕಿಸಿದರು.