ಮುಂಬೈ : ಜೋರ್ಡಾನ್ನಿಂದ ಕೊಚ್ಚಿಗೆ ಹಿಂತಿರುಗಿದ್ದ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಅವರಿಗೆ 7 ದಿನಗಳ ಸಾಂಸ್ಥಿಕ ಕ್ವಾರಂಟೈನ್ ವಿಧಿಸಲಾಗಿತ್ತು. ಇದೀಗ ಅವರಿಗೆ ಕೋವಿಡ್-19 ಪರೀಕ್ಷೆ ನಡೆಸಿದ ಮೇಲೆ ನೆಗೆಟಿವ್ ವರದಿ ಬಂದಿದೆ.
ಇನ್ಸ್ಟಾಗ್ರಾಮ್ ಮೂಲಕ ಪರೀಕ್ಷೆಯ ವರದಿ ಮತ್ತು ಸ್ವಾಬ್ ಟೆಸ್ಟ್ನ ಫೋಟೋವನ್ನು ಶೇರ್ ಮಾಡಿದ್ದಾರೆ. "ಕೊರೊನಾ ಟೆಸ್ಟ್ ಮಾಡಲಾಗಿದೆ. ವರದಿ ನೆಗೆಟಿವ್ ಎಂದು ಬಂದಿದ್ದು, 7 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಮುಗಿಯುತ್ತಿದೆ. ಸುರಕ್ಷಿತವಾಗಿರಿ" ಎಂದು ಚಿತ್ರಗಳಿಗೆ ಕಾಷ್ಶನ್ ನೀಡಿದ್ದಾರೆ.
ಈ ಹಿಂದೆ ಪೃಥ್ವಿರಾಜ್ ಮತ್ತು ನಿರ್ದೇಶಕ ಬ್ಲೆಸ್ಸಿ ಸೇರಿ ಸುಮಾರು 58 ಮಂದಿ ಸದಸ್ಯರ ತಂಡ ಮುಂಬರುವ ಮಲಯಾಳಂ ಚಿತ್ರ 'ಆದುಜೀವಿತಂ' ಚಿತ್ರೀಕರಣಕ್ಕೆ ಜೋರ್ಡಾನ್ಗೆ ತೆರಳಿತ್ತು. ಮಾರ್ಚ್ 12ರವರೆಗೂ ಅಲ್ಲಿಯೇ ಇದ್ದ ಇವರು ಮೇ ತಿಂಗಳಲ್ಲಿ ದೇಶಕ್ಕೆ ಹಿಂತಿರುಗಿದ್ದರು. ಬಳಿಕ ಕ್ವಾರಂಟೈನ್ನಲ್ಲಿದ್ದ ಪೃಥ್ವಿ ಮೇ. 29ರಂದು ಇನ್ಸ್ಟಾಗ್ರಾಮ್ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಸಾಂಸ್ಥಿಕ ಕ್ವಾರಂಟೈನ್ ಮುಕ್ತಾಯವಾಗಿದೆ. ಇನ್ನೂ ಮನೆಯಲ್ಲಿ 7 ದಿನ ಕ್ವಾರಂಟೈನ್ ಎಂದು ಬರೆದುಕೊಂಡಿದ್ದಾರೆ.