ಜೈಪುರ (ರಾಜಸ್ಥಾನ): ದೇಶದಾದ್ಯಂತ ಮಕರ ಸಂಕ್ರಾಂತಿಯ ಸಿಹಿ ಸಂಭ್ರಮ ಮನೆ ಮಾಡಿದೆ. ಎಲ್ಲೆಡೆ ಉತ್ಸಾಹ ಸಂತೋಷದಿಂದ ಹಬ್ಬದ ಆಚರಣೆ ಸಾಗಿದೆ.
ಮಕರ ಸಂಕ್ರಾಂತಿಯಂದು ಬಾನೆತ್ತರಕ್ಕೆ ಗಾಳಿಪಟ ಹಾರಿಸುವ ಸಂಪ್ರದಾಯ ದಶಕಗಳಿಂದ ಉಡುಗೊರೆಯಾಗಿ ಬಂದಿದೆ. ಈ ಹಿನ್ನೆಲೆ ಅಂಗಡಿ ಮಾಲೀಕರು ವಿವಿಧ ರೀತಿಯ ಗಾಳಿಪಟಗಳ ಸಂಗ್ರಹ ಇಟ್ಟಿದ್ದು, ಗ್ರಾಹಕರ ಮನೆ ಸೆಳೆಯುತ್ತಿವೆ.
ಇಲ್ಲಿನ ಜೈಪುರದಲ್ಲಿನ ಹಿರಿಯ ಕಲಾವಿದನ ಕೈಚಳಕದಲ್ಲಿ ವಿವಿಧ ಗಾಳಿಪಟಗಳು ತಯಾರಾಗಿದ್ದು, ನೋಡಲು ರಂಗು ರಂಗಾಗಿ ಕಣ್ಮನ ಸೆಳೆಯುತ್ತಿವೆ.
ಸುಮಾರು 40 ವರ್ಷದಿಂದ ಗಾಳಿಪಟ ತಯಾರಿಕೆಯಲ್ಲಿ ತೊಡಗಿಸಿಕೊಂಡಿರುವ ಅಬ್ದುಲ್ ಗಫೂರ್ ಅನ್ಸಾರಿ, ರಂಗು ರಂಗಿನ ಗಾಳಿಪಟ ತಯಾರಿಕೆಯಲ್ಲಿ ನಿಪುಣರಾಗಿದ್ದಾರೆ. ಇದೀಗ ಅವರು ವಿಶೇಷ ಗಾಳಿಪಟಗಳ ತಯಾರಿಸಿದ್ದು, ಬಾನಲ್ಲಿ ಯುದ್ಧ ಮಾಡಲು ಸಿದ್ಧಗೊಂಡಿವೆ.
ವಿಶೇಷವಾಗಿ ರಾಜಕೀಯ ನಾಯಕರು, ಪ್ರಧಾನಿ ಮೋದಿ, ಮುಖ್ಯಮಂತ್ರಿಗಳು, ಸಿನಿಮಾ ನಟರು, ಕ್ರಿಕೆಟಿಗರು ಸೇರಿದಂತೆ ಪ್ರಖ್ಯಾತ ವ್ಯಕ್ತಿಗಳ ಫೋಟೋ ಬಳಸಿ ಗಾಳಿಪಟ ತಯಾರಾಗಿದೆ.
ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಮಾಜಿ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ, ಸಂಸದ ಅಸಾದುದ್ದೀನ್ ಒವೈಸಿ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ನಡುವೆ, ಕ್ಯಾಬಿನೆಟ್ ಸಚಿವ ಪ್ರತಾಪ್ ಸಿಂಗ್ ಖಚಾರಿವಾಸ್ ಅವರ ಗಾಳಿಪಟಗಳು ಸಹ ಜನರನ್ನು ತಮ್ಮೆಡೆಗೆ ಸೆಳೆಯುತ್ತಿವೆ. ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಗಾಳಿಪಟ ಸಹ ಆಕರ್ಷಕವಾಗಿ ತಯಾರಾಗಿದೆ.
ಹಲವು ವರ್ಷಗಳಿಂದ ಇಂತಹ ವಿಭಿನ್ನ ಯೋಚನೆ ಮೂಲಕ ಗಾಳಿಪಟ ತಯಾರಿಸುತ್ತಿದ್ದ ಅನ್ಸಾರಿ ಇದೀಗ ಖ್ಯಾತಿ ಗಳಿಸಿದ್ದಾರೆ. ಅವರ ಗಾಳಿಪಟ ಕೊಳ್ಳಲು ಹಲವು ಭಾಗದಿಂದ ಜನತೆ ಆಗಮಿಸುತ್ತಾರೆ.
ಇದನ್ನೂ ಓದಿ: ಮಕರ ಸಂಕ್ರಾಂತಿಯಂದು ಗೋರಖ್ನಾಥನಿಗೆ ಖಿಚ್ಡಿ ಅರ್ಪಿಸಿದ ಯೋಗಿ.. ಗಂಗೆಯಲ್ಲಿ ಮಿಂದೇಳುತ್ತಿರುವ ಜನ