ಡೆಹ್ರಾಡೂನ್ : 2 ದಿನದ ಅಂತರದಲ್ಲಿ ಉತ್ತರಾಖಂಡ್ ರಾಜ್ಯ ಇಬ್ಬರು ವೀರ ಸೇನಾನಿಗಳನ್ನ ಕಳೆದುಕೊಂಡಿದೆ. ದೇಶಕ್ಕೆ ಇಬ್ಬರು ಮೇಜರ್‌ಗಳನ್ನ ಕೊಟ್ಟಿದ್ದ ಡೆಹ್ರಾಡೂನ್‌ನಲ್ಲೀಗ ಬರೀ ನೀರವ ಮೌನ ಆವರಿಸಿದೆ.
ವೀರ ಮೇಜರ್ ವಿಭೂತಿ ದೌಂಡಿಯಾಲ ಉಗ್ರರ ಜತೆಗಿ ಗುಂಡಿನ ಕಾಳಗದಲ್ಲಿ ಹುತಾತ್ಮರಾಗಿದ್ದಾರೆ. ಫೆಬ್ರವರಿ 14ರಂದು ಜೆಇಎಂ ಉಗ್ರರು ನಡೆಸಿದ್ದ ಆತ್ಮಹತ್ಯೆ ಬಾಂಬ್ ದಾಳಿಯಲ್ಲಿ 40ಕ್ಕೂ ಹೆಚ್ಚು ಸಿಆರ್‌ಪಿಎಫ್‌ನ ಯೋಧರು ಹುತಾತ್ಮರಾಗಿದ್ದರು.
ಡೆಹ್ರಾಡೂನ್‌ನ ನೆಹರೂ ಕಾಲೋನಿ ನಿವಾಸಿ ಮೇಜರ್ ಚಿತ್ರೇಶ ಸಿಂಗ್ ಬಿಸ್ತಾ ಫೆಬ್ರವರಿ 16ರಂದು ರಜೌರಿ ಬಳಿ ಬಾಂಬ್ ನಿಷ್ಕ್ರಿಯಗೊಳಿಸುವಾಗ, ಐಇಡಿ ಬಾಂಬ್ ಆ್ಯಕ್ಟೀವಾಗಿತ್ತು. ಬಾಂಬ್ ಸ್ಫೋಟದಿಂದಾಗಿ ಮೇಜರ್ ಬಿಸ್ತಾ ಸಾವನ್ನಪ್ಪಿದ್ದರು. ಇದಾದ 2 ದಿನದೊಳಗೇ ಅದೇ ಡೆಹ್ರಾಡೂನ್‌ನ ನಾಶವಿಲ್ಲೇ ರಸ್ತೆಯ ನಿವಾಸಿ ಮತ್ತೊಬ್ಬ ಮೇಜರ್ ವಿಭೂತಿ ದೌಂಡಿಯಾಲ ಕೂಡ ಉಗ್ರರ ಜತೆಗಿನ ಕಾಳಗದಲ್ಲಿ ವೀರಮರಣವನ್ನಪ್ಪಿದ್ದಾರೆ.
#WATCH Wife of Major VS Dhoundiyal (who lost his life in an encounter in Pulwama yesterday) by his mortal remains. #Dehradun #Uttarakhand pic.twitter.com/5HWD6RXwnO
— ANI (@ANI) February 19, 2019 " class="align-text-top noRightClick twitterSection" data="
">#WATCH Wife of Major VS Dhoundiyal (who lost his life in an encounter in Pulwama yesterday) by his mortal remains. #Dehradun #Uttarakhand pic.twitter.com/5HWD6RXwnO
— ANI (@ANI) February 19, 2019#WATCH Wife of Major VS Dhoundiyal (who lost his life in an encounter in Pulwama yesterday) by his mortal remains. #Dehradun #Uttarakhand pic.twitter.com/5HWD6RXwnO
— ANI (@ANI) February 19, 2019
55 ರಾಷ್ಟ್ರೀಯ ರೈಫಲ್‌ನಲ್ಲಿ ಮೇಜರಾಗಿದ್ದರು ವಿಭೂತಿ ದೌಂಡಿಯಾಲ. ಮೇಜರ್ ತಂದೆ ಒಪಿ ದೌಂಡಿಯಾಲ ಭಾರತೀಯ ವಾಯು ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ತನ್ನ ಜೀವನವನ್ನ ದೇಶಕ್ಕೆ ಬಹುಪಾಲು ಮುಡಿಪಿಟ್ಟಿದ್ದ ತಂದೆಯ ಪ್ರೀತಿಯ ಒಬ್ಬನೇ ಗಂಡು ಮಗ, ಈಗ ದೇಶಕ್ಕೇ ಪ್ರಾಣವನ್ನ ಅರ್ಪಿಸಿದ್ದಾನೆ. ಇದು ಸ್ವತಃ ಏರ್‌ಫೋರ್ಸ್‌ನಲ್ಲಿದ್ದ ತಂದೆಗೆ ಎದೆತಟ್ಟಿ ಹೇಳಿಕೊಳ್ಳುವ ಗಳಿಗೆಯೇನೋ ನಿಜ. ಆದ್ರೇ, ಮಗನಿಲ್ಲವೆಂಬ ನೋವು ಅವರನ್ನ ಆವರಿಸಿದೆ. ಆದರೂ ತಂದೆ ಕೊನೆಯ ಬಾರಿ ಮಗನಿಗೆ ನಮಿಸಿದ್ದಾರೆ.
ಮೇಜರ್ ದೌಂಡಿಯಾಲ 9 ತಿಂಗಳ ಹಿಂದಷ್ಟೇ ಮದುವೆ ಆಗಿದ್ದರು. ಏಪ್ರಿಲ್ 19, 2018ರಂದು ನಿತಿಕಾ ಕೌಲ್ ಎಂಬುವರ ಕೈಹಿಡಿದಿದ್ದರು. ಒಪಿ ದೌಂಡಿಯಾಲರಿಗೆ ನಾಲ್ಕು ಮಕ್ಕಳು. ಮೂವರು ಹೆಣ್ಣು, ಮೇಜರ್ ವಿಭೂತಿ ದೌಂಡಿಯಾಲ ಒಬ್ಬರೇ ಕೊನೆಯ ಮುದ್ದಿನ ಪುತ್ರ. ಇವತ್ತು ಡೆಹ್ರಾಡೂನ್‌ನಲ್ಲಿ ಸಾವಿರಾರು ಯೋಧರು, ಸೇನಾಧಿಕಾರಿಗಳು ಸೇರಿ ಸಾವಿರಾರು ಮಂದಿ ಅಗಲಿದ ವೀರ ಸೇನಾನಿಗೆ ಅಂತಿಮ ನಮನ ಸಲ್ಲಿಸಿದರು.
ಎಲ್ಲಕ್ಕಿಂತ ಭಾವಪರವಶರಾಗಿದ್ದ ಪತ್ನಿ ನಿತಿಕಾ ಕೌಲ್ ಅಗಲಿದ ಹೆಮ್ಮೆಯ ಸೇನಾ ಪರಾಕ್ರಮಿಗೆ ಸೆಲ್ಯೂಟ್ ಹೊಡೆದರು. ಆದ್ರೇ, ಅವರಲ್ಲಿ ಉಮ್ಮಳಿಸಿ ಬರ್ತಿದ್ದ ದುಃಖ ತಡೆದುಕೊಂಡಿದ್ದರು. ದೇಶಕ್ಕಾಗೇ ಪ್ರಾಣಬಿಟ್ಟ ವೀರನ ಪತ್ನಿ ತಾನು ಅನ್ನೋ ಹೆಮ್ಮೆ ಅವರಲ್ಲಿತ್ತು. ಆದ್ರೇ, ಇನ್ಯಾವತ್ತೂ ತನ್ನ ಪತಿಯ ಮುಖ ನೋಡಲಾಗಲ್ಲವೆಂಬ ನೋವು ಮನದಲ್ಲೇ ಕಾಡ್ತಾಯಿತ್ತು.
ಇಂದೋ -ನಾಳೆಯೋ ಇಲ್ಲ ನಾಲ್ಕಾರು ತಿಂಗಳು ಬಿಟ್ಟಾದರೂ ತನ್ನ ಹೃದಯಾಂತರಾಳದ ಧೀರ ಬರ್ತಾರೆ ಅಂತ ಅಂದ್ಕೊಂಡಿದ್ದರು. ಆದ್ರೇ, ಬಂದಿದ್ದು ಮಾತ್ರ ಹುತಾತ್ಮನಾಗಿ. ಇದು ಅವರಿಗಷ್ಟೇ ನಷ್ಟವಲ್ಲ. ದೇಶಯೊಬ್ಬ ದೇಶವಾಸಿಯ ಮನವೂ ಇದನ್ನ ನೋಡಿ ಮನಸ್ಸು ಭಾರವಾಗುತ್ತಿದೆ.