ಬೆಂಗಳೂರು: ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನವೊಂದು ರನ್ ವೇ ಬಿಟ್ಟು ಪಕ್ಕದ ಗದ್ದೆಯಲ್ಲಿ ಲ್ಯಾಂಡ್ ಆಗಿರುವ ಘಟನೆ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಡೆದಿದೆ.
ಕಳೆದ ನವೆಂಬರ್ 11ರಂದು ಈ ಘಟನೆ ನಡೆದಿದ್ದು, ಪ್ರಯಾಣಿಕರನ್ನ ಹೊತು ತರುತ್ತಿದ್ದ ಗೋ ಏರ್ ವಿಮಾನ ಹವಾಮಾನ ವೈಪರೀತ್ಯದಿಂದಾಗಿ ರನ್ ವೇ ಬಿಟ್ಟು ಪಕ್ಕದ ಗದ್ದೆಗೆ ಲ್ಯಾಂಡ್ ಆಗಿದೆ. ಘಟನೆಯಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಎಲ್ಲರೂ ಸೇಪ್ ಆಗಿದ್ದು, ಘಟನೆಗೆ ಏನು ಕಾರಣ ಎಂದು ತನಿಖೆ ನಡೆಸಲಾಗುತ್ತಿದೆ ಎಂದು ಅಲ್ಲಿನ ಸಿಬ್ಬಂದಿ ತಿಳಿಸಿದ್ದಾರೆ.
ಕಳಪೆ ಮಟ್ಟದ ಹವಾಮಾನವಿದ್ದರೂ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗೋ ಏರ್ 320 ಜೆಟ್ ನಾಗ್ಪುರಕ್ಕೆ ತೆರಳಲು ಟೇಕ್ ಆಫ್ ಆಗಿತ್ತು. ಈ ವೇಳೆ ಇದರಲ್ಲಿ 180 ಪ್ಯಾಸೆಂಜರ್ ಇದ್ದರು ಎಂದು ತಿಳಿದು ಬಂದಿದೆ.
ಇದೀಗ ಘಟನೆಯ ಪ್ರಾಥಮಿಕ ತನಿಖೆ ನಡೆಸಿರುವ ವಿಮಾನಯಾನ ಸಿಬ್ಬಂದಿ ಪೈಲೆಟ್ ಅಮಾನತು ಮಾಡಿ ಆದೇಶ ಹೊರಡಿಸಿದೆ ಎಂದು ತಿಳಿದು ಬಂದಿದೆ.