ETV Bharat / bharat

ಮಹಾತ್ಮಗಾಂಧಿ 72ನೇ ಪುಣ್ಯ ಸ್ಮರಣೆ ... ಸರ್ವ ಧರ್ಮ ಪ್ರಾರ್ಥನೆಗೆ ಅಡ್ಡಿಯಾಗಲಿದೆಯೇ ಸಿಎಎ ಕಾಯ್ದೆ?

author img

By

Published : Jan 30, 2020, 5:56 AM IST

ಮಹಾತ್ಮ ಗಾಂಧಿಯವರ 72ನೇ ಪುಣ್ಯ ಸ್ಮರಣೆ ಹಾಗೂ ಹುತಾತ್ಮರ ದಿನಾಚರಣೆಯ ಅಂಗವಾಗಿ, ರಾಜಘಟ್​​ನ ಗಾಂಧಿ ಸಮಾಧಿಯ ಬಳಿ 'ಸರ್ವ ಧರ್ಮ ಪ್ರಾರ್ಥನೆ' ಹಮ್ಮಿಕೊಳ್ಳಲಾಗಿದೆ.

mahatma-gandhis-death-anniversary
ಮಹಾತ್ಮಗಾಂಧಿ 72ನೇ ಪುಣ್ಯ ಸ್ಮರಣೆ

ನವದೆಹಲಿ: ಮಹಾತ್ಮ ಗಾಂಧಿಯವರ 72ನೇ ಪುಣ್ಯ ಸ್ಮರಣೆ ಹಾಗೂ ಹುತಾತ್ಮರ ದಿನಾಚರಣೆಯ ಅಂಗವಾಗಿ, ರಾಜಘಟ್​​ನ ಗಾಂಧಿ ಸಮಾಧಿ ಬಳಿ 'ಸರ್ವ ಧರ್ಮ ಪ್ರಾರ್ಥನೆ' ನಡೆಯಲಿದೆ.

ಆದರೆ ಇದೇ ವೇಳೆ ವಿದ್ಯಾರ್ಥಿ ಸಂಘಟನೆಗಳು ಮತ್ತು ನಾಗರಿಕ ಸಮುದಾಯಗಳು ರಾಜ್‌ಘಾಟ್‌ನಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆಯ ವಿರುದ್ಧ ತಮ್ಮ ಶಕ್ತಿ ಪ್ರದರ್ಶನ ತೋರಲು ಕರೆ ನೀಡಿವೆ. ಅಲ್ಲದೆ ಪ್ರತಿಭಟನಾಕಾರರು ರಾಜ್‌ಘಾಟ್‌ನಲ್ಲಿ ಮಾನವ ಸರಪಳಿಯನ್ನು ರಚಿಸಲಿದ್ದಾರೆ. ನಂತರ ಶಾಹೀನ್ ಭಾಗ್​ ಹಾಗೂ ಖಜುರಿ ಖಾಸ್​ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ತೀರ್ಮಾನಿಸಿದ್ದಾರೆ.

  • Some organizations have applied for the permission for procession to form human chain in and around Rajghat. Their permissions have been denied as it is not traditional route and informed to the organisers.

    — DCP Central Delhi (@DCPCentralDelhi) January 29, 2020 " class="align-text-top noRightClick twitterSection" data=" ">

"ರಾಜ್‌ಘಾಟ್ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಮಾನವ ಸರಪಳಿಗೆ ಕೆಲವು ಸಂಸ್ಥೆಗಳು ಅನುಮತಿಗಾಗಿ ಅರ್ಜಿ ಸಲ್ಲಿಸಿವೆ ಆದರೆ, ಇದು ಪ್ರತಿಭಟನಾ ಮೆರವಣಿಗೆ ನಡೆಸಲು ಸರಿಯಾದ ಮಾರ್ಗವಲ್ಲವಾದ್ದರಿಂದ ಅನುಮತಿಯನ್ನು ನಿರಾಕರಿಸಲಾಗಿದೆ ಎಂದು ಕೇಂದ್ರ ದೆಹಲಿಯ ಡಿ ಸಿ ಪಿ ಹೇಳಿದ್ದಾರೆ.

ಜಂತರ್ ಮಂತರ್, ರಾಮ್‌ಲೀಲಾ ಮೈದಾನ ಮುಂತಾದ ಪ್ರತಿಭಟನೆಗಳಿಗೆ ಗೊತ್ತುಪಡಿಸಿದ ಸ್ಥಳಗಳಿಗೆ ಅರ್ಜಿ ಸಲ್ಲಿಸಲು ಸಂಘಟಕರನ್ನು ಕೋರಲಾಗಿದೆ ಎಂದು ತಮ್ಮ ಅಧಿಕೃತ ಟ್ವಿಟರ್​ನಲ್ಲಿ ಹೇಳಿದ್ದಾರೆ.

  • Organisers have been requested to apply for designated place for such protests like Jantar Mantar, Ramlila ground etc

'ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಜಾತ್ಯತೀತತೆಯ ಒಗ್ಗಟ್ಟನ್ನು' ಪ್ರದರ್ಶಿಸಲು ರಾಜ್‌ಘಾಟ್‌ನಲ್ಲಿ ಮಾನವ ಸರಪಳಿಯನ್ನು ರಚಿಸುವುದಾಗಿ ಎಡಪಂಥೀಯ ಗುಂಪುಗಳು ಸೋಮವಾರ ಘೋಷಿಸಿದ್ದವು.

ಜನವರಿ 26 ರಂದು ಗಣರಾಜ್ಯೋತ್ಸವದ ಸಂದರ್ಭದಲ್ಲಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಸಿಎಎ ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ಕೇರಳದಲ್ಲಿ ಎಲ್‌ಡಿಎಫ್ ಆಯೋಜಿಸಿದ್ದ 620 ಕಿ.ಮೀ ಉದ್ದದ ಮಾನವ ಸರಪಳಿಯಲ್ಲಿ ಭಾಗವಹಿಸಿ, ಈ ಕಾನೂನು ಈ ದೇಶದ ಜಾತ್ಯತೀತತೆಗೆ ಬೆದರಿಕೆಯಾಗಿದೆ ಎಂದಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.