ETV Bharat / bharat

ಎಲ್ಲೆಡೆ ಗಾಂಧಿ ಜಯಂತಿ ಸಂಭ್ರಮ: ಸ್ವಚ್ಛ ಭಾರತದಿಂದ ಬಾಪೂ ಕನಸು ಸಾಕಾರ! - ಗಾಂಧಿ ಜಯಂತಿ ಇತಿಹಾಸ

ಸ್ವಚ್ಛತೆ ಬಗ್ಗೆ ಗಾಂಧೀಜಿ ಶತಮಾನಗಳ ಹಿಂದೆಯೇ ಯೋಚಿಸಿದ್ದರು. ತಾವೇ ಸ್ವಚ್ಛವಾಗಿರುವುದಷ್ಟೇ ಅಲ್ಲ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಡಲು ಅವರು ಶ್ರಮಿಸಿದ್ದರು.

swach bharath a step towards realizing mahatma dream, swach bharath, swach bharath 2020, gandhi jayanti, gandhi jayanti speech, mahatma gandhi jayanti, gandhi jayanti 2 october, article on gandhi jayanti, importance of gandhi jayanti, gandhi jayanthi celebrations, mahatma gandhi birthday, gandhi jayanti story, gandhi jayanti 2020, mahatma gandhi birth anniversary, gandhi jayanti history, ಸ್ವಚ್ಛ ಭಾರತದಿಂದ ಬಾಪೂ ಕನಸು ಸಾಕಾರ, ಸ್ವಚ್ಛ ಭಾರತ, ಸ್ವಚ್ಛ ಭಾರತ 2020 ಗಾಂಧಿ ಜಯಂತಿ, ಗಾಂಧಿ ಜಯಂತಿ ಭಾಷಣ, ಮಹಾತ್ಮ ಗಾಂಧಿ ಜಯಂತಿ, ಗಾಂಧಿ ಜಯಂತಿ 2 ಅಕ್ಟೋಬರ್, ಗಾಂಧಿ ಜಯಂತಿ ಕುರಿತು ಲೇಖನ, ಗಾಂಧಿ ಜಯಂತಿಯ ಪ್ರಾಮುಖ್ಯತೆ, ಗಾಂಧಿ ಜಯಂತಿ ಆಚರಣೆಗಳು, ಮಹಾತ್ಮ ಗಾಂಧಿ ಜನ್ಮದಿನ, ಗಾಂಧಿ ಜಯಂತಿ ಕಥೆ, ಗಾಂಧಿ ಜಯಂತಿ 2020, ಮಹಾತ್ಮ ಗಾಂಧಿ ಜನ್ಮ ದಿನಾಚರಣೆ, ಗಾಂಧಿ ಜಯಂತಿ ಇತಿಹಾಸ,
ಸ್ವಚ್ಛ ಭಾರತದಿಂದ ಬಾಪೂ ಕನಸು ಸಾಕಾರ
author img

By

Published : Oct 2, 2020, 6:55 AM IST

ಗಾಂಧೀಜಿಯವರ 151ನೇ ಜಯಂತ್ಯುತ್ಸವದ ಎಲ್ಲೆಡೆ ಆಚರಣೆಯಲ್ಲಿದೆ. ದೇಶದ ಸ್ವಾತಂತ್ರ್ಯ ಇತಿಹಾಸದಲ್ಲಿ ಗಾಂಧೀಜಿ ಅವರ ಹೋರಾಟ ಹಾಗೂ ಅವರ ಸಿದ್ಧಾಂತಗಳು ತಮ್ಮದೇ ಆದ ಪ್ರಭಾವ ಬೀರಿದ್ದವು. ಅದರಲ್ಲಿ ಅವರು ದೇಶದ ಮೇಲೆ ಬೀರಿದ ಮೊದಲ ಪ್ರಭಾವ ಅಂದ್ರೆ ಅದು ಸ್ವಚ್ಛತೆ ಮತ್ತು ಶೌಚಾಲಯ ವಿಷಯವಾಗಿ ಅನುಸರಿಸಿದ ನೀತಿಗಳು. ಸ್ವಚ್ಛತೆ ಬಗ್ಗೆ ಅವರು ಹೊಂದಿದ್ದ ಒಳನೋಟ.

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಟದ ನೇತೃತ್ವ ವಹಿಸಿಕೊಂಡಿದ್ದ ಗಾಂಧೀಜಿ ಸ್ವಚ್ಛತೆಯ ರಾಯಭಾರಿಯಾಗಿಯೂ ಕೆಲಸ ಮಾಡಿದ್ದರು. ಸ್ವಚ್ಛತೆ, ಅಸ್ಪೃಶ್ಯತೆ ಹಾಗೂ ಸ್ವಾತಂತ್ರ್ಯ ಈ ಮೂರು ವಿಷಯಗಳಲ್ಲಿ ಗಾಂಧಿ ಏಕಕಾಲಕ್ಕೆ ಮಾಡಿದ್ದು ವಿಶೇಷ. ಪ್ರತಿಯೊಬ್ಬರು ಅವರದ್ದೇ ಆದ ಜಾಡಿಮಾಲಿತ್ವವನ್ನು ಹೊಂದಿರುತ್ತಾರೆ. ಅಂದರೆ ಪ್ರತಿಯೊಬ್ಬ ಕೇವಲ ಸ್ವಚ್ಛವಾಗಿರುವುದಷ್ಟೇ ಅಲ್ಲ, ಅದು ಅವರ ಜವಾಬ್ದಾರಿ ಕೂಡ ಆಗಿರುತ್ತದೆ ಎಂದು ಗಾಂಧಿ ಹೇಳಿದ್ದರು.

ಬರೀ ಮಾತನಾಡುವುದಷ್ಟೇ ಅಲ್ಲ ಅದನ್ನು ಜಾರಿಯಲ್ಲಿ ತರುವುದು ಅಥವಾ ಅನುಸರಿಸುವುದು ಅಷ್ಟೇ ಮುಖ್ಯವಾಗಿರುತ್ತದೆ. ಸ್ವಚ್ಛತೆಯನ್ನು ಉತ್ತೇಜಿಸಲು ಹಲವರು ತಮ್ಮದೇ ಆದ ಅನುಕರಣೀಯ ಮಾನದಂಡಗಳನ್ನು ಪ್ರದರ್ಶಿಸಿದ ಅನೇಕ ಉದಾಹರಣೆಗಳು ಭಾರತದಲ್ಲಿ ಸಾಕಷ್ಟು ಕಂಡು ಬರುತ್ತವೆ. ಈ ವಿಷಯವಾಗಿ ಗಾಂಧೀಜಿ ಅವರ ಈ ಒಂದು ಸನ್ನಿವೇಶ ನೆನಪಿನಲ್ಲಿ ಇಟ್ಟುಕೊಳ್ಳುವಂತಹದ್ದು. ಮಹಾತ್ಮ ದಕ್ಷಿಣ ಆಫ್ರಿಕಾದಲ್ಲಿದ್ದಾಗ, ಅವರು ಒಮ್ಮೆ ಭಾರತಕ್ಕೆ ಭೇಟಿ ನೀಡ್ತಾರೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್​​ನ ಕೋಲ್ಕತ್ತಾ ಅಧಿವೇಶನದಲ್ಲಿ ಪಾಲ್ಗೊಂಡು ಮಾತನಾಡಿ, ದಕ್ಷಿಣ ಆಫ್ರಿಕಾದಲ್ಲಿ ಭಾರತೀಯರನ್ನ ಕೆಟ್ಟದಾಗಿ ಯಾಕೆ ಕಾಣ್ತಾರೆ ಎಂಬ ಬಗ್ಗೆ ಕಾರಣವನ್ನು ಕೊಡ್ತಾರೆ.

ಇನ್ನು ಕಾಂಗ್ರೆಸ್​ ಕ್ಯಾಂಪ್​​ನಲ್ಲಿ ಶೌಚ ವ್ಯವಸ್ಥೆ ತೀರಾ ಕೆಟ್ಟದಾಗಿತ್ತು. ಇದಕ್ಕೆ ಕಾರಣ ಏನು ಅಂತಾ ಗಾಂಧೀಜಿ ಅಲ್ಲಿನ ಸ್ವಯಂ ಸೇವಕರನ್ನು ಪ್ರಶ್ನಿಸಿದ್ದರಂತೆ. ಆಗ ಆ ಸ್ವಯಂ ಸೇವಕ ಇದು ಕಸ ಗೂಡಿಸುವವ ಮಾಡಿದ ಕೆಲಸವೆಂದು ಹೇಳಿದ್ದರಂತೆ. ಹೀಗಾಗಿ ಗಾಂಧೀಜಿ ಸ್ವತಃ ಸ್ವಚ್ಛತೆಗೆ ಇಳಿದರು. ತಾವೇ ಜಾಡಿ ಮಾಲಿ ತೆಗೆದುಕೊಂಡು ಕಸ ಗೂಡಿಸಿದರು. ಪಾಶ್ಚಿಮಾತ್ಯ ಶೈಲಿಯ ಡ್ರೆಸ್​ನಲ್ಲಿದ್ದರೂ ಕಸ ಗೂಡಿಸಿದ್ದನ್ನು ಕಂಡು ಕಾಂಗ್ರೆಸ್​ ಪಾಳಯ ದಂಗಾಗಿ ಹೋಗಿದ್ದರು.

ಇನ್ನು ಮಹಾತ್ಮಗಾಂಧಿ ಭಾರತಕ್ಕೆ ಮರಳಿ ಬಂದ ಮೇಲೆ ಸ್ವಚ್ಛತೆಗಾಗಿ ಸ್ವಯಂ ಸೇವಕರ ಗುಂಪುಗಳನ್ನ ರಚನೆ ಮಾಡಿದರು. ಸಹಜವಾಗಿ ಸ್ವಚ್ಛತೆ ಮಾಡುವವರನ್ನ ಭಾರತದಲ್ಲಿ ಭಂಗಿಗಳೆಂದು ಕರೆಯುತ್ತಿದ್ದರು. ಈ ಕೆಲಸ ಮಾಡುವವರು ಕೆಳ ವರ್ಗದಿಂದಲೇ ಬಂದವರಾಗಿರುತ್ತಿದ್ದರು. ಈ ವ್ಯವಸ್ಥೆಯನ್ನ ನಿಧಾನವಾಗಿ ಬದಲಿಸಿದ ಬಾಪೂ ಮೇಲ್ವರ್ಗದ ಜನರು ಸ್ವಚ್ಛತೆ ಕೆಲಸದಲ್ಲಿ ಭಾಗಿಯಾಗುವಂತೆ ಪ್ರೇರೇಪಿಸಿದರು. ಈ ವಿಷಯದಲ್ಲಿ ಅವರ ಬದ್ಧತೆ ಹಾಗೂ ಪ್ರಭಾವ ಎಲ್ಲೆಡೆ ಆವರಿಸಿತು. ಈ ಮೂಲಕ ಅವರು ಅಸ್ಪೃಶ್ಯತೆ ನಿವಾರಣೆಗೆ ಅಡಿಪಾಯ ಹಾಕಿದರು. ಈ ಮೂಲಕ ಸ್ವಚ್ಛತೆ ವಿಷಯದಲ್ಲಿ ಆಗ ಭಾರತೀಯರು ಹೊಂದಿದ್ದ ದೃಷ್ಟಿಕೋನವನ್ನೇ ಬದಲಾಯಿಸಿದ್ದರು.

ವಾಸ್ತವವಾಗಿ ಮಹಾತ್ಮರ ಈ ಅಭಿಯಾನ ಹಾಗೂ ಕಾಳಜಿ ಆರಂಭವಾಗಿದ್ದೇ ದಕ್ಷಿಣ ಆಫ್ರಿಕಾದಲ್ಲಿ. ಆಫ್ರಿಕಾವೇ ಸ್ವಚ್ಛತೆ ಅಭಿಯಾನಕ್ಕೆ ಮೂಲ ಪ್ರೇರಣೆ. ದಕ್ಷಿಣ ಆಫ್ರಿಕಾದಲ್ಲಿ ಮೂಲ ನಿವಾಸಿಗಳಾದ ನಿಗ್ರೋಗಳ ಬಗ್ಗೆ ಹೊಂದಿದ್ದ ಹಾಗೂ ನೈರ್ಮಲ್ಯದ ಬಗ್ಗೆ ಸೃಷ್ಟಿಸಿದ್ದ ನಕಾರಾತ್ಮಕ ಮನೋಭಾವ ಹೋಗಲಾಡಿಸುವ ಬಗ್ಗೆ ಪ್ರಾಥಮಿಕ ಗಮನ ಹರಿಸಿದ್ದರು. ಇನ್ನು ಭಾರತೀಯರ ವಿಷಯಕ್ಕೆ ಬರುವುದಾದರೆ ಇದನ್ನು ಪ್ರತ್ಯೇಕವಾಗಿಯೇ ಗಮನಿಸಬೇಕಾಗುತ್ತದೆ.

ಈ ಬಗ್ಗೆಯೇ ಗಾಂಧೀಜಿ ಅವರು ದಕ್ಷಿಣ ಆಫ್ರಿಕಾ ಸರ್ಕಾರ ಹಾಗೂ ಅಲ್ಲಿನ ರಾಷ್ಟ್ರೀಯ ಶಾಸಕಾಂಗಕ್ಕೆ ಪತ್ರ ಬರೆದಿದ್ದರು. ಭಾರತೀಯರು ಸ್ವಚ್ಛತೆ ಹಾಗೂ ನೈರ್ಮಲ್ಯ ಕಾಪಾಡಿಕೊಳ್ಳಲು ಶಕ್ತರಾಗಿದ್ದಾರೆ. ಯುರೋಪಿಯನ್​​ ದೇಶಗಳ ನೈರ್ಮಲ್ಯದ ಗುಣಮಟ್ಟಕ್ಕೆ ಸಮಾನವಾಗಿ ಭಾರತೀಯರು ಸ್ವಚ್ಛತೆ ಕಾಪಾಡಿಕೊಳ್ಳಲು ಸಮರ್ಥರಾಗಿದ್ದು, ಅವರಿಗೆ ನೀಡಿದಂತಹ ಅವಕಾಶಗಳನ್ನು ತಮಗೂ ನೀಡುವಂತೆ ಪತ್ರದ ಮೂಲಕ ಒತ್ತಾಯಿಸಿದ್ದರು.

ಇನ್ನು ಗಾಂಧೀಜಿ ಭಾರತಕ್ಕೆ ಬಂದ ಬಳಿಕ ಅತ್ಯಂತ ಹುಮ್ಮಸ್ಸಿನಿಂದ ಸ್ವಚ್ಛತೆ ಹಾಗೂ ನೈರ್ಮಲ್ಯವನ್ನ ಹೆಚ್ಚು ಪ್ರಚುರ ಪಡಿಸಿದರು. ಗಾಂಧೀಜಿ ಅವರು ಮದ್ರಾಸ್‌ನಲ್ಲಿ ಮಾಡಿದ ಒಂದು ಭಾಷಣದಲ್ಲಿ ‘ಶೌಚಾಲಯವು ಡ್ರಾಯಿಂಗ್ ರೂಂನಂತೆ ಸ್ವಚ್ಛವಾಗಿರಬೇಕು” ಎಂದು ಹೇಳುವ ಮಟ್ಟಿಗೆ ಹೋಯಿತು. ಈ ಮೂಲಕ ಅವರು ಭಾರತೀಯರು ವಿದೇಶಿಯರ ಮಟ್ಟಿಗೆ ಸ್ವಚ್ಛವಾಗಿರಬೇಕು ಹಾಗೂ ದೇಶದಲ್ಲಿರುವ ಅಸ್ಪೃಶ್ಯತೆ ಹೋಗಲಾಡಿಸುವ ಪಣತೊಟ್ಟರು. ಅವರಿಂದ ಸ್ವಚ್ಛತೆಗೆ ಪಾಠವನ್ನೂ ಕಲಿತರು.

1920ರ ದಶಕದ ಆರಂಭದಲ್ಲಿ ಅಸಹಕಾರ ಚಳವಳಿಯ ಸಂದರ್ಭದಲ್ಲಿ ಗಾಂಧೀಜಿಯವರು ಸ್ವಚ್ಛತೆ ಮತ್ತು ಸ್ವರಾಜ್ ನಡುವಿನ ನಿಕಟ ಸಂಬಂಧವನ್ನು ಪುನರುಚ್ಚರಿಸಿದರು. 'ನಮ್ಮ ಹುಚ್ಚುತನ' ಎಂಬ ಶಿರ್ಷಿಕೆಯ ಲೇಖನವೊಂದರಲ್ಲಿ "ಸ್ವರಾಜ್​​​ಅನ್ನು ಸ್ವಚ್ಛವಾದ ಧೈರ್ಯಶಾಲಿ ಜನರಿಂದ ಮಾತ್ರ ಪಡೆಯಬಹುದು" ಎಂದಿದ್ದರು.

ಗಾಂಧೀಜಿಯವರ ಪ್ರಕಾರ, ಮುಕ್ತ ಮತ್ತು ಜಾತಿರಹಿತ ಸಮಾಜದ ನಿರ್ಮಾಣವಾಗಬೇಕಾದರೆ ಸ್ವಚ್ಛೆತೆ ಪ್ರಮುಖ ಅಂಶವಾಗಿದೆ ಎಂದಿದ್ದರು. ಅಸ್ಪೃಶ್ಯತೆ ಮತ್ತು ಸ್ವಚ್ಛತೆಯ ಸಮಸ್ಯೆಗಳನ್ನು ಸ್ವಾತಂತ್ರ್ಯ ಮತ್ತು ಸ್ವರಾಜ್‌ನೊಂದಿಗೆ ಸೇರ್ಪಡೆ ಮಾಡಿದ್ದ ಬಾಪೂ, ಮಲಹೊರುವ ಕರ್ಮಚಾರಿಗಳ ಸ್ಥಿತಿಗಳು, ಸಮಾಜದಲ್ಲಿ ಅವರ ಸ್ಥಾನಮಾನ ಮತ್ತು ಅಸ್ಪೃಶ್ಯತೆಯಂತಹ ಸಾಮಾಜಿಕ ಕಳಂಕಗಳ ಕುರಿತ ಪ್ರವಚನಗಳಿಗೆ ಹೊಸ ವ್ಯಾಖ್ಯಾನ ನೀಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.