ETV Bharat / bharat

ಎನ್‌ಒಸಿ ಇಲ್ಲದ ಮೂರು ಖಾಸಗಿ ಆಸ್ಪತ್ರೆಗಳು ಬಂದ್​... ಬಾಂಬೆ ಹೈಕೋರ್ಟ್ ಆದೇಶ ಪಾಲನೆ

ಅಗ್ನಿ ಸುರಕ್ಷತಾ ನಿಯಮಗಳನ್ನು ಪಾಲಿಸದೆ ಕಾರ್ಯನಿರ್ವಹಿಸುತ್ತಿರುವ ಥಾಣೆ ಮಹಾನಗರ ಪಾಲಿಕೆ ವ್ಯಾಪ್ತಿಯ ಮೂರು ಖಾಸಗಿ ಆಸ್ಪತ್ರೆಗಳನ್ನು ಮುಚ್ಚಲಾಗಿದೆ.

Maharashtra seals hospitals without fire safety
ಖಾಸಗಿ ಆಸ್ಪತ್ರೆಗಳು ಬಂದ್
author img

By

Published : Aug 27, 2020, 1:10 PM IST

ಥಾಣೆ(ಮಹಾರಾಷ್ಟ್ರ): ಅಗ್ನಿಶಾಮಕ ಇಲಾಖೆಯಿಂದ ಯಾವುದೇ ನಿರಪೇಕ್ಷಣಾ ಪತ್ರ (ಎನ್‌ಒಸಿ) ಹಾಗೂ ಬಯೋಮೆಡಿಕಲ್ ತ್ಯಾಜ್ಯ ಸಂಸ್ಕರಣಾ ಸೌಲಭ್ಯವಿಲ್ಲದೇ ಕಾರ್ಯನಿರ್ವಹಿಸುತ್ತಿರುವ ಮಹಾರಾಷ್ಟ್ರದ ಮೂರು ಖಾಸಗಿ ಆಸ್ಪತ್ರೆಗಳನ್ನು ಮುಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾಸ್ಕರ್ ನಗರದ ಸಾಯಿ ಸೇವಾ ಆರೋಗ್ಯ ಕೇಂದ್ರ, ಜನ ಸೇವಾ ಆಸ್ಪತ್ರೆ ಮತ್ತು ವಾಘೋಬ ನಗರದ ಶ್ರೀ ಮಾತೋಶ್ರಿ ಆರೋಗ್ಯ ಕೇಂದ್ರಕ್ಕೆ ಸೀಲ್​​ ಮಾಡುವಂತೆ ಥಾಣೆ ಮಹಾನಗರ ಪಾಲಿಕೆ ಬುಧವಾರ ಆದೇಶ ಹೊರಡಿಸಿತ್ತು. ಹೀಗಾಗಿ ಈ ಮೂರು ಆಸ್ಪತ್ರೆಗಳನ್ನು ಮುಚ್ಚಲಾಗಿದೆ. ನಿಯಮಗಳನ್ನು ಪಾಲಿಸದೆ ಕಾರ್ಯ ನಿರ್ವಹಿಸುತ್ತಿರುವುದರಿಂದ ಈ ಹಿಂದೆ ನೋಟಿಸ್ ಕೂಡ ನೀಡಲಾಗಿತ್ತು.

ಅಗ್ನಿಶಾಮಕ ಇಲಾಖೆಯಿಂದ ಎನ್‌ಒಸಿ ಪಡೆಯದ ಮತ್ತು ಬಯೋಮೆಡಿಕಲ್ ತ್ಯಾಜ್ಯ ಸಂಸ್ಕರಣಾ ಸೌಲಭ್ಯಗಳಿಲ್ಲದೆ ಕಾರ್ಯನಿರ್ವಹಿಸುವ ಆಸ್ಪತ್ರೆಗಳನ್ನು ಮುಚ್ಚುವಂತೆ ಬಾಂಬೆ ಹೈಕೋರ್ಟ್ ಈ ಹಿಂದೆ ಆದೇಶ ನೀಡಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.