ಮುಂಬೈ: ಬಾಟಲಿಗೆ ಪೆಟ್ರೋಲ್ ಹಾಕಲಿಲ್ಲ ಎಂಬ ಆಕ್ರೋಶದಲ್ಲಿ ವ್ಯಕ್ತಿಯೊಬ್ಬ ಪೆಟ್ರೋಲ್ ಬಂಕ್‌ನಲ್ಲಿ ಹಾವು ಬಿಟ್ಟು, ಅಲ್ಲಿಂದ ಪರಾರಿಯಾಗಿರುವ ಘಟನೆ ನಡೆದಿದೆ.
ಮಹಾರಾಷ್ಟ್ರದ ಬುಲ್ದಾನ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಇದರ ಸಂಪೂರ್ಣ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಪೆಟ್ರೋಲ್ ಪಂಪ್ಗೆ ಬಂದಿರುವ ವ್ಯಕ್ತಿ ಬಾಟಲಿಗೆ ಪೆಟ್ರೋಲ್ ತುಂಬುವಂತೆ ಒತ್ತಾಯಿಸಿದ್ದಾನೆ. ಆದರೆ ನಿಯಮದ ಪ್ರಕಾರ ಬಾಟಲಿಗೆ ಬಂಕ್ ಸಿಬ್ಬಂದಿ ತೈಲ ತುಂಬಿಸಿಕೊಡುವಂತಿಲ್ಲ. ಹೀಗಾಗಿ ಸಹಜವಾಗಿಯೇ ಸಿಬ್ಬಂದಿ ನಿರಾಕರಿಸಿದ್ದಾರೆ. ಇದರಿಂದ ಕೋಪಗೊಂಡ ವ್ಯಕ್ತಿ ಚೀಲದಲ್ಲಿ ಹಾವು ಹಿಡಿದುಕೊಂಡು ಬಂದಿದ್ದು, ಅದನ್ನು ಪೆಟ್ರೋಲ್ ಬಂಕ್ನಲ್ಲಿದ್ದ ಕಚೇರಿಯೊಳಗೆ ಬಿಟ್ಟು ಹೋಗಿದ್ದಾನೆ.