ಮುಂಬೈ: ನಗರದ ಡಬ್ಬಾವಾಲರ ಸಂಘಟನೆ ಬಹಳ ಬಲವಾಗಿಯೂ, ಹಾಗೂ ಸುವ್ಯವಸ್ಥಿತವಾಗಿಯೂ ಇದೆ. ಈ ಹಿನ್ನೆಲೆ ಅವರ ಅಭಿವೃದ್ಧಿಗೆ ಸರ್ಕಾರ ಮುಂದಾಗಿದೆ. ಪ್ರದಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಡಬ್ಬಾವಾಲಾಗಳಿಗೆ ಮನೆಗಳನ್ನು ನಿರ್ಮಿಸಲಿದೆ ಎಂದು ಮಹಾರಾಷ್ಟ್ರ ಸರ್ಕಾರ ತಿಳಿಸಿದೆ.
ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅವರು ರಾಜ್ಯ ಇಲಾಖೆಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ, ಡಬ್ಬಾವಾಲಾಗಳಿಗೆ ಮನೆಗಳನ್ನು ನಿರ್ಮಿಸಿಕೊಡುವಂತೆ ಆದೇಶಿಸಿದರು. ಅಲ್ಲದೆ, ಮುಂಬೈ ಡಬ್ಬವಾಲಾ ಭವನವನ್ನು ನಿರ್ಮಿಸಲು ಪವಾರ್ ಮುಂದಾಗಿದ್ದಾರೆ.
ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಮುಂಬೈ ಡಬ್ಬಾವಾಲ ಅಸೋಸಿಯೇಶನ್‌ನ ಮುಖ್ಯಸ್ಥ ಸುಭಾಷ್ ತಾಲೇಕರ್, ಇದು ಒಳ್ಳೆಯ ಸುದ್ದಿ. ಈ ನಿರ್ಧಾರ ತೆಗೆದುಕೊಂಡಿದ್ದಕ್ಕಾಗಿ ನಾವು ಅಜಿತ್ ದಾದಾ ಅವರಿಗೆ ಧನ್ಯವಾದ ಅರ್ಪಿಸುತ್ತೇವೆ ಎಂದಿದ್ದಾರೆ.