ಮಹಾರಾಷ್ಟ್ರ: ಕ್ಯಾಬಿನೆಟ್ ವಿಸ್ತರಣೆಯ ಸಮಯದಲ್ಲಿ ಒಂದು ವಿಚಿತ್ರ ಘಟನೆ ಸಂಭವಿಸಿದೆ. ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದ ಕಾಂಗ್ರೆಸ್ ನಾಯಕ ಕೆ.ಸಿ.ಪಾಡ್ವಿ ಯಡವಟ್ಟು ಮಾಡಿಕೊಮಡಿದ್ದು, ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಪ್ರಮಾವ ವಚನ ಸ್ವೀಕಾರದ ವೇಳೆ ಅಫಿಡವಿಟ್‌ನಲ್ಲಿ ಉಲ್ಲೇಖಿಸಿರುವ ಪದಗಳ ಜೊತೆಗೆ ಕೆಲವು ಪದಗಳನ್ನ ಅವರೇ ಸ್ವತಃ ಸೇರಿಸಿಕೊಂಡು ಮಾತನಾಡಿದರು. ಇದರಿಂದ ಕೆರಳಿದ ರಾಜ್ಯಪಾಲ ಕೋಶ್ಯಾರಿ, ನಿಮ್ಮ ಹಿರಿಯ ನಾಯಕರಾದ ಶರದ್ ಪವಾರ್ ಮತ್ತು ಮಲ್ಲಿಕಾರ್ಜುನ್ ಖರ್ಗೆ ಕುಳಿತಿದ್ದಾರೆ ಬರೆದದ್ದನ್ನು ಮಾತ್ರ ಓದಬೇಕು ಎಂದರು.
ಅಲ್ಲದೆ ಮತ್ತೊಮ್ಮೆ ಅಫಿಡವಿಟ್ನಲ್ಲಿರುವುದನ್ನ ಮಾತ್ರ ಓದಿ ಎಂದು ಎರಡನೇ ಬಾರಿ ಪ್ರಮಾಣ ವಚನ ತೆಗೆದುಕೊಳ್ಳುವಂತೆ ಹೇಳಿದ್ರು. ಕೆ.ಸಿ.ಪಾಡ್ವಿ ಮತ್ತೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.