ಪುಣೆ: ಕಾರ್ಟೂನ್ ಶೋ ನೋಡಲು ಬಿಡದಿದ್ದರಿಂದ ನೊಂದು 14 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.
ಪುಣೆಯ ಆದರ್ಶ ಚಾವ್ಲಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಬಾಲಕ ಟಿವಿಯಲ್ಲಿ ಕಾರ್ಟೂನ್ ನೋಡುತ್ತಿದ್ದ ಈ ವೇಳೆ ಆತನನ್ನ ಬೆದರಿಸಿರುವ ತಾಯಿ, ಅದನ್ನ ನೋಡದಂತೆ ವಾರ್ನ್ ಮಾಡಿದ್ದಾಳೆ. ಜತೆಗೆ ಬಾಲಕನ ಅಜ್ಜಿ ಟಿವಿಯಲ್ಲಿ ನ್ಯೂಸ್ ನೋಡಲು ಮುಂದಾಗಿದ್ದು, ಪರಸ್ಪರ ಜಗಳ ನಡೆದ ಕಾರಣ ಟಿವಿ ಆಫ್ ಮಾಡಲಾಗಿದೆ. ಇದರಿಂದ ಮನ ನೊಂದ ಬಾಲಕ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮನೆಯವರು ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಚಿಕಿತ್ಸಾ ವೈಫಲ್ಯದಿಂದ ಆತ ಸಾವಿಗೀಡಾಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಿಕೊಂಡಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.