ಪುಣೆ: ಕಟ್ಟಿಕೊಂಡ ಗಂಡ, ಮಗನ ಸಾವಿನಿಂದ ಖಿನ್ನತೆಗೊಳಗಾಗಿದ್ದ ಮಹಿಳೆಯೋರ್ವಳು ಆಸ್ಪತ್ರೆ ಬಿಲ್ಡಿಂಗ್ನಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಹಾರಾಷ್ಟ್ರ ಪುಣೆಯಲ್ಲಿ ನಡೆದಿದೆ.
ಆಸ್ಪತ್ರೆಯ ಐದನೇ ಅಂತಸ್ತಿನಿಂದ ಬಿದ್ದು 36 ವರ್ಷದ ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದು, ಇದೊಂದು ಅಕಸ್ಮಿಕ ಪ್ರಕರಣವೆಂದು ದಾಖಲು ಮಾಡಿಕೊಂಡಿರುವ ಪೊಲೀಸರು ಇದೀಗ ವಿಚಾರಣೆ ಮುಂದುವರಿಸಿದ್ದಾರೆ.
ಆಸ್ಪತ್ರೆಯಲ್ಲಿ ಮಹಿಳೆಯ ಮತ್ತೊಂದು ಮಗು ಚಿಕಿತ್ಸೆ ಪಡೆದುಕೊಳ್ಳುತ್ತಿತ್ತು. ಮಹಿಳೆ ಸಾವನ್ನಪ್ಪುವುದಕ್ಕೂ ಮೊದಲು ಡೆತ್ನೋಟ್ ಬರೆದಿಟ್ಟಿದ್ದು, ಅದರಲ್ಲಿ ತನ್ನ ಸಾವಿಗೆ ಕಾರಣ ತಿಳಿಸಿದ್ದು, ಮಗುವನ್ನ ಸರಿಯಾಗಿ ನೋಡಿಕೊಳ್ಳಿ ಎಂದು ಬರೆದಿದ್ದಾಳೆ.
ಸೀಮಾ ಬಲಾನಿ ಗಂಡ ಕ್ಯಾನ್ಸರ್ನಿಂದಾಗಿ ಕಳೆದ ಮೂರು ತಿಂಗಳ ಹಿಂದೆ ಸಾವನ್ನಪ್ಪಿದ್ದು, 13 ವರ್ಷದ ಮಗನೋರ್ವ ಕಳೆದ ಭಾನುವಾರ ಕಿಡ್ನಿ ಸಮಸ್ಯೆಯಿಂದಾಗಿ ಇಹಲೋಕ ತ್ಯಜಸಿದ್ದನು. ಇದೀಗ ಆಕೆಯ ಮತ್ತೊಬ್ಬ ಮಗ ಆಸ್ಪತ್ರೆಗೆ ದಾಖಲಾಗಿದ್ದು,ಇದರಿಂದ ಮಹಿಳೆ ಖಿನ್ನತೆಗೊಳಗಾಗಿದ್ದಳು.