ಮುಂಬೈ (ಮಹಾರಾಷ್ಟ್ರ): ಇತ್ತೀಚೆಗೆ ಮುಕ್ತಾಯಗೊಂಡ ಮ್ಯಾಗ್ನೆಟಿಕ್ ಮಹಾರಾಷ್ಟ್ರ 2.0 ಹೂಡಿಕೆದಾರರ ಸಭೆಯಲ್ಲಿ ಚೀನಾದ ಕಂಪನಿಗಳೊಂದಿಗೆ ಸಹಿ ಹಾಕಿದ ಮೂರು ಪ್ರಮುಖ ಒಪ್ಪಂದಗಳನ್ನು ಮಹಾರಾಷ್ಟ್ರ ಸರ್ಕಾರ ತಡೆ ಹಿಡಿದಿದೆ.
ಚೀನಾದ ಕಂಪನಿಗಳು ರಾಜ್ಯದಲ್ಲಿ ಸುಮಾರು 5,000 ಕೋಟಿ ರೂ. ಹೂಡಿಕೆ ಮಾಡುವ ಯೋಜನೆಯಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ನಾವು ಕೇಂದ್ರ ಸರ್ಕಾರದೊಂದಿಗೆ ಸಮಾಲೋಚಿಸಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ಇಂಡೋ - ಚೀನಾ ಗಡಿಯಲ್ಲಿನ ಘರ್ಷಣೆ ಮತ್ತು 20 ಭಾರತೀಯ ಸೈನಿಕರನ್ನು ಚೀನಾ ಕೊಲ್ಲುವ ಮೊದಲು ಈ ಒಪ್ಪಂದಗಳಿಗೆ ಸಹಿ ಹಾಕಲಾಗಿತ್ತು" ಎಂದು ಕೈಗಾರಿಕಾ ಸಚಿವ ಸುಭಾಷ್ ದೇಸಾಯಿ ಹೇಳಿದ್ಧಾರೆ.
ಇನ್ನು ಮುಂದಕ್ಕೆ ಚೀನಾದ ಕಂಪನಿಗಳೊಂದಿಗೆ ಯಾವುದೇ ಒಪ್ಪಂದಗಳಿಗೆ ಸಹಿ ಹಾಕದಂತೆ ವಿದೇಶಾಂಗ ಸಚಿವಾಲಯವು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದೆ ಎಂದು ಅವರು ಹೇಳಿದರು.