ETV Bharat / bharat

ಮಹಾರಾಷ್ಟ್ರ ಹೈಡ್ರಾಮಾ: ಸಿಎಂ ಕುರ್ಚಿ ಹಂಚಿಕೊಂಡ ಶಿವಸೇನೆ,ಎನ್​ಸಿಪಿ, ಕಾಂಗ್ರೆಸ್​ಗೆ ಡೆಪ್ಯುಟಿ ಸಿಎಂ?

ಮಹಾರಾಷ್ಟ್ರದಲ್ಲಿ ಚುನಾವಣಾ ಫಲಿತಾಂಶ ಹೊರಬಿದ್ದಾಗಿನಿಂದಲೂ ಸರ್ಕಾರ ರಚನೆ ಕುರಿತು ಉಂಟಾಗಿರುವ ಹೈಡ್ರಾಮಾ ಕೊನೆಗೊಂಡಿಲ್ಲ. ಇದರ ಮಧ್ಯೆ ಶಿವಸೇನೆ ಜತೆ ಸೇರಿ ಸರ್ಕಾರ ರಚನೆ ಮಾಡಲು ಎನ್​​ಸಿಪಿ+ಕಾಂಗ್ರೆಸ್​ ಮುಂದಾಗಿವೆ.

ಮಹಾರಾಷ್ಟ್ರ ಹೈಡ್ರಾಮಾ
author img

By

Published : Nov 21, 2019, 3:31 AM IST

Updated : Nov 21, 2019, 5:18 AM IST

ಮುಂಬೈ: ಕಳೆದ ಕೆಲ ದಿನಗಳಿಂದ ಮಹಾರಾಷ್ಟ್ರದಲ್ಲಿ ಉಂಟಾಗಿರುವ ಸರ್ಕಾರ ರಚನೆ ಹೈಡ್ರಾಮ ಕೊನೆಗೊಳ್ಳುವ ಎಲ್ಲ ಲಕ್ಷಣ ಗೋಚರವಾಗುತ್ತಿದ್ದು, ಶಿವಸೇನೆ ಇದೀಗ ಎನ್​​ಸಿಪಿ+ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳುವುದು ಕನ್ಫರ್ಮ್​ ಆಗಿದೆ.

ಎನ್​​ಸಿಪಿ ಮುಖ್ಯಸ್ಥ ಶರದ್​ ಪವಾರ್​ ನಿವಾಸದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಸೀಟು ಹಂಚಿಕೆ ಸಹ ಮುಕ್ತಾಯಗೊಂಡಿದೆ ಎಂಬ ಮಾತು ಹೊರಬಿದ್ದಿದ್ದು, ಶಿವಸೇನೆ ಹಾಗೂ ಎನ್​ಸಿಪಿಗೆ ಮುಖ್ಯಮಂತ್ರಿ ಕುರ್ಚಿ ಹಾಗೂ ಕಾಂಗ್ರೆಸ್​ಗೆ ಡೆಪ್ಯುಟಿ ಸಿಎಂ ಹುದ್ದೆ ನೀಡುವುದು ಬಹುತೇಕ ಫೈನಲ್​ ಎಂದು ಹೇಳಲಾಗುತ್ತಿದೆ.

Maharashtra Government formation
ಕೊನೆ ಹಂತದ ಮಾತುಕತೆ

ಸರ್ಕಾರ ರಚನೆಯಾಗುತ್ತಿದ್ದಂತೆ ಆರಂಭದ ಎರಡೂವರೆ ವರ್ಷ ಶಿವಸೇನೆ ಮುಖ್ಯಮಂತ್ರಿ ತದನಂತರ ಎನ್​ಸಿಪಿ ಅಭ್ಯರ್ಥಿ ಮುಖ್ಯಮಂತ್ರಿಯಾಗಲಿದ್ದು, 44 ಕ್ಷೇತ್ರಗಳಲ್ಲಿ ಗೆಲುವು ದಾಖಲು ಮಾಡಿರುವ ಕಾಂಗ್ರೆಸ್​ಗೆ ಐದು ವರ್ಷಗಳ ಕಾಲ ಉಪಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲು ನಿರ್ಧರಿಸಲಾಗಿದೆ ಎನ್ನಲಾಗುತ್ತಿದೆ.

ಇದರ ಜತೆಗೆ 16:15:12 ಫಾರ್ಮುಲಾದೊಂದಿಗೆ ಸರ್ಕಾರ ರಚನೆ ಮಾಡಲು ನಿರ್ಧರಿಸಲಾಗಿದ್ದು, 16 ಕ್ಯಾಬಿನೆಟ್​ ಮಂತ್ರಿಗಳು ಶಿವಸೇನೆಯಿಂದ, 15 ಸಚಿವರು ಎನ್​ಸಿಪಿ ಹಾಗೂ 12 ಸಚಿವರು ಕಾಂಗ್ರೆಸ್​​ನಿಂದ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ ಎನ್ನಲಾಗಿದ್ದು, ಸ್ಪೀಕರ್​ ಸ್ಥಾನ ಕಾಂಗ್ರೆಸ್​ಗೆ ನೀಡಲಾಗುತ್ತದೆ ಎಂದು ತಿಳಿದು ಬಂದಿದೆ.

ಇದೇ ವಿಷಯವಾಗಿ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್​ ಚೌಹಾನ್​, ಸರ್ಕಾರ ರಚನೆ ಕುರಿತು ಮಾತುಕತೆ ಮುಂದುವರಿದಿದ್ದು, ರಾಜ್ಯದಲ್ಲಿ ಸ್ಥಿರ ಸರ್ಕಾರ ನೀಡುವ ವಿಶ್ವಾಸವಿದೆ ಎಂದಿದ್ದಾರೆ.

ಸಭೆಯಲ್ಲಿ ಕಾಂಗ್ರೆಸ್​ ಪಕ್ಷದ ಅಹ್ಮದ್​ ಪಟೇಲ್​,ಜೈರಾಮ್​ ರಮೇಶ್​,ಮಲ್ಲಿಕಾರ್ಜುನ್ ಖರ್ಗೆ,ಪೃಥ್ವಿರಾಜ್​ ಚೌಹಾನ್​,ಕೆಸಿ ವೇಣುಗೋಪಾಲ್​ ಭಾಗಿಯಾಗಿದ್ದರು. ಇದೇ ವೇಳೆ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹ್ಹಾಣ್, ಮೈತ್ರಿ ಏರ್ಪಡುವ ವಿಶ್ವಾಸವಿದ್ದು, ಮಹಾರಾಷ್ಟ್ರದಲ್ಲಿನ ರಾಜಕೀಯ ಅನಿಶ್ಚತತೆ ಕೊನೆಯಾಗಲಿದೆ ಎಂದಿದ್ದಾರೆ.

Intro:Body:

ಮಹಾರಾಷ್ಟ್ರ ಹೈಡ್ರಾಮಾ: ಸಿಎಂ ಕುರ್ಚಿ ಹಂಚಿಕೊಂಡ ಶಿವಸೇನೆ,ಎನ್​ಸಿಪಿ, ಕಾಂಗ್ರೆಸ್​ಗೆ ಡೆಪ್ಯುಟಿ ಸಿಎಂ? 

ಮುಂಬೈ: ಕಳೆದ ಕೆಲ ದಿನಗಳಿಂದ ಮಹಾರಾಷ್ಟ್ರದಲ್ಲಿ ಉಂಟಾಗಿರುವ ಸರ್ಕಾರ ರಚನೆ ಹೈಡ್ರಾಮ ಕೊನೆಗೊಳ್ಳುವ ಎಲ್ಲ ಲಕ್ಷಣ ಗೋಚರವಾಗುತ್ತಿದ್ದು, ಅಂದುಕೊಂಡಿರುವಂತೆ ಶಿವಸೇನೆ ಇದೀಗ ಎನ್​​ಸಿಪಿ+ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳುವುದು ಕನ್ಫರ್ಮ್​ ಆಗಿದೆ. 

ಎನ್​​ಸಿಪಿ ಮುಖ್ಯಸ್ಥ ಶರದ್​ ಪವಾರ್​ ನಿವಾಸದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಸೀಟು ಹಂಚಿಕೆ ಸಹ ಮುಕ್ತಾಯಗೊಂಡಿದೆ ಎಂಬ ಮಾತು ಹೊರಬಿದ್ದಿದ್ದು, ಶಿವಸೇನೆ ಹಾಗೂ ಎನ್​ಸಿಪಿಗೆ ಮುಖ್ಯಮಂತ್ರಿ ಕುರ್ಚಿ ಹಾಗೂ ಕಾಂಗ್ರೆಸ್​ಗೆ ಡೆಪ್ಯುಟಿ ಸಿಎಂ ಹುದ್ದೆ ನೀಡುವುದು ಬಹುತೇಕ ಫೈನಲ್​ ಎಂದು ಹೇಳಲಾಗುತ್ತಿದೆ. 

ಸರ್ಕಾರ ರಚನೆಯಾಗುತ್ತಿದ್ದಂತೆ ಆರಂಭದ ಎರಡೂವರೆ ವರ್ಷ ಶಿವಸೇನೆ ಮುಖ್ಯಮಂತ್ರಿ ತದನಂತರ ಎನ್​ಸಿಪಿ ಅಭ್ಯರ್ಥಿ ಮುಖ್ಯಮಂತ್ರಿಯಾಗಲಿದ್ದು, 44 ಕ್ಷೇತ್ರಗಳಲ್ಲಿ ಗೆಲುವು ದಾಖಲು ಮಾಡಿರುವ ಕಾಂಗ್ರೆಸ್​ಗೆ ಐದು ವರ್ಷಗಳ ಕಾಲ ಉಪಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲು ನಿರ್ಧರಿಸಲಾಗಿದೆ ಎನ್ನಲಾಗುತ್ತಿದೆ. 

ಇದರ ಜತೆಗೆ 16:15:12 ಫಾರ್ಮುಲಾದೊಂದಿಗೆ ಸರ್ಕಾರ ರಚನೆ ಮಾಡಲು ನಿರ್ಧರಿಸಲಾಗಿದ್ದು, 16 ಕ್ಯಾಬಿನೆಟ್​ ಮಂತ್ರಿಗಳು ಶಿವಸೇನೆಯಿಂದ, 15 ಸಚಿವರು ಎನ್​ಸಿಪಿ ಹಾಗೂ 12 ಸಚಿವರು ಕಾಂಗ್ರೆಸ್​​ನಿಂದ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ ಎನ್ನಲಾಗಿದ್ದು, ಸ್ಪೀಕರ್​ ಸ್ಥಾನ ಕಾಂಗ್ರೆಸ್​ಗೆ ನೀಡಲಾಗುತ್ತದೆ ಎಂದು ತಿಳಿದು ಬಂದಿದೆ.

ಸಭೆಯಲ್ಲಿ ಕಾಂಗ್ರೆಸ್​ ಪಕ್ಷದ ಅಹ್ಮದ್​ ಪಟೇಲ್​,ಜೈರಾಮ್​ ರಮೇಶ್​,ಮಲ್ಲಿಕಾರ್ಜುನ್ ಖರ್ಗೆ,ಪೃಥ್ವಿರಾಜ್​ ಚೌಹಾನ್​,ಕೆಸಿ ವೇಣುಗೋಪಾಲ್​ ಭಾಗಿಯಾಗಿದ್ದರು. ಇದೇ ವೇಳೆ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹ್ಹಾಣ್, ಮೈತ್ರಿ ಏರ್ಪಡುವ ವಿಶ್ವಾಸವಿದ್ದು, ಮಹಾರಾಷ್ಟ್ರದಲ್ಲಿನ ರಾಜಕೀಯ ಅನಿಶ್ಚತತೆ ಕೊನೆಯಾಗಲಿದೆ ಎಂದಿದ್ದಾರೆ. 

Conclusion:
Last Updated : Nov 21, 2019, 5:18 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.