ETV Bharat / bharat

ಮಹಾ ಸಂಪುಟ ವಿಸ್ತರಣೆ.. ಪವಾರ್, ಆದಿತ್ಯ ಠಾಕ್ರೆ ಸೇರಿ 36 ಮಂದಿ ಸಚಿವರಾಗಿ ಪದಗ್ರಹಣ - ಅಜಿತ್​ ಪವಾರ್ ಲೇಟೆಸ್ಟ್​ ನ್ಯೂಸ್

ಬಿಜೆಪಿ ಜೊತೆ ಸೇರಿ ಸರ್ಕಾರ ರಚನೆ ಮಾಡಿದ್ದ ಎನ್​ಸಿಪಿ ನಾಯಕ ಅಜಿತ್ ಪವಾರ್ ಡಿಸಿಎಂ ಮತ್ತು ಠಾಕ್ರೆ ಕುಟುಂಬದ ಕುಡಿ ಆದಿತ್ಯ ಠಾಕ್ರೆ ಸೇರಿ 36 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ರು.

36 ಮಂದಿ ಸಚಿವರಾಗಿ ಪದಗ್ರಹಣ ಸ್ವೀಕಾರ,Maha cabinet expansion
36 ಮಂದಿ ಸಚಿವರಾಗಿ ಪದಗ್ರಹಣ ಸ್ವೀಕಾರ
author img

By

Published : Dec 30, 2019, 3:32 PM IST

ಮುಂಬೈ(ಮಹಾರಾಷ್ಟ್ರ): ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಸಚಿವ ಸಂಪುಟ ವಿಸ್ತರಣೆ ಮಾಡಿದ್ದು, ಬಿಜೆಪಿ ಜೊತೆ ಸೇರಿ ಸರ್ಕಾರ ರಚನೆ ಮಾಡಿದ್ದ ಎನ್​ಸಿಪಿ ನಾಯಕ ಅಜಿತ್ ಪವಾರ್ ಉಪ ಮುಖ್ಯಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.

ಅಧಿಕಾರಕ್ಕೆ ಬಂದ 32 ದಿನಗಳ ನಂತರ ಠಾಕ್ರೆ ಸಂಪುಟ ವಿಸ್ತರಣೆಗೊಂಡಿದ್ದು 25 ಸಂಪುಟ ದರ್ಜೆ ಮತ್ತು 10 ಮಂದಿ ರಾಜ್ಯ ಖಾತೆ ಸಚಿರು ಸೇರಿದಂತೆ 36 ಮಂದಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಇನ್ನು ಉದ್ಧವ್​ ಠಾಕ್ರೆ ನಂತರ, ವಿಧಾನಸಭೆಗೆ ಮೊದಲಬಾರಿಗೆ ಆಯ್ಕೆಯಾಗಿರುವ ಠಾಕ್ರೆ ಕುಟುಂಬದ ಕುಡಿ ಆದಿತ್ಯ ಠಾಕ್ರೆ ಕೂಡ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ರು.

ಕಾಂಗ್ರೆಸ್​ ಪಕ್ಷದ ನಾಯಕ ಮತ್ತು ಮಾಜಿ ಸಿಎಂ ಅಶೋಕ್ ಚವ್ಹಾಣ್​, ಎನ್​ಸಿಪಿ ನಾಯಕ ನವಾಬ್​ ಮಲ್ಲಿಕ್, ಕಾಂಗ್ರೆಸ್​ ಪಕ್ಷದ ಅಮಿತ್ ದೇಶಮುಖ್ ಸೇರಿದಂತೆ 36 ಮಂದಿ ಸಚಿವರಾಗಿ ಪದಗ್ರಹನ ಸ್ವೀಕರಿಸಿದ್ರು. ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ನೂತನ ಸಚಿವರಿಗೆ ಪದಗ್ರಹಣ ಬೋಧಿಸಿದರು.

ಅಜಿತ್ ಪವಾರ್ ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವುದು ಎರಡು ತಿಂಗಳಲ್ಲಿ ಇದು ಎರಡನೇ ಬಾರಿ. ನವೆಂಬರ್​ನಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ದೇವೇಂದ್ರ ಫಡ್ನವೀಸ್ ನೇತೃತ್ವದ ಸರ್ಕಾರದಲ್ಲಿ ಉಪ ಮುಖ್ಯಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. 10 ಮಂದಿ ಕಾಂಗ್ರೆಸಿಗರು ಕೂಡ ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.