ಮಾಂಡ್ಸೌರ್ (ಮಧ್ಯಪ್ರದೇಶ): ಮಧ್ಯಪ್ರದೇಶದ ಮಾಂಡ್ಸೌರ್ ಜಿಲ್ಲೆಯ ಮಲ್ಹರ್‌ಗ ಪ್ರದೇಶಕ್ಕೆ ಮಿಡತೆಗಳ ಹಿಂಡು ಬಂದಿದೆ. 'ಕೇಂದ್ರ ಮಿಡತೆ ತಂಡ ಮತ್ತು ಕೃಷಿ ವಿಜ್ಞಾನ ವಿಭಾಗದ ವಿಜ್ಞಾನಿಗಳು ಔಷಧಿ ಸಿಂಪಡಿಸುವ ಮೂಲಕ ಶೇಕಡಾ 60ರಷ್ಟು ಮಿಡತೆಗಳನ್ನು ಹೋಗಲಾಡಿಸಲಾಗಿದೆ' ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಮನೋಜ್ ಪುಷ್ಪ್ ಹೇಳಿದ್ದಾರೆ.
ಮಿಡತೆ ದಾಳಿಯ ಸಾಧ್ಯತೆಯ ಬಗ್ಗೆ ಉತ್ತರ ಪ್ರದೇಶ ಕೃಷಿ ಇಲಾಖೆ ರಾಜಸ್ಥಾನ, ಮಧ್ಯಪ್ರದೇಶ, ಪಂಜಾಬ್, ಹರಿಯಾಣ ಮತ್ತು ರಾಜ್ಯದ ಗಡಿ ಜಿಲ್ಲೆಗಳಿಗೆ ಮಾಹಿತಿ ನೀಡಿ, ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ತಿಳಿಸಿತ್ತು. 'ಮಿಡತೆಗಳ ದಾಳಿಯ ಸಮಯದಲ್ಲಿ ರೈತರು ಡ್ರಮ್ಗಳು, ಪ್ಲೇಟ್‌ಗಳನ್ನು ಬಡಿಯುವ ಮೂಲಕ ಶಬ್ದ ಮಾಡಬೇಕು' ಎಂದು ಹೇಳಿತ್ತು.
ಶಿಫಾರಸು ಮಾಡಿದ ಕೃಷಿ ರಕ್ಷಣಾ ರಾಸಾಯನಿಕಗಳನ್ನು ರೈತರು ಸಿಂಪಡಿಸಬಹುದು ಎಂದು ಹೇಳಲಾಗಿದೆ. ಪ್ರಸಕ್ತ ವರ್ಷದಲ್ಲಿ ಮಿಡತೆಗಳ ಹಿಂಡು ತಮ್ಮ ಸಾಮಾನ್ಯ ಸಮಯ ಜೂನ್ ಮತ್ತು ಜುಲೈಗಿಂತ ಮೊದಲೇ ಭಾರತವನ್ನು ಪ್ರವೇಶಿಸಿವೆ. ಮಿಡತೆಗಳ ಹಿಂಡನ್ನು ನಿಯಂತ್ರಿಸಲು ರಾಜ್ಯಗಳು ವಿವಿಧ ವಿಧಾನಗಳನ್ನು ಅಳವಡಿಸಿಕೊಳ್ಳುತ್ತಿವೆ ಎಂದು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.
ಪಾಕಿಸ್ತಾನದ ಗಡಿಯಲ್ಲಿ ಮಿಡತೆಯನ್ನು ನಿಭಾಯಿಸಲು ಭಾರತವು ಸಂಘಟಿತ ಪ್ರತಿಕ್ರಿಯೆ ಪ್ರಸ್ತಾಪಿಸಿದೆ. ಇದಕ್ಕಾಗಿ ಇಸ್ಲಾಮಾಬಾದ್‌ಗೆ ಮಾಲಾಥಿಯಾನ್ ಎಂಬ ಕೀಟನಾಶಕವನ್ನು ಪೂರೈಸಲು ಸಹಕರಿಸಿದೆ. ಪ್ರತೀ ವರ್ಷ ಮಿಡತೆಗಳ ಹಿಂಡು ಜೂನ್ತಿಂಗಳ ಆರಂಭದಲ್ಲಿ ಪಾಕಿಸ್ತಾನದಿಂದ ಭಾರತಕ್ಕೆ ಆಗಮಿಸುತ್ತವೆ.