ಭೋಪಾಲ್ (ಮಧ್ಯಪ್ರದೇಶ): ನಿಧಿಯ ಬಗ್ಗೆ ಕಟ್ಟು ಕತೆಗಳನ್ನು ಕಟ್ಟಿ, ಜನರನ್ನು ನಂಬಿಸಿ, ಅವರಿಂದ ಹಣ ಪಡೆದು, ನಂತರ ಭೀಕರವಾಗಿ ಕೊಲೆ ಮಾಡುತ್ತಿದ್ದ ಸೀರಿಯಲ್ ಕಿಲ್ಲರ್ನನ್ನು ಮಧ್ಯಪ್ರದೇಶದ ಭೋಪಾಲ್ ಪೊಲೀಸರು ಬಂಧಿಸಿದ್ದಾರೆ.
ಮನೋರಾ ಗ್ರಾಮದ ಮಣಿರಾಂ ಸೇನ್ ಬಂಧಿತ ಆರೋಪಿಯಾಗಿದ್ದು, ಈವರೆಗೆ ಆರು ಮಂದಿಯನ್ನು ಕೊಂದಿರಬೇಕೆಂದು ಅಂದಾಜು ಮಾಡಲಾಗಿದ್ದು, ಭೋಪಾಲ್ ಪೊಲೀಸರಿಂದ ಹೆಚ್ಚಿನ ತನಿಖೆ ನಡೆಯುತ್ತಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಸಿಂಗ್ ಬದೋರಿಯಾ, ಮಣಿರಾಂ ಸೇನ್ ಮೊಬೈಲ್ ಫೋನ್ಗಳನ್ನು ಬಳಕೆ ಮಾಡುತ್ತಿರಲಿಲ್ಲ. ಬದಲಿಗೆ ಟೆಲಿಫೋನ್ ಬೂತ್ಗಳಿಂದ ಕರೆ ಮಾಡುತ್ತಿದ್ದನು.
ಇದನ್ನೂ ಓದಿ: ಸೆಲ್ಫಿ ಸೂಸೈಡ್: ಕಾಲೇಜ್ ಬಿಲ್ಡಿಂಗ್ನಿಂದ ಜಿಗಿದು ಬಿ.ಟೆಕ್ ವಿದ್ಯಾರ್ಥಿ ಆತ್ಮಹತ್ಯೆ
ಪದೇ ಪದೇ ಸ್ಥಳಗಳನ್ನು ಬದಲಾಯಿಸುತ್ತಿದ್ದ ಕಾರಣದಿಂದ ಆತನನ್ನು ಹಿಡಿಯುವುದು ಕಷ್ಟವಾಗುತ್ತಿತ್ತು. ಆದರೂ ಪೊಲೀಸರು ಶ್ರಮ ವಹಿಸಿ ಆತನನ್ನು ಬಂಧಿಸಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಸಿಂಗ್ ಸ್ಪಷ್ಟನೆ ನೀಡಿದ್ದಾರೆ.
ಈ ವ್ಯಕ್ತಿಯ ವಿಚಾರ ಮೊದಲಿಗೆ ಬೆಳಕಿಗೆ ಬಂದಿದ್ದು, ನವೆಂಬರ್ 8, 2020ರಂದು. ಭೋಪಾಲ್ ಹೊರವಲಯದ ಸುಖಿ ಸೇವಾನಿಯಾ ಗ್ರಾಮದಲ್ಲಿ ಆದಿಲ್ ವಹಾವ್ ಎಂಬಾತನ ಶವ ಪತ್ತೆಯಾಗಿದ್ದು, ಆತನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಲಾಗಿತ್ತು.
ಈ ಸಂಬಂಧ ಸುಮಾರು 74 ಮಂದಿಯನ್ನು ವಿಚಾರಣೆ ನಡೆಸಿದ ಪೊಲೀಸರು, ಮಣಿರಾಂ ಎಂಬಾತನಿಗೆ ಆದಿಲ್ ವಹಾವ್ 17 ಸಾವಿರ ರೂಪಾಯಿ ಹಣ ನೀಡಿದ್ದನೆಂದು, ನಿಧಿ ಆಸೆಯನ್ನು ತೋರಿಸಿ ಆತನನ್ನು ಕೊಲೆ ಮಾಡಲಾಗಿದೆ ಎಂದೂ ತಿಳಿದುಬಂದಿತ್ತು.
ಇದಾದ ನಂತರ ತೀವ್ರ ತನಿಖೆ ನಡೆಸಿದರೂ ದೊರಕದ ಕಾರಣದಿಂದ ಅವನನ್ನು ಹಿಡಿದುಕೊಟ್ಟವರಿಗೆ 20 ಸಾವಿರ ರೂಪಾಯಿ ಬಹುಮಾನ ಘೋಷಣೆ ಮಾಡಲಾಗಿತ್ತು.
ಮತ್ತೊಂದು ವಿಚಾರವೆಂದರೆ, ಸುಮಾರು ಐದು ಮಂದಿಯ ಕೊಲೆ ಪ್ರಕರಣದಲ್ಲಿ 2000ನೇ ಇಸವಿಯಲ್ಲಿ ಮಣಿರಾಂ ಸೇನ್ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದು, 2017ರಲ್ಲಿ ಈತ ಬಿಡುಗಡೆಯಾಗಿದ್ದನು.