ETV Bharat / bharat

ಶವಾಗಾರದಲ್ಲಿದ್ದ ಮೃತದೇಹ ಅಸ್ಥಿಪಂಜರವಾಗಿ ಬದಲಾದರೂ ಗಮನ ಹರಿಸದ ಆಸ್ಪತ್ರೆ ಸಿಬ್ಬಂದಿ!

author img

By

Published : Sep 16, 2020, 1:08 PM IST

ಮಧ್ಯಪ್ರದೇಶದ ಅತಿ ದೊಡ್ಡ ಸರ್ಕಾರಿ ಆಸ್ಪತ್ರೆಯಾದ ಮಹಾರಾಜ್ ಯಶ್ವಂತ್ ರಾವ್ ಆಸ್ಪತ್ರೆಯ ಶವಾಗಾರದಲ್ಲಿ ಸ್ಟ್ರೆಚರ್ ಮೇಲೆ ಇರಿಸಲಾಗಿದ್ದ ಮೃತದೇಹವು ಅಸ್ಥಿಪಂಜರವಾಗಿದೆ. ಇಷ್ಟಾದರೂ ಅದರ ಕುರಿತು ಗಮನ ಹರಿಸಲಿಲ್ಲ ಎಂದು ಹೇಳಲಾಗುತ್ತಿದೆ.

deadbody
deadbody

ಇಂದೋರ್ (ಮಧ್ಯಪ್ರದೇಶ): ಶವಸಂಸ್ಕಾರವಾಗದೇ ಆಸ್ಪತ್ರೆಯಲ್ಲಿದ್ದ ಮೃತದೇಹವು ಅಸ್ಥಿಪಂಜರವಾಗಿ ಬದಲಾಗಿರುವ ಘಟನೆ ಇಂದೋರ್​ನ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

ಮಧ್ಯಪ್ರದೇಶದ ಅತಿ ದೊಡ್ಡ ಸರ್ಕಾರಿ ಆಸ್ಪತ್ರೆಯಾದ ಮಹಾರಾಜ್ ಯಶ್ವಂತ್ ರಾವ್ ಆಸ್ಪತ್ರೆಯಲ್ಲಿ (ಎಂವೈಹೆಚ್) ಈ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.

ಇಲ್ಲಿನ ಶವಾಗಾರದಲ್ಲಿ ಸ್ಟ್ರೆಚರ್ ಮೇಲೆ ಇರಿಸಲಾಗಿದ್ದ ಶವವು ಅಸ್ಥಿಪಂಜರವಾಗಿದ್ದು, ದುರ್ವಾಸನೆ ಬರುತ್ತಿದ್ದರೂ ಯಾರೂ ಕೂಡ ಅದರ ಕುರಿತು ಗಮನ ಹರಿಸಲಿಲ್ಲ ಎಂದು ಹೇಳಲಾಗುತ್ತಿದೆ.

ಇದಕ್ಕೆ ಪ್ರತಿಕ್ರಿಯಿಸಿದ ಆಸ್ಪತ್ರೆಯ ಅಧೀಕ್ಷಕರು, ಯಾರು ತಪ್ಪಿತಸ್ಥರೆಂದು ಪತ್ತೆಹಚ್ಚಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಇನ್ನೂ ಅನೇಕ ಶವಗಳನ್ನು ಶವಾಗಾರದಲ್ಲಿ ದೀರ್ಘ ಕಾಲದಿಂದ ಇಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಯಾರೂ ಅದರತ್ತ ಗಮನ ಹರಿಸುತ್ತಿಲ್ಲ.

ಮೃತದೇಹವು ಸ್ಟ್ರೆಚರ್‌ನಲ್ಲಿಯೇ ಅಸ್ಥಿಪಂಜರವಾಗುವುದರಿಂದ ಇಷ್ಟು ದೊಡ್ಡ ಅನಾಹುತ ಸಂಭವಿಸಿದೆ ಮತ್ತು ಅದು ಯಾರ ತಪ್ಪು ಎಂಬ ಪ್ರಶ್ನೆಗಳು ಉದ್ಭವಿಸುತ್ತಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.