ಭೋಪಾಲ್: ಮಧ್ಯಪ್ರದೇಶ ರಾಜಕೀಯ ಹೈಡ್ರಾಮಾ ಮುಂದುವರಿದಿದ್ದು, ಕಮಲ್ನಾಥ್ ಸರ್ಕಾರದ 20 ಮಂತ್ರಿಗಳು ತಮ್ಮ ಸಚಿವ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ್ದಾರೆ.
-
All cabinet ministers present in the meeting with #MadhyaPradesh CM Kamal Nath have tendered resignation; all resignations accepted. pic.twitter.com/NOmCz5BAHo
— ANI (@ANI) March 9, 2020 " class="align-text-top noRightClick twitterSection" data="
">All cabinet ministers present in the meeting with #MadhyaPradesh CM Kamal Nath have tendered resignation; all resignations accepted. pic.twitter.com/NOmCz5BAHo
— ANI (@ANI) March 9, 2020All cabinet ministers present in the meeting with #MadhyaPradesh CM Kamal Nath have tendered resignation; all resignations accepted. pic.twitter.com/NOmCz5BAHo
— ANI (@ANI) March 9, 2020
ಕಾಂಗ್ರೆಸ್ನ 25 ಶಾಸಕರು ಕಾಣೆಯಾಗಿದ್ದು, ಕನಿಷ್ಠ 17 ಶಾಸಕರು ಜ್ಯೋತಿರಾಧಿತ್ಯ ಸಿಂಧಿಯಾ ಅವರನ್ನು ಬೆಂಬಲಿಸುತ್ತಾರೆ ಎಂದು ಹೇಳಲಾಗಿದೆ. ಹೀಗಾಗಿ ಇಂದು ಮುಖ್ಯಮಂತ್ರಿ ಕಮಲ್ನಾಥ್ ತಮ್ಮ ನಿವಾಸದಲ್ಲಿ ತುರ್ತು ಸಚಿವ ಸಂಪುಟ ಸಭೆ ನಡೆಸಿದರು.
ಸಭೆಯಲ್ಲಿ ಹಾಜರಿದ್ದ ಎಲ್ಲಾ 20 ಮಂತ್ರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಎಲ್ಲಾ ರಾಜೀನಾಮೆಗಳನ್ನು ಸ್ವೀಕರಿಸಲಾಗಿದೆ. ಶೀಘ್ರದಲ್ಲೇ ನೂತನ ಸಚಿವ ಸಂಪುಟ ರಚನೆಯಾಗಲಿದೆ ಎಂದು ತಿಳಿದುಬಂದಿದೆ.