ಹೈದರಾಬಾದ್: ಕೋವಿಡ್ -19 ರೋಗಿಗಳಿಗೆ ಚಿಕಿತ್ಸೆ ನೀಡಲು ಎಕ್ಸ್‌ಟ್ರಾಕಾರ್ಪೊರಿಯಲ್ ಮೆಂಬ್ರೇನ್ ಆಕ್ಸಿಜನೇಷನ್ (ಇಸಿಎಂಒ) ಯಂತ್ರವು ಸಹಾಯಕವಾಗಲಿದೆ ಎಂದು ವೆಸ್ಟ್ ವರ್ಜೀನಿಯಾ ವಿಶ್ವವಿದ್ಯಾಲಯ (ಡಬ್ಲ್ಯುವಿಯು) ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ.
ಕೋವಿಡ್-19 ರೋಗಿ ಮೊದಲು ಶ್ವಾಸಕೋಶದ ತೊಂದರೆಗೆ ಒಳಗಾಗುತ್ತಾನೆ. ಶ್ವಾಸಕೋಶವು ಕಾರ್ಯನಿರ್ವಹಿಸದಿದ್ದರೆ, ಮೆದುಳು, ಪಿತ್ತಜನಕಾಂಗ ಮತ್ತು ಇತರ ಅಂಗಗಳಿಗೆ ಸಾಕಷ್ಟು ಆಮ್ಲಜನಕ ತಲುಪುವುದಿಲ್ಲ. ಇಂತಹ ಸಮಸ್ಯೆಯನ್ನು ಈ ಯಂತ್ರ ಬಗೆಹರಿಸಲಿದೆ ಎಂದು ಅದ್ಯಯನದಿಂದ ತಿಳಿದುಬಂದಿದೆ.
ಇನ್ನೊಬ್ಬರ ರಕ್ತವನ್ನು ರೋಗಿಯ ದೇಹಕ್ಕೆ ಪಂಪ್ ಮಾಡುವ ಮೂಲಕ ಈ ಇಸಿಎಂಒ ಕಾರ್ಯನಿರ್ವಹಿಸುತ್ತದೆ. ಈ ರೀತಿಯಾಗಿ ಯಂತ್ರವೂ ಶ್ವಾಸಕೋಶ ಮತ್ತು ಹೃದಯಕ್ಕೆ ವಿಶ್ರಾಂತಿ ಹಾಗೂ ಗುಣಪಡಿಸುವ ಸಮಯವನ್ನು ನೀಡುತ್ತದೆ. ವೆಂಟಿಲೇಟರ್‌ಗಳು ಸಾಕಾಗದೇ ಇರುವಾಗ ಇದು ಕೆಲವು ರೋಗಿಗಳ ಜೀವವನ್ನು ಉಳಿಸಲು ಸಹಾಯವಾಗಲಿದೆ.
ಅಧ್ಯಯನದ ಪ್ರಕಾರ, ಕೊರೊನಾದಿಂದ ತೀವ್ರವಾಗಿ ಶ್ವಾಸಕೋಶ ತೊಂದರೆಗೆ ಒಳಗಾದ 32 ರೋಗಿಗಳಿಗೆ ಈ ಯಂತ್ರವೂ ಸಹಾಯವಾಗಿದೆ ಎಂದು ಸಂಶೋಧನಾ ತಂಡವು ಹೇಳಿದೆ. 22 ರೋಗಿಗಳು ಬದುಕುಳಿದಿದ್ದಾರೆ. 22 ರೋಗಿಗಳಲ್ಲಿ 17 ಮಂದಿ ಇನ್ನೂ ಇಸಿಎಂಒನಲ್ಲಿದ್ದಾರೆ.
"ಇಸಿಎಂಒನ ವೈಯಕ್ತಿಕ ಅಪಾಯಗಳು ಮತ್ತು ಪ್ರಯೋಜನಗಳ ಬಗ್ಗೆ ರೋಗಿಗಳಿಗೆ ಮತ್ತು ಕುಟುಂಬ ಸದಸ್ಯರಿಗೆ ಸಲಹೆ ನೀಡಬೇಕು" ಎಂದು ಡಬ್ಲ್ಯುವಿಯುನ ಇಸಿಎಂಒ ನಿರ್ದೇಶಕ ಮತ್ತು ಸಂಶೋಧನಾ ತಂಡದ ಸದಸ್ಯ ಜೆರೆಮಿಯ ಹಯಂಗಾ ಹೇಳಿದರು.
ಈ ತಂಡದಲ್ಲಿ ಡಬ್ಲ್ಯುವಿಯು ಹಾರ್ಟ್ ಮತ್ತು ವಾಸ್ಕೂಲರ್ ಸಂಸ್ಥೆಯ ಕಾರ್ಯನಿರ್ವಾಹಕ ಅಧ್ಯಕ್ಷರಾದ ವಿನಯ್ ಬಾದ್ವಾರ್, ಎಚ್‌ವಿಐನ ಸಲಹೆಗಾರ ಮತ್ತು ಸ್ಕೂಲ್ ಆಫ್ ಮೆಡಿಸಿನ್‌ನ ಹೃದಯ ಮತ್ತು ಎದೆಯ ಶಸ್ತ್ರಚಿಕಿತ್ಸಕ ಜೆಫ್ರಿ ಜೇಕಬ್ಸ್ ಸೇರಿದ್ದಾರೆ. ಕೇವಲ ಶ್ವಾಸಕೋಶ ತೊಂದರೆ ಇರುವವರು ಇಸಿಎಂಒನಿಂದ ಬೇಗ ಗುಣಮುಖರಾಗಲಿದ್ದಾರೆ.
ಹೃದಯ ಮತ್ತು ಶ್ವಾಸಕೋಶ ತೊಂದರೆ ಇರುವಂತವರು ಈ ಯಂತ್ರದಿಂದ ಗುಣಮುಖರಾಗುವ ಸಾಧ್ಯತೆ ಕಡಿಮೆ ಇದೆ. ಕೋವಿಡ್-19 ರೋಗಿಗಳಿಗೆ-ವಿಶೇಷವಾಗಿ ನಿಗದಿತ ಸ್ಟೀರಾಯ್ಡ್‌ಗಳು-ಇಸಿಎಂಒಗೆ ಉತ್ತಮವಾಗಿ ಪ್ರತಿಕ್ರಿಯಿಸುವ ಸಾಧ್ಯತೆಯಿದೆ. ಇದರರ್ಥ ಇತರ ರೋಗಿಗಳು ಎಂದಿಗೂ ಇಸಿಎಂಒ ಬೆಂಬಲವನ್ನು ಪಡೆಯಬಾರದು ಎಂದಲ್ಲ. ಡಬ್ಲ್ಯುವಿಯು ಎಚ್‌ವಿಐನಲ್ಲಿ, ಎಲ್ಲಾ ರೋಗಿಗಳಿಗೆ ವೈಯಕ್ತಿಕ, ರೋಗಿ-ಕೇಂದ್ರಿತ ಆರೈಕೆಯನ್ನು ನೀಡುವಲ್ಲಿ ನಾವು ಹೆಮ್ಮೆಪಡುತ್ತೇವೆ ಎಂದು ಹಯಂಗಾ ಹೇಳಿದರು.