ETV Bharat / bharat

ನಾಳೆ ಚಂದಿರನಿಗೆ ಗ್ರಹಣ: ಭಾರತದಲ್ಲಿ ಗೋಚರಿಸಲಿದೆಯೇ?

ನಾಳೆ ಹುಣ್ಣಿಮೆ. ಈ ದಿನವೇ ಚಂದಿರನಿಗೆ ಗ್ರಹಣ ಹಿಡಿಯಲಿದೆ. ಈ ಚಂದ್ರಗ್ರಹಣ ಭಾರತದಲ್ಲಿ ಗೋಚರಿದಲಿದೆಯೇ ಎಂಬ ಪ್ರಶ್ನೆ ಹಲವರಲ್ಲಿ ಮೂಡಿದೆ.

lunar eclipse
ಜುಲೈ 5ಕ್ಕೆ ಚಂದಿರನಿಗೆ ಗ್ರಹಣ
author img

By

Published : Jul 4, 2020, 5:40 PM IST

ನವದೆಹಲಿ: ಮತ್ತೊಂದು ಗ್ರಹಣಕ್ಕೆ ಜುಲೈ ತಿಂಗಳು ಸಾಕ್ಷಿಯಾಗುತ್ತಿದೆ. ಪೌರ್ಣಿಮೆಯ ದಿನ ಚಂದಿರನಿಗೆ ಗ್ರಹಣ ಹಿಡಿಯಲಿದೆ. ಈ ಗ್ರಹಣದ ಭಾರತದಲ್ಲಿ ಗೋಚರಿಸಲಿದೆಯೇ ಎಂಬ ಪ್ರಶ್ನೆ ಹಲವರಲ್ಲಿ ಮೂಡಿದೆ. ಇದರ ಪ್ರಭಾವವನ್ನು ಭಾರತದಲ್ಲಿ ನಾವು ನೋಡಲಾಗುವುದಿಲ್ಲ. ಇದನ್ನು ವಿಶೇಷವಾಗಿ ಪೆನ್ಯುಂಬ್ರಲ್‌ ಚಂದ್ರಗ್ರಹಣ ಎಂದು ಕರೆಯಲಾಗುತ್ತದೆ.

ವಿಶ್ವದ ಇತರೆ ಭಾಗಗಳಲ್ಲಿ ಈ ಚಂದ್ರ ಗ್ರಹಣ ಬೆಳಗ್ಗೆ 8.37 ಕ್ಕೆ ಆರಂಭಗೊಂಡು, ಬೆಳಗ್ಗೆ 11.37ಕ್ಕೆ ಮೋಕ್ಷ ಕಾಲವಾಗಲಿದೆ. ಈ ಗ್ರಹಣದ ಒಟ್ಟು ಅವಧಿ 2 ಗಂಟೆ 43 ನಿಮಿಷ 44 ಸೆಕೆಂಡ್ ಗಳಾಗಿರಲಿದೆ. ಇನ್ನು ಕಳೆದ ಜೂನ್ 5 ರಂದು ಚಂದ್ರಗ್ರಹಣ ಸಂಭವಿಸಿದ್ದು, ಜೂನ್ 21ರಂದು ಸೂರ್ಯ ಗ್ರಹಣ ಸಂಭವಿಸಿತ್ತು.

ಏನಿದು ಪೆನ್ಯುಂಬ್ರಲ್‌ ಚಂದ್ರಗ್ರಹಣ..?

ಇದು ಅರೆನೆರಳಿನ ಚಂದ್ರಗ್ರಹಣ ಅಥವಾ ಪೆನ್ಯುಂಬ್ರಲ್‌ ಚಂದ್ರಗ್ರಹಣವಾಗಿದ್ದು ಅಂದರೆ, ಸೂರ್ಯ, ಭೂಮಿ ಮತ್ತು ಚಂದ್ರರು ಸರಳ ರೇಖೆಯಲ್ಲಿರುವುದಿಲ್ಲ. ಭೂಮಿಯ ತೆಳುವಾದ ನೆರಳು ಚಂದ್ರನ ಮೇಲೆ ಬಿದ್ದಾಗ ಅದನ್ನು ನೆರಳು ಚಂದ್ರಗ್ರಹಣವೆಂದು ಕರೆಯಲಾಗುತ್ತದೆ. ಚಂದ್ರಗ್ರಹಣವು ಸೂರ್ಯ, ಭೂಮಿ ಹಾಗೂ ಚಂದ್ರರು ಒಂದೇ ರೇಖೆಯಲ್ಲಿ ಬಂದಾಗ ಸಂಭವಿಸುವ ಒಂದು ಖಗೋಳ ವಿದ್ಯಾಮಾನ. ಆದರೆ ಈ ಬಾರಿಯ ಚಂದ್ರಗ್ರಹಣವು ನೆರಳು ಚಂದ್ರಗ್ರಹಣವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.