ನವದೆಹಲಿ: ದೇಶದಲ್ಲಿ ವಿತರಣೆಗೊಳ್ಳುವ ಎಲ್‌ಪಿಜಿ ಸಿಲಿಂಡರ್ ಬೆಲೆಗಳಲ್ಲಿ ಮತ್ತಷ್ಟು ಇಳಿಕೆಯಾಗಿದೆ. ಪರಿಷ್ಕೃತ ದರ ಇಂದಿನಿಂದಲೇ ಜಾರಿಗೊಳ್ಳುತ್ತಿದೆ.
ಪ್ರತಿ ಸಿಲಿಂಡರ್ ಬೆಲೆಯಲ್ಲಿ ₹162.50 ಕಡಿತ ಮಾಡಲಾಗಿದೆ. ದೆಹಲಿಯಲ್ಲಿ, 14.2 ಕೆ.ಜಿ ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್ ಬೆಲೆ ₹ 744 ರಿಂದ ₹ 581.50ಕ್ಕೆ ಇಳಿಕೆಯಾಗಿದೆ. ಮುಂಬೈಯಲ್ಲಿ ಎಲ್‌ಪಿಜಿ ಸಿಲಿಂಡರ್‌ಗೆ ₹ 579, ಕೋಲ್ಕತ್ತಾದಲ್ಲಿ ₹ 584.50ಕ್ಕೆ ಇಳಿದಿದೆ. ಇನ್ನು ಬೆಂಗಳೂರಿನಲ್ಲಿ ₹585ಕ್ಕೆ ಅಡುಗೆ ಸಿಲಿಂಡರ್ ಲಭ್ಯವಾಗಲಿದೆ.
ಮಾರ್ಚ್ 25ರಿಂದ ದೇಶದಲ್ಲಿ ಲಾಕ್ಡೌನ್ ಹೇರಿಕೆ ಮಾಡಲಾಗಿದ್ದು, ಸಿಲಿಂಡರ್ಗಳ ಬಳಕೆ ಹಾಗೂ ಖರೀದಿ ಅಧಿಕವಾಗಿದ್ದರ ಮಧ್ಯೆ ಕೂಡ ಸತತ ಮೂರನೇ ಸಲ ಸಿಬ್ಸಿಡಿ ಸಿಲಿಂಡರ್ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಇನ್ನು ಸುಮಾರು 8 ಕೋಟಿ ಫಲಾನುಭವಿಗಳಿಗೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಉಚಿತವಾಗಿ ಸಿಲಿಂಡರ್ ನೀಡಲಾಗುತ್ತಿದೆ. ಒಂದು ವರ್ಷದಲ್ಲಿ ಪ್ರತಿ ಕುಟುಂಬ 14.2ಕೆ.ಜಿ ತೂಕದ 12 ಸಿಲಿಂಡರ್ ಬಳಕೆ ಮಾಡಬಹುದಾಗಿದೆ.