ಹೈದರಾಬಾದ್: ಬಾಕ್ಸರ್ ಲೋವ್ಲಿನಾ ಬೊರ್ಗೊಹೈನ್ಗೆ ಕೊರೊನಾ ಸೋಂಕು ದೃಢವಾಗಿದೆ ಎಂದು ಭಾರತದ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ಗುರುವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಎರಡು ಬಾರಿ ವಿಶ್ವ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ವಿಜೇತರಾಗಿರುವ ಇವರು, ಅಕ್ಟೋಬರ್ 15ರಿಂದ ಡಿಸೆಂಬರ್ 5ರವರೆಗೆ 52 ದಿನಗಳ ಕಾಲ ಇಟಲಿ ಮತ್ತು ಫ್ರಾನ್ಸ್‌ಗೆ ಪ್ರಯಾಣಿಸಲಿರುವ 16 ಬಾಕ್ಸರ್‌ಗಳಲ್ಲಿ ಒಬ್ಬರು.
52 ದಿನಗಳ ಕಾಲ ತರಬೇತಿ ಶಿಬಿರಕ್ಕಾಗಿ ಇಟಲಿಗೆ ತೆರಳುವ ಮುನ್ನ ಅನಾರೋಗ್ಯದಿಂದ ಬಳಲುತ್ತಿರುವ ತನ್ನ ತಾಯಿಯನ್ನು ಭೇಟಿಯಾಗಲು 11 ದಿನಗಳ ಕಾಲ ರಜೆಯಲ್ಲಿ ಅಸ್ಸಾಂನ ತನ್ನ ಊರಿಗೆ ಪ್ರಯಾಣಿಸಿದ್ದರು.
"ಪ್ರೋಟೋಕಾಲ್ ಪ್ರಕಾರ ಅಕ್ಟೋಬರ್ 11ರಂದು ಅಸ್ಸೋಂನಿಂದ ಬಂದ ನಂತರ ಅವಳನ್ನು ಪರೀಕ್ಷಿಸಲಾಯಿತು ಮತ್ತು ಆರಂಭಿಕ ಪರೀಕ್ಷೆಯಲ್ಲಿ ಆಕೆಯ ಕೋವಿಡ್ ವರದಿ ನೆಗೆಟಿವ್ ಬಂದಿತ್ತು. ಆದಾಗ್ಯೂ ಅಸ್ಸಾಂನಿಂದ ಹಿಂದಿರುಗಿದ ನಾಲ್ಕು ದಿನಗಳ ನಂತರ ಅಕ್ಟೋಬರ್ 15ರಂದು ಮತ್ತೆ ಪರೀಕ್ಷಿಸಲ್ಪಟ್ಟ ನಂತರ ಅವಳಿಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ" ಎಂದು ಎಸ್‌ಎಐ ಹೇಳಿಕೆಯಲ್ಲಿ ತಿಳಿಸಿದೆ.
ಇನ್ನೂ ಗುವಾಹಟಿಯಿಂದ ಹಿಂದಿರುಗಿದಾಗಿನಿಂದ 23 ವರ್ಷದ ಬಾಕ್ಸರ್ ಕ್ವಾರಂಟೈನ್ನಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಎಸ್ಎಐ ಹೇಳಿದೆ.