ETV Bharat / bharat

ಪ್ರೀತಿಸಿ ಮನೆ ತೊರೆದ ಲವರ್ಸ್​​ಗೆ ಕೊಲೆ ಬೆದರಿಕೆ: ಫೇಸ್​ಬುಕ್​​ನಲ್ಲಿ ಪ್ರೇಮಿಗಳ ಅಳಲು! - ಪ್ರೇಮಿಗಳು ಫೇಸ್​ಬುಕ್​​ನಲ್ಲಿ ಅಳಲು

ಪ್ರೀತಿಸುತ್ತಿದ್ದ ಪ್ರೇಮಿಗಳಿಗೆ ಕುಟುಂಬಸ್ಥರು ಕೊಲೆ ಬೆದರಿಕೆ ಹಾಕಿದ್ದರಿಂದ ಮನೆ ಬಿಟ್ಟಿದ್ದು, ತಮ ಗೋಳು ಫೇಸ್​ಬುಕ್​ ಮೂಲಕ ಹೊರಹಾಕಿದ್ದಾರೆ.

Lovers left home in Keral
Lovers left home in Keral
author img

By

Published : Sep 28, 2020, 5:21 PM IST

ಕೋಯಿಕ್ಕೋಡ್(ಕೇರಳ): ಪರಸ್ಪರ ಪ್ರೀತಿಸುತ್ತಿದ್ದ ಜೋಡಿ ಕುಟುಂಬಸ್ಥರ ವಿರೋಧದಿಂದ ಮನೆ ತೊರೆದಿದ್ದು, ಇದೀಗ ಅವರಿಗೆ ಕುಟುಂಬದವರೇ ಕೊಲೆ ಮಾಡುವ ಬೆದರಿಕೆ ಹಾಕಿದ್ದಾರಂತೆ. ಇದಕ್ಕೆ ಸಂಬಂಧಿಸಿದಂತೆ ಪ್ರೇಮಿಗಳು ಫೇಸ್​​ಬುಕ್​​ನಲ್ಲಿ ತಮ್ಮ ಅಳಲು ಹೇಳಿಕೊಂಡಿದ್ದಾರೆ.

ಕೇರಳದ ಕೋಯಿಕ್ಕೋಡ್​​ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪರಸ್ಪರ ಪ್ರೀತಿಸುತ್ತಿದ್ದ ಆಲಿಯಾ ಹಾಗೂ ಮೊಹಮ್ಮದ್​ ನಿನ್ನೆ ಮನೆ ಬಿಟ್ಟಿದ್ದು, ಆಲಿಯಾ ಕುಟುಂಬದವರು ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲು ಮಾಡಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಇದರ ಮಧ್ಯೆ ಆಲಿಯಾ ಕುಟುಂಬದ ಕೆಲವರು ಮೊಹಮ್ಮದ್​ ಮನೆ ಹಾಗೂ ಅವರ ಸಂಬಂಧಿಕರ ಮನೆಗಳ ಮೇಲೆ ದಾಳಿ ನಡೆಸಿ ಕೆಲವರನ್ನ ಗಾಯಗೊಳಿಸಿದ್ದಾರೆ.

ಫೇಸ್​ಬುಕ್​​ನಲ್ಲಿ ಪ್ರೇಮಿಗಳ ಅಳಲು

ಈ ಮಾಹಿತಿ ಆಲಿಯಾ ಹಾಗೂ ಮೊಹಮ್ಮದ್​ಗೆ ಗೊತ್ತಾಗುತ್ತಿದ್ದಂತೆ ಫೇಸ್​ಬುಕ್​​ನಲ್ಲಿ ತಮ್ಮ ಅಳಲು ಹೇಳಿಕೊಂಡಿದ್ದಾರೆ. ನಾನು ಸ್ವಂತ ಇಚ್ಛೆಯಿಂದ ಮನೆ ತೊರೆದಿದ್ದೇನೆ. ಆದರೆ ನನ್ನ ಕುಟುಂಬಸ್ಥರು ಮೊಹಮ್ಮದ್​ ಸಹೋದರಿ ಹಾಗೂ ಆಕೆಯ ಮಗು ಕೊಲ್ಲುವ ಬೆದರಿಕೆ ಹಾಕಿದ್ದಾರೆ. ಒಂದು ವೇಳೆ, ನಾವು ಸಿಕ್ಕಿಬಿದ್ದರೆ ಅವರು ನಮ್ಮನ್ನು ಕೊಲ್ಲಬಹುದು ಎಂದು ಆಲಿಯಾ ಹೇಳಿಕೊಂಡಿದ್ದಾಳೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.