ಪಶ್ಚಿಮ ಗೋದಾವರಿ(ಆಂಧ್ರ ಪ್ರದೇಶ): ಯುವಕನೊಬ್ಬ ಪ್ರೀತಿಸಿದ ಹುಡುಗಿಗಾಗಿ ಸೆಲ್ ಟವರ್ ಏರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿರುವ ಘಟನೆ ಜಿಲ್ಲೆಯ ಜಂಗಾರೆಡ್ಡಿಗೂಡಂನಲ್ಲಿ ನಡೆದಿದೆ.
ಪ್ರೀತಿಸಿದ ಹುಡುಗಿಗಾಗಿ ರೋಹಿತ್ ಎಂಬ ಯುವಕ ರಾತ್ರಿಯಿಂದಲೇ ಮೊಬೈಲ್ ಟವರ್ ಏರಿ ಧರಣಿ ಕುಳಿತಿದ್ದಾನೆ. ಈ ಸಂಗತಿ ಪೊಲೀಸ್ ಅಧಿಕಾರಿ ಮಲ್ಲೇಶ್ವರ್ ರಾವ್ ಅವರಿಗೆ ತಿಳಿದಿದ್ದು, ಕೂಡಲೇ ಘಟನಾಸ್ಥಳಕ್ಕೆ ದೌಡಾಯಿಸಿದ್ದಾರೆ. ಘಟನೆ ಬಗ್ಗೆ ಮಾತನಾಡಲು ರೋಹಿತ್ಗೆ ಪೊಲೀಸ್ ಅಧಿಕಾರಿ ಕೆಳಗಿಳಿಯುವಂತೆ ಹೇಳಿದ್ದಾರೆ.
ಜೇನು ದಾಳಿ...
ಪೊಲೀಸರ ಮಾತಿಗೆ ಬೆಲೆಕೊಟ್ಟು ರೋಹಿತ್ ಕೆಳಗೆ ಇಳಿಯುತ್ತಿದ್ದ. ಆಗ ಟವರ್ ಇಳಿಯುತ್ತಿದ್ದಂತೆ ರೋಹಿತ್ ಮೇಲೆ ಹೆಜ್ಜೇನು ನೊಣಗಳು ದಾಳಿ ಮಾಡಿವೆ. ಈ ವೇಳೆ ರೋಹಿತ್ ಪಕ್ಕದ ಕಲ್ಯಾಣ ಮಂಟಪದ ಮೇಲೆ ಹಾರಿದ್ದಾನೆ. ಗಾಯಗೊಂಡ ರೋಹಿತ್ನನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನಷ್ಟು ಮಾಹಿತಿ ಲಭ್ಯವಾಗಬೇಕಾಗಿದೆ.