ಶಬರಿಮಲೆ(ಕೇರಳ): ಮಲಯಾಳಂ ಚಿಂಗಂ ವಿಶೇಷಾರ್ಥವಾಗಿ ಐದು ದಿನಗಳ ವಿಶೇಷ ಪೂಜೆಯ ಮುನ್ನಾದಿನದಂದು ಶಬರಿಮಲೆ ಭಗವಾನ್ ಅಯ್ಯಪ್ಪ ದೇವಸ್ಥಾನವನ್ನ ಭಾನುವಾರ ತೆರೆಯಲಾಯಿತು.
ಇಂದು ಬೆಳಗ್ಗೆಯಿಂದಲೇ ಸ್ವಾಮಿ ಅಯ್ಯಪ್ಪ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಕೆ ಮಾಡಲಾಗುತ್ತಿದೆ. ಕೊರೊನಾ ಹಿನ್ನೆಲೆಯಲ್ಲಿ ದೇವಸ್ಥಾನದ ಪ್ರವೇಶ ದ್ವಾರವನ್ನ ಮುಚ್ಚಲಾಗಿದೆ. ಕೋವಿಡ್ ನಿಯಮಗಳನ್ನ ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತಿದೆ. ಕೇವಲ ಅರ್ಚಕರು ಮಾತ್ರ ಸಾಂಪ್ರದಾಯಿಕವಾಗಿ ಪೂಜೆ ನೆರವೇರಿಸುತ್ತಿದ್ದಾರೆ.