ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಯಾರು ಗೆಲ್ತಾರೆ ಎಂಬ ಲೆಕ್ಕಾಚಾರ ಕಾವೇರಿರುವ ಸಂದರ್ಭದಲ್ಲಿಯೇ ಬಿಜೆಪಿ ಮಿತ್ರಪಕ್ಷ ಶಿವಸೇನೆ ಸ್ಪಷ್ಟ ಬಹುಮತದ ವಿಚಾರವಾಗಿ ಅಪಸ್ವರವೆತ್ತಿದೆ.
ರಾಮ್ ಮಾಧವ್ರ ಹೇಳಿಕೆಯನ್ನು ಪುನರುಚ್ಛರಿಸಿರುವ ಶಿವಸೇನೆಯ ನಾಯಕ ಸಂಜಯ್ ರಾವತ್, ಬಿಜೆಪಿ ಸ್ಪಷ್ಟ ಬಹುಮತ ಗಳಿಸಿ ಗದ್ದುಗೆ ಏರುವುದು ಕಷ್ಟ ಎಂದಿದ್ದಾರೆ. ಕಳೆದ ಚುನಾವಣೆಯಂತೆ ಬಿಜೆಪಿ ಈ ಬಾರಿ ಸ್ಪಷ್ಟ ಬಹುಮತ ಸಾಧಿಸುವುದು ಕಷ್ಟಸಾಧ್ಯ. ಸರ್ಕಾರ ರಚನೆ ವೇಳೆ ಮೈತ್ರಿ ಅನಿವಾರ್ಯವಾಗಬಹುದು ಎಂದು ಹೇಳಿದ್ದಾರೆ.
ಈ ಬಾರಿ ಬಿಜೆಪಿ 280-282 ಸ್ಥಾನಗಳನ್ನು ಗೆಲ್ಲುವುದೂ ಕಷ್ಟವಿದೆ. ಆದರೆ ಮಿತ್ರ ಪಕ್ಷಗಳಿರುವ ಎನ್ಡಿಎ ಕೂಟ ಬಹುಮತ ಗಳಿಸಬಹುದು ಎಂದು ರಾವತ್ ಹೇಳಿದ್ದಾರೆ.
ಈ ಮೊದಲು ಬಿಜೆಪಿ ಮುಖ್ಯ ಕಾರ್ಯದರ್ಶಿ ರಾಮ್ ಮಾಧವ್, ಬಿಜೆಪಿ ಸರ್ಕಾರ ರಚಿಸಲು ಮಿತ್ರಪಕ್ಷಗಳ ಸಹಕಾರ ಅಗತ್ಯ. ಬಿಜೆಪಿಯೊಂದೇ 271 ಸ್ಥಾನಗಳಲ್ಲಿ ಗೆದ್ದರೂ ನಮಗೆ ತುಂಬಾ ಖುಷಿಯಾಗುತ್ತೆ ಎಂದು ಹೇಳಿದ್ದರು.