ನವದೆಹಲಿ : ಏಪ್ರಿಲ್ ಮತ್ತು ಮೇ ತಿಂಗಳ ಲಾಕ್‌ಡೌನ್ ಸಮಯದಲ್ಲಿ ಪಾರ್ಲೆ-ಜಿ ಬಿಸ್ಕೇಟ್ ಅತೀ ಹೆಚ್ಚು ಮಾರಾಟವಾಗಿದೆ. ಪ್ರಮುಖ ಆಹಾರ ಕಂಪನಿ ಪಾರ್ಲೆ ಪ್ರಾಡಕ್ಟ್ಸ್ ದಾಖಲೆ ಬರೆದಿದೆ ಎಂದು ಕಂಪನಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಾಂಕ್ರಾಮಿಕ ಸಮಯದಲ್ಲಿ ಬಡವರಿಗೆ, ನಿರ್ಗತಿಕರಿಗೆ ಆಹಾರ ಪರಿಹಾರ ಪ್ಯಾಕೇಜ್‌ಗಳನ್ನು ವಿತರಿಸುವ ಕೆಲಸ ಮಾಡಿದ ಸರ್ಕಾರಿ ಸಂಸ್ಥೆಗಳು ಮತ್ತು ಎನ್‌ಜಿಒಗಳು ಅದರ ಆರ್ಥಿಕ ಸ್ಥಿತಿಗನುಸಾರ ಕೇವಲ 2 ರೂ. ಮೌಲ್ಯದ ಪ್ಯಾಕೇಟ್ ಆದರೂ ಉತ್ತಮ ಗ್ಲೂಕೋಸ್ ಮೂಲವೆಂದು ಪರಿಗಣಿಸಲ್ಪಟ್ಟವು. ಇದರಿಂದ ಪಾರ್ಲೆ-ಜಿ ಬಿಸ್ಕೆಟ್‌ಗೆ ಬೇಡಿಕೆ ಹೆಚ್ಚಿದೆ ಎಂದು ಪಾರ್ಲೆ ಉತ್ಪನ್ನಗಳ ಹಿರಿಯ ವರ್ಗದ ಮುಖ್ಯಸ್ಥ ಮಾಯಾಂಕ್ ಷಾ ತಿಳಿಸಿದ್ದಾರೆ.
ಪಾರ್ಲೆ-ಜಿ ಹೆಚ್ಚಿನ ಭಾರತೀಯರ ಪಾಲಿಗೆ ಕೇವಲ ಬಿಸ್ಕೇಟ್ ಅನ್ನೋದಕ್ಕಿಂತ ಒಂದು ಆರಾಮದಾಯಕ ಆಹಾರ ಪದಾರ್ಥ. ಲಾಕ್ಡೌನ್ನಂತಹ ಅನಿಶ್ಚಿತತೆಯ ಸಮಯದಲ್ಲಿ ಇದನ್ನ ಬಹಳಷ್ಟು ಜನ ಸೇವಿದ್ದಾರೆ. ತನ್ನ ಮಾರುಕಟ್ಟೆ ಪಾಲನ್ನು ಶೇ. 4.5 ರಿಂದ 5ರಷ್ಟು ಹೆಚ್ಚಿಸಿಕೊಂಡಿದೆ. ಇದೊಂದು ಅಸಾಧಾರಣ ಬೆಳವಣಿಗೆಯೇ ಸರಿ ಎಂದು ಷಾ ಅವರು ಅಭಿಪ್ರಾಯಪಟ್ಟಿದ್ದಾರೆ.
ಈಗ ಮಾತ್ರವಲ್ಲ ಹಿಂದೆ ಸಂಭವಿಸಿದ್ದ ಸುನಾಮಿ ಮತ್ತು ಭೂಕಂಪಗಳಂತಹ ಬಿಕ್ಕಟ್ಟಿನ ಸಂದರ್ಭದಲ್ಲೂ ಪಾರ್ಲೆ-ಜಿ ಬಿಸ್ಕೇಟ್‌ಗಳ ಮಾರಾಟ ಹೆಚ್ಚಾಗಿತ್ತು ಅಂತಾನೂ ಹೇಳ್ಕೊಂಡಿದ್ದಾರೆ. ಭಾರತದಲ್ಲಿ ಕೊರೊನಾ ವೈರಸ್ ತೀವ್ರಗೊಂಡಾಗ ಕಂಪನಿಯು ಮೂರು ಕೋಟಿ ಪ್ಯಾಕ್ ಪಾರ್ಲೆ-ಜಿ ಬಿಸ್ಕೇಟ್‌ಗಳನ್ನು ದಾನ ಮಾಡುವುದಾಗಿ ಘೋಷಿಸಿತ್ತು.