ETV Bharat / bharat

ಪುರುಷರ ತಲೆ ಬೋಳಿಸಿದ ಮಹಿಳೆಯರು; ಇದು ಲಾಕ್‌ಡೌನ್‌ ಪರಿಣಾಮ

author img

By

Published : Apr 12, 2020, 5:25 PM IST

ಕೇರಳದ ಕಣ್ಣೂರಿನ ಗ್ರಾಮೀಣ ಪ್ರದೇಶಗಳ ಜನರಿಗೆ ಈ ಲಾಕ್​ಡೌನ್​ನಿಂದ ಹೇರ್​ ಕಟ್ಟಿಂಗ್​ ಮತ್ತು ಶೇವಿಂಗ್​ಗೆ ಯಾವುದೇ ಸಮಸ್ಯೆ ಆಗಿಲ್ಲ ಅನಿಸುತ್ತೆ. ಯಾಕಂದ್ರೆ ಈ ಪ್ರದೇಶದ ಯುವಕರು, ಮುದುಕರು ಹಾಗೂ ಮಕ್ಕಳಿಗೆ ಸೆಲೂನ್​ಗಳಿಗೆ ಹೋಗೋ ಸಮಸ್ಯೆಯೇ ಎದುರಾದಂತಿಲ್ಲ. ಇವರ ಮನೆಯಲ್ಲಿರೋ ಮಹಿಳೆಯರ ಮುಂದೆ ಬಂದು ಕುಳಿತ್ರೆ ಸಾಕು, ಇವರ ಹೇರ್​ ಕಟ್​ ಆಗಿಬಿಡುತ್ತೆ. ಮಹಿಳೆಯರೇ ಖುದ್ದು ಪುರುಷರ ಹೇರ್​ ಟ್ರಿಮ್​ ಮಾಡಿ ಖರ್ಚನ್ನೂ ಉಳಿಸಿದ್ದಾರೆ.

hair cut
ಕ್ಷೌರ ಕಾರ್ಯ

ಕಣ್ಣೂರು: ಲಾಕ್​ಡೌನ್,​ ಎಲ್ಲವನ್ನೂ ಲಾಕ್​ ಮಾಡಿದೆ. ಜನರನ್ನು ಮಾತ್ರವೇ ಮನೆಯಲ್ಲಿ ಕೂಡಿಹಾಕಿದ್ದಲ್ಲದೆ. ಆತನಿಗೆ ಬೇಕಾದ ಅಗತ್ಯ ಸೌಲಭ್ಯವೂ ಸಿಗದಂತಾಗಿದೆ. ಇದರಲ್ಲಿ ಪುರುಷರಿಗೆ ತುಂಬಾ ಅಗತ್ಯವಾದ ಸೆಲೂನ್​ ಕೂಡಾ ಸೇರಿದೆ.

ಹೌದು, ಪುರುಷರಿಗೆ ಕನಿಷ್ಟ ತಿಂಗಳಿಗೆ ಒಂದರಿಂದ ಎರಡು ಬಾರಿಯಾದ್ರೂ ಹೇರ್​ ಕಟ್ಟಿಂಗ್​ ಮತ್ತು ಶೇವಿಂಗ್​ ಮಾಡಬೇಕಾಗುತ್ತದೆ. ಆದ್ರೆ ಲಾಕ್​ಡೌನ್​ನಿಂದಾಗಿ ಸೆಲೂನ್​, ಮೆನ್ಸ್​ ಬ್ಯೂಟಿ ಪಾರ್ಲರ್​ಗಳ ಬಾಗಿಲು ಮುಚ್ಚಿವೆ. ಹೀಗಾಗಿ ಪುರುಷರು ಮನೆಯಲ್ಲೇ ಹೇರ್​ ಕಟ್ಟಿಂಗ್​ ಹಾಗೂ ಶೇವಿಂಗ್ ಮಾಡುವ ಅನಿವಾರ್ಯ ಬಂದಿದೆ.

ಮಹಿಳೆಯರಿಂದಲೇ ಪುರುಷರ ಕ್ಷೌರ ಕಾರ್ಯ

ಲಾಕ್​ಡೌನ್​ ಆರಂಭದ ವೇಳೆ ಹೇರ್​ ಕಟ್​ ಮಾಡಿಸಿರುವವರೆಲ್ಲಾ ಈಗ ಎರಡನೇ ಬಾರಿಗೆ ಮತ್ತೆ ತಮ್ಮ ಹೇರ್​ ಕಟ್​ ಮಾಡಿಸಿಕೊಳ್ಳಲು ಮಹಿಳೆಯರ ಮುಂದೆ ಬಂದು ಕುಳಿತಿದ್ದಾರೆ. ಮಹಿಳೆಯರು ಕೂಡಾ ಈ ಬಾರ್ಬರ್​ ಕೆಲಸವನ್ನು ಎಂಜಾಯ್​ ಮಾಡುತ್ತಿದ್ದಾರಂತೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.