ETV Bharat / bharat

ಈಶಾನ್ಯ ರಾಜ್ಯಗಳಲ್ಲಿದೆ ಕಟ್ಟುನಿಟ್ಟಿನ ಲಾಕ್​​ಡೌನ್​: ಕೊರೊನಾ ಸಮರಕ್ಕೆ 25 ಕೋಟಿ ಬಿಡುಗಡೆ - ಜಿತೇಂದ್ರ ಸಿಂಗ್​

ಭಾರತದ ಈಶಾನ್ಯ ರಾಜ್ಯಗಳು ಕೊರೊನಾ ವಿರುದ್ಧ ಹೋರಾಡುವ ಸಲುವಾಗಿ ಸುಮಾರು 25 ಕೋಟಿ ರೂಪಾಯಿಗಳನ್ನು ಈಶಾನ್ಯ ರಾಜ್ಯಗಳ ಅಭಿವೃದ್ದಿ ಇಲಾಖೆ ಹಾಗೂ ಈಶಾನ್ಯ ಮಂಡಳಿಗಳು ಬಿಡುಗಡೆ ಮಾಡಿವೆ.

north east states
ಈಶಾನ್ಯ ರಾಜ್ಯಗಳು
author img

By

Published : Apr 6, 2020, 4:05 PM IST

ಅಗರ್ತಲಾ (ತ್ರಿಪುರ): ಸಿಕ್ಕಿ ಸೇರಿದಂತೆ 8 ಈಶಾನ್ಯ ರಾಜ್ಯಗಳಲ್ಲಿ ಕಟ್ಟುನಿಟ್ಟಾಗಿ ಲಾಕ್​ಡೌನ್​ ಪಾಲಿಸಲಾಗುತ್ತಿದೆ ಎಂದು ಈಶಾನ್ಯ ರಾಜ್ಯಗಳ ಅಭಿವೃದ್ದಿ ಸಚಿವ ಜಿತೇಂದ್ರ ಸಿಂಗ್​ ಸ್ಪಷ್ಟಪಡಿಸಿದ್ದಾರೆ. ಅಧಿಕೃತ ಪತ್ರಿಕಾ ಹೇಳಿಕೆಯಲ್ಲಿ ಈ ರೀತಿಯಾಗಿ ಉಲ್ಲೇಖಿಸಿರುವ ಅವರು ಲಾಕ್​ಡೌನ್ ಹಾಗೂ ಸಾಮಾಜಿಕ ಅಂತರವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗಿದೆ. ಅದ್ರಲ್ಲೂ ಗಡಿ ಪ್ರದೇಶದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.

ಇದರ ಜೊತೆಗೆ ಈಶಾನ್ಯ ರಾಜ್ಯಗಳ ಅಭಿವೃದ್ದಿ ಇಲಾಖೆ ಹಾಗೂ ಈಶಾನ್ಯ ಮಂಡಳಿಯಿಂದ ಈ ರಾಜ್ಯಗಳು ಕೊರೊನಾ ವಿರುದ್ಧ ಹೋರಾಡುವ ಸಲುವಾಗಿ ಸುಮಾರು 25 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ.

ಈ ನಿಧಿಗೆ ಹಾಗೂ ಕೇಂದ್ರ ಸರ್ಕಾರ ಘೋಷಿಸುವ ಪ್ಯಾಕೇಜ್​ಗೆ ಯಾವುದೇ ಸಂಬಂಧವಿಲ್ಲ. ರಾಜ್ಯಗಳು ತುಂಬಾ ಸುಲಭವಾಗಿ ಈ ನಿಧಿಯನ್ನು ಬಳಸಿಕೊಳ್ಳಬಹುದಾಗಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.

25 ಕೋಟಿ ರೂಪಾಯಿಯಲ್ಲಿ ಅಸ್ಸಾಂಗೆ 5 ಕೋಟಿ, ಅರುಣಾಚಲ ಪ್ರದೇಶಕ್ಕೆ 3.25 ಕೋಟಿ, ತ್ರಿಪುರಾ, ಮಿಜೋರಾಂ, ಮೇಘಾಲಯ, ಮಣಿಪುರ, ಹಾಘೂ ನಾಗಾಲ್ಯಾಂಡ್​ ರಾಜ್ಯಗಳಿಗೆ ತಲಾ ಮೂರು ಕೋಟಿ ರೂಪಾಯಿ ಹಾಗೂ ಸಿಕ್ಕಿಂಗೆ 1.75 ಕೋಟಿ ರೂಪಾಯಿ ನೀಡಲಾಗಿದೆ.

ಕೊರೊನಾ ವಿರುದ್ಧ ಮುಂಜಾಗ್ರತೆಗಾಗಿ ಕೇಂದ್ರ ಗೃಹ ಇಲಾಖೆ ಮಾರ್ಚ್ 15ರಿಂದ ಈಶಾನ್ಯ ರಾಜ್ಯಗಳಿಗೆ ಹೊಂದಿಕೊಂಡಿರುವ ಚೀನಾ, ಮಯನ್ಮಾರ್​, ಬಾಂಗ್ಲಾದೇಶ, ನೇಪಾಳ, ಭೂತಾನ್​ ಗಡಿಗಳನ್ನು ನಿರ್ಬಂಧಿಸಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.