ETV Bharat / bharat

ಮುಂಬೈ ಬಳಿ ಹಳಿ ತಪ್ಪಿದ ರೈಲಿನ ಬೋಗಿ!

ಕೇಂದ್ರ ರೈಲ್ವೆ ಮಾರ್ಗದಲ್ಲಿ ಥಾಣೆ ಜಿಲ್ಲೆಯ ಸಮೀಪವಿರುವ ಅಟ್ಗಾಂವ್ ನಿಲ್ದಾಣವನ್ನು ಸಮೀಪಿಸುತ್ತಿರುವಾಗ ಸ್ಥಳೀಯ ರೈಲಿನ ಒಂದು ಬೋಗಿ ಹಳಿ ತಪ್ಪಿದೆ. ಈ ಘಟನೆಯಿಂದಾಗಿ ಕಲ್ಯಾಣ್-ಕಸರ ಮಾರ್ಗದಲ್ಲಿ ರೈಲುಗಳ ಸಂಚಾರಕ್ಕೆ ಅಡ್ಡಿಯಾಗಿದ್ದು, ಯಾವುದೇ ಸಾವು-ನೋವು ವರದಿಯಾಗಿಲ್ಲ.

train
train
author img

By

Published : Sep 19, 2020, 10:46 AM IST

ಮುಂಬೈ: ಮುಂಬೈನಿಂದ 95 ಕಿ.ಮೀ. ದೂರದಲ್ಲಿರುವ ಅಟ್ಗಾಂವ್ ನಿಲ್ದಾಣದ ಬಳಿ ಸ್ಥಳೀಯ ರೈಲಿನ ಒಂದು ಬೋಗಿ ಇಂದು ಬೆಳಗ್ಗೆ ಹಳಿ ತಪ್ಪಿದ್ದು, ಯಾವುದೇ ಪ್ರಯಾಣಿಕರು ಗಾಯಗೊಂಡಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಟ್ಗಾಂವ್ ನಿಲ್ದಾಣವು ಕೇಂದ್ರ ರೈಲ್ವೆ (ಸಿಆರ್) ಮಾರ್ಗದ ನೆರೆಯ ಥಾಣೆ ಜಿಲ್ಲೆಯಲ್ಲಿದೆ. ರೈಲು ಕಸರ ನಿಲ್ದಾಣಕ್ಕೆ ಹೋಗುತ್ತಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ.

"ಅಟ್ಗಾಂವ್ ನಿಲ್ದಾಣದ ಬಳಿ ಬೆಳಗ್ಗೆ 7.28ರ ಸುಮಾರಿಗೆ ರೈಲಿನ ಒಂದು ಬೋಗಿ ಹಳಿ ತಪ್ಪಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಯಾರೂ ಕೂಡ ಗಾಯಗೊಂಡಿರುವ ಬಗ್ಗೆ ವರದಿಯಾಗಿಲ್ಲ" ಎಂದು ಸಿಆರ್ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಶಿವಾಜಿ ಸುತಾರ್ ತಿಳಿಸಿದ್ದಾರೆ.

ಪ್ರಸ್ತುತ ರಾಷ್ಟ್ರೀಕೃತ ಬ್ಯಾಂಕ್ ಮತ್ತು ವಿವಿಧ ರಾಜ್ಯ ಮತ್ತು ಕೇಂದ್ರ ಸರ್ಕಾರಿ ಕಚೇರಿಗಳ ನೌಕರರೊಂದಿಗೆ ಅಗತ್ಯ ಮತ್ತು ತುರ್ತು ಸೇವೆಗಳ ಸಿಬ್ಬಂದಿಗೆ ಮಾತ್ರ ಮುಂಬೈನ ಸ್ಥಳೀಯ ರೈಲುಗಳಲ್ಲಿ ಪ್ರಯಾಣಿಸಲು ಅವಕಾಶವಿದೆ.

ರೈಲು ಅಟ್ಗಾಂವ್ ನಿಲ್ದಾಣ ಸಮೀಪಿಸುತ್ತಿರುವಾಗ ಹಳಿ ತಪ್ಪಿದ್ದು, ಕಲ್ಯಾಣ್ - ಕಸರ ಮಾರ್ಗದಲ್ಲಿ ರೈಲುಗಳ ಸಂಚಾರಕ್ಕೆ ಅಡ್ಡಿಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.