ಕಾನ್ಪುರ (ಉತ್ತರ ಪ್ರದೇಶ): ಎಂಟು ಪೊಲೀಸರ ಹತ್ಯೆಗೆ ಕಾರಣವಾಗಿದ್ದ ಕಾನ್ಪುರ ಎನ್ಕೌಂಟರ್ನ ಪ್ರಮುಖ ಆರೋಪಿ, ಮೋಸ್ಟ್ ವಾಂಟೆಡ್ ವಿಕಾಸ್ ದುಬೆಯನ್ನು ಎನ್‌ಕೌಂಟರ್‌ನಲ್ಲಿ ಉತ್ತರ ಪ್ರದೇಶದ ಸ್ಪೆಷಲ್ ಟಾಸ್ಕ್ ಫೋರ್ಸ್ ಪೊಲೀಸರು ಹತ್ಯೆ ಮಾಡಿದ್ದಾರೆ.
ನಿನ್ನೆ ಮಧ್ಯ ಪ್ರದೇಶದ ಉಜ್ಜೈನಿಯಲ್ಲಿ ಸೆರೆಸಿಕ್ಕಿದ್ದ ದುಬೆಯನ್ನು ಇಂದು ಉತ್ತರ ಪ್ರದೇಶದ ಕಾನ್ಪುರಕ್ಕೆ ಕರೆತರುವ ವೇಳೆ ಪೊಲೀಸ್ ವಾಹನ ಪಲ್ಟಿಯಾಗಿದೆ. ಈ ವೇಳೆ, ಆತ ಪರಾರಿಯಾಗಲು ಯತ್ನಿಸಿದ್ದು, ಪೊಲೀಸರು ಮತ್ತು ವಿಕಾಸ್ ದುಬೆ ನಡುವೆ ಗುಂಡಿನ ಚಕಮಕಿ ನಡೆದಿದೆ.
ಎನ್‌ಕೌಂಟರ್‌ನಲ್ಲಿ ದುಬೆ ಹತನಾಗಿದ್ದರೆ, ನಾಲ್ವರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಗಾಯಾಳು ಪೊಲೀಸರನ್ನು ಕಾನ್ಪುರದ ಲಾಲಾ ಲಜಪತ್ ರಾಯ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ, ಇಲ್ಲಿ ಕಾನೂನು ತನ್ನ ಕಾರ್ಯ ಮಾಡಿದೆ. ನಿನ್ನೆಯ ಅರೆಸ್ಟ್ ಹಾಗೂ ಇಂದಿನ ಎನ್ಕೌಂಟರ್ ಬಗ್ಗೆ ಪ್ರಶ್ನಿಸಿದವರಿಗೆ ವಿಷಾದ ಮತ್ತು ನಿರಾಶೆಯಾಗಿದೆ. ದುಬೆಯನ್ನು ಬಂಧಿಸಿ, ಯುಪಿ ಪೊಲೀಸರಿಗೆ ಆತನನ್ನು ಹಸ್ತಾಂತರಿಸಿ ಮಧ್ಯ ಪ್ರದೇಶ ಪೊಲೀಸರು ತಮ್ಮ ಕರ್ತವ್ಯ ಮಾಡಿದ್ದಾರೆ ಎಂದು ಹೇಳಿದ್ದಾರೆ.
-
दरअसल ये कार नहीं पलटी है, राज़ खुलने से सरकार पलटने से बचाई गयी है.
— Akhilesh Yadav (@yadavakhilesh) July 10, 2020 " class="align-text-top noRightClick twitterSection" data="
">दरअसल ये कार नहीं पलटी है, राज़ खुलने से सरकार पलटने से बचाई गयी है.
— Akhilesh Yadav (@yadavakhilesh) July 10, 2020दरअसल ये कार नहीं पलटी है, राज़ खुलने से सरकार पलटने से बचाई गयी है.
— Akhilesh Yadav (@yadavakhilesh) July 10, 2020
ನಿನ್ನೆ ವಿಕಾಸ ದುಬೆ ಬಂಧನವಾಗುತ್ತಿದ್ದಂತೆ ಟ್ವಿಟರ್ ಮೂಲಕ ಪ್ರತಿಕ್ರಿಯೆ ನೀಡಿರುವ ಸಮಾಜವಾದಿ ಪಕ್ಷದ ನಾಯಕ ಹಾಗೂ ಉತ್ತರ ಪ್ರದೇಶದ ಮಾಜಿ ಸಿಎಂ ಅಖಿಲೇಶ್ ಯಾದವ್ ''ವಿಕಾಸ್ ದುಬೆಯದ್ದು ಶರಣಾಗತಿಯೋ.? ಅಥವಾ ಪೊಲೀಸರು ಬಂಧಿಸಿದ್ದಾ..?'' ಎಂದು ತಮ್ಮ ಟ್ವಿಟರ್ನಲ್ಲಿ ಪ್ರಶ್ನಿಸಿದ್ದರು. ಇಂದು ದುಬೆ ಹತ್ಯೆ ಬಳಿಕ "ಯುಪಿ ಸರ್ಕಾರ ತನ್ನ ರಹಸ್ಯಗಳನ್ನು ಕಾಪಾಡಿಕೊಳ್ಳುವ ಸಲುವಾಗಿ ಕಾರನ್ನು ಪಲ್ಟಿ ಮಾಡಿಸಿದೆ" ಎಂದು ಟ್ವೀಟ್ ಮಾಡಿದ್ದರು. ಹೀಗಾಗಿ ಅಖಿಲೇಶ್ ಯಾದವ್ ಹೆಸರು ಹೇಳದೇ ನರೋತ್ತಮ್ ಮಿಶ್ರಾ ಟಾಂಗ್ ನೀಡಿದ್ದಾರೆ.

ಇನ್ನು ಜುಲೈ 3 ರಂದು ಕಾನ್ಪುರದ ಬಿಕ್ರು ಗ್ರಾಮದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಪ್ರಾಣ ಕಳೆದುಕೊಂಡ ಕಾನ್‌ಸ್ಟೇಬಲ್ ಜಿತೇಂದ್ರ ಪಾಲ್ ಸಿಂಗ್ ಅವರ ತಂದೆ ತಿರತ್ ಪಾಲ್ ಪ್ರತಿಕ್ರಿಯೆ ನೀಡಿದ್ದು, ಯುಪಿ ಪೊಲೀಸರ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಅವರು ಇಂದು ಏನೇ ಮಾಡಿದ್ದರೂ ನನಗೆ ಸಮಾಧಾನ ತಂದಿದೆ. ಯೋಗಿ ಸರ್ಕಾರಕ್ಕೆ ನಾನು ಧನ್ಯವಾದ ಹೇಳುತ್ತೇನೆ ಎಂದು ಹೇಳಿದ್ದಾರೆ.