ಪಾಟ್ನಾ (ಬಿಹಾರ): ಸಿಎಂ ನಿತೀಶ್ ಕುಮಾರ್ ಅವರು ಸಚಿವ ಸಂಪುಟವನ್ನು ಮಂಗಳವಾರ ವಿಸ್ತರಿಸಿದ್ದು, ಬಿಜೆಪಿ 9 ಮತ್ತು ಜೆಡಿಯುನಿಂದ 8 ಸೇರಿ ಒಟ್ಟು 17 ಶಾಸಕರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ರು.
ರಾಜ್ಯಪಾಲ ಫಾಗು ಚೌಹಾಣ್ ಅವರು ಪ್ರಮಾಣವಚನ ಬೋಧಿಸಿದರು. ವಿಧಾನ ಪರಿಷತ್ ಸದಸ್ಯ ಶಹನವಾಜ್ ಹುಸೇನ್ ಮತ್ತು ದಿ. ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಹೋದರ ನೀರಜ್ ಸಿಂಗ್ ಬಬ್ಲು ಕೂಡ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ರು.
ಹೊಸ ಮತ್ತು ಯುವ ಮುಖಗಳಿಗೆ ಬಿಜೆಪಿ ಆದ್ಯತೆ ನೀಡಿದ್ರೆ, ಜೆಡಿಯು ಅನುಭವಿ ಮತ್ತು ಯುವ ಜನರೊಂದಿಗೆ ಹೊಂದಾಣಿಕೆ ಮಾಡಲು ಪ್ರಯತ್ನಿಸಿದೆ. ಬಹುಜನ ಸಮಾಜ ಪಕ್ಷದಿಂದ ಬಂದ ಜಮಾನ್ ಖಾನ್ ಅವರನ್ನು ಮಂತ್ರಿಯನ್ನಾಗಿ ಮಾಡಲಾಗಿದೆ.
ಓದಿ: ವೈವಿಧ್ಯತೆಯ ರಾಜಕೀಯ ನಿಲುವು.. ಕೌಟುಂಬಿಕ ಬಂಧುತ್ವ.. ಆಜಾದ್-ಮೋದಿ ಬಾಂಧವ್ಯ ಹೀಗಿದೆ..
ಶಹನವಾಜ್ ಹುಸೇನ್ ಅವರಲ್ಲದೇ, ಸಾಮ್ರಾತ್ ಚೌಧರಿ, ಸುಭಾಷ್ ಸಿಂಗ್, ಅಲೋಕ್ ರಂಜನ್ ಝಾ, ಪ್ರಮೋದ್ ಕುಮಾರ್, ಜನಕ್ ರಾಮ್, ನಾರಾಯಣ್ ಪ್ರಸಾದ್, ನಿತಿನ್ ನವೀನ್, ನೀರಜ್ ಸಿಂಗ್ ಬಬ್ಲು ಅವರನ್ನು ಸಚಿವರನ್ನಾಗಿ ಮಾಡಲಾಗಿದೆ.
ಇಲ್ಲಿ ಜೆಡಿಯು ಪರವಾಗಿ ಮಾಜಿ ಸಚಿವ ಶ್ರವಣ್ ಕುಮಾರ್ ಅವರನ್ನು ಮತ್ತೊಮ್ಮೆ ಸಚಿವರನ್ನಾಗಿ ಮಾಡಲಾಗಿದೆ. ಇದಲ್ಲದೇ ಲೇಸಿ ಸಿಂಗ್, ಸಂಜಯ್ ಝಾ, ಮದನ್ ಸಾಹ್ನಿ ಕೂಡ ನಿತೀಶ್ ಅವರ ಸಹವರ್ತಿಯಾಗಿ ಸಂಪುಟಕ್ಕೆ ಸೇರಿದರು. ಸ್ವತಂತ್ರರಾದ ಸುಮಿತ್ ಕುಮಾರ್ ಸಿಂಗ್, ಜಯಂತ್ ರಾಜ್ ಮತ್ತು ಸುನಿಲ್ ಕುಮಾರ್ ಕೂಡ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.