ETV Bharat / bharat

ಕೇಜ್ರಿವಾಲ್‌ ಪ್ರಮಾಣವಚನದಲ್ಲಿ ಗಮನ ಸಳೆದ ಮುದ್ದಾದ ಪುಟಾಣಿ: ಈತನಿಗಿತ್ತು ವಿಶೇಷ ಆಹ್ವಾನ - ಪ್ರಮಾಣವಚನ ಕಾರ್ಯಕ್ರಮದಲ್ಲಿ ಚೋಟಾ ಮಫ್ಲರ್​ಮ್ಯಾನ್

ನವದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶದ ದಿನ ಇಂಟರ್ನೆಟ್​ನಲ್ಲಿ ಸೆನ್ಸೇಷನ್​ ಕ್ರಿಯೇಟ್​ ಮಾಡಿದ್ದ 'ಚೋಟಾ ಮಫ್ಲರ್​ ಮ್ಯಾನ್​' ಇಂದು ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲೂ ಲಕ್ಷಾಂತರ ಜನರ ನಡುವೆ ಹಾಜರಾಗಿ ದೇಶದ ಗಮನ ಸಳೆದ.

Little Mufflerman in Kejriwal oath ceremony,ಪ್ರಮಾಣವಚನ ಕಾರ್ಯಕ್ರಮದಲ್ಲಿ ಚೋಟಾ ಮಫ್ಲರ್​ಮ್ಯಾನ್​
ಪ್ರಮಾಣವಚನ ಕಾರ್ಯಕ್ರಮದಲ್ಲಿ ಚೋಟಾ ಮಫ್ಲರ್​ಮ್ಯಾನ್​
author img

By

Published : Feb 16, 2020, 4:54 PM IST

Updated : Feb 16, 2020, 5:37 PM IST

ನವದೆಹಲಿ: ಚೋಟಾ ಅರವಿಂದ್ ಕೇಜ್ರಿವಾಲ್ ರೂಪದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸಖತ್​ ಸದ್ದು ಮಾಡಿದ್ದ 'ಚೋಟಾ ಮಫ್ಲರ್​ಮ್ಯಾನ್' ಎಎಪಿ ಮುಖ್ಯಸ್ಥ ಅರವಿಂದ್​ ಕೇಜ್ರಿವಾಲ್ ಪ್ರಮಾಣವಚನ ಕಾರ್ಯಕ್ರಮದಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗಿದ್ದ.

Little Mufflerman in Kejriwal oath ceremony,ಪ್ರಮಾಣವಚನ ಕಾರ್ಯಕ್ರಮದಲ್ಲಿ ಚೋಟಾ ಮಫ್ಲರ್​ಮ್ಯಾನ್​
ಚೋಟಾ ಮಫ್ಲರ್​ಮ್ಯಾನ್​

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಭರ್ಜರಿ ಜಯ ಸಾಧಿಸಿದ್ದು, ಮತ ಎಣಿಕೆಯ ದಿನ ಈ 'ಚೋಟಾ ಮಫ್ಲರ್‌ಮ್ಯಾನ್' ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದ್ದ.

ಅರವಿಂದ್ ಕೇಜ್ರಿವಾಲ್​ರಂತೆ ವಿ-ನೆಕ್ ಮರೂನ್ ಸ್ವೆಟರ್ ಮತ್ತು ತಲೆಯ ಸುತ್ತಲೂ ಮಫ್ಲರ್, ಪಕ್ಷದ ಚಿಹ್ನೆ ಹೊಂದಿರುವ ಗಾಂಧಿ ಟೋಪಿ, ಕನ್ನಡಕ ಧರಿಸಿ ಆಕಾಶದೆಡೆಗೆ ಕೈ ತೋರಿಸುತ್ತ ಥೇಟ್ ಕೇಜ್ರಿವಾಲ್​ರಂತೆ ಕಾಣುವ ಈ ಬಾಲಕನ ​ಲುಕ್​ಗೆ ಎಲ್ಲರೂ ಫಿದಾ ಆಗಿದ್ದರು. ಸ್ವತಃ ಎಎಪಿ ಪಕ್ಷ ತನ್ನ ಟ್ವಿಟ್ಟರ್​ನಲ್ಲಿ ಈ ಫೋಟೋವನ್ನ ಹಂಚಿಕೊಂಡಿತ್ತು.

Little Mufflerman in Kejriwal oath ceremony,ಪ್ರಮಾಣವಚನ ಕಾರ್ಯಕ್ರಮದಲ್ಲಿ ಚೋಟಾ ಮಫ್ಲರ್​ಮ್ಯಾನ್​
ಪ್ರಮಾಣವಚನ ಕಾರ್ಯಕ್ರಮದಲ್ಲಿ ಚೋಟಾ ಮಫ್ಲರ್​ಮ್ಯಾನ್​

ರಾಮಲೀಲಾ ಮೈದಾನದಲ್ಲಿ ನಡೆದ ಪ್ರಮಾಣವಚನ ಕಾರ್ಯಕ್ರಮಕ್ಕೆ ಚೋಟಾ ಮಫ್ಲರ್​ಮ್ಯಾನ್​ಗೆ ಎಎಪಿ ಪಕ್ಷದಿಂದಲೇ ಅಧಿಕೃತವಾಗಿ ವಿಶೇಷ ಆಹ್ವಾನ ನೀಡಲಾಗಿತ್ತು. ಒಂದೆಡೆ ಕೇಜ್ರಿವಾಲ್ ಮೂರನೇ ಬಾರಿಗೆ ರಾಷ್ಟ್ರ ರಾಜಧಾನಿಯ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡುತ್ತಿದ್ದರು. ಇನ್ನೊಂದೆಡೆ, ಎಎಪಿ ಪಕ್ಷದ ಶಾಸಕರೂ ಮುಖಂಡರೂ ಸೇರಿದಂತೆ ಅನೇಕರು ಈ 'ಚೋಟಾ ಮಫ್ಲರ್​ಮ್ಯಾನ್' ಜೊತೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು.

ರಾಹುಲ್ ತೋಮರ್, ಬಾಲಕನ ತಂದೆ

ಇನ್ನು, ಬಾಲಕನ ಬಗ್ಗೆ ಮಾತನಾಡಿರುವ ಆತನ ತಂದೆ ರಾಹುಲ್ ತೋಮರ್, ಅರವಿಂದ್ ಕೇಜ್ರಿವಾಲ್ ಅವರಂತೆ ಬಾಲಕನನ್ನ ರೆಡಿ ಮಾಡಬೇಕೆಂಬುದು ಅವರ ತಾಯಿಯ ಆಲೋಚನೆ. ಈ ವಯಸ್ಸಿನಲ್ಲಿ, ಅವನು ಕೇಜ್ರಿವಾಲ್ ಅವರ ಉಡುಪನ್ನು ನಕಲಿಸಬಹುದು. ಆದರೆ ಅವನು ಬೆಳೆದಂತೆ, ಕೇಜ್ರಿವಾಲ್ ನಂತಹ ಪ್ರಾಮಾಣಿಕ ಮತ್ತು ಕಷ್ಟಪಟ್ಟು ಕೆಲಸ ಮಾಡುವ ವ್ಯಕ್ತಿಯನ್ನಾಗಿಸಲು ನಾವು ಪ್ರಯತ್ನಿಸುತ್ತೇವೆ. ನಾವೆಲ್ಲರೂ ಕೇಜ್ರಿವಾಲ್ ಅವರ ನೀತಿಗಳನ್ನು ಇಷ್ಟಪಡುತ್ತೇವೆ ಎಂದಿದ್ದಾರೆ.

Last Updated : Feb 16, 2020, 5:37 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.