ಮಸೂರಿ: ಮಸೂರಿಯಲ್ಲಿ ಹಿಮಪಾತ ಹೆಚ್ಚುತ್ತಿದ್ದು, ಶಿಲ್ಪಿ ಇಮ್ರಾನ್ ಹುಸೇನ್ ಹಿಮವನ್ನು ಕೆತ್ತಿ ಸಿಂಹದ ಪ್ರತಿಮೆ ಮಾಡಿದ್ದಾನೆ.
ಇತ್ತೀಚಿನ ದಿನಗಳಲ್ಲಿ ಹಿಮಪಾತ ಜೋರಾಗಿಯೇ ಇದ್ದು, ಜನರ ಜೀವನಕ್ಕೆ ಕೊಂಚ ಮಟ್ಟಿನ ತೊಂದರೆಯಾಗುತ್ತಿದೆ. ಆದ್ರೆ ಈ ಹಿಮಪಾತವನ್ನು ಆನಂದಿಸಲು ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚುತ್ತಿದೆ. ಈ ಹಿಂದೆ ಹಿಮದಿಂದ ಮಾಡಿದ ಹಿಮಮಾನವನ ಬಗ್ಗೆ ಕೇಳಿದ್ದೇವೆ . ಆದ್ರೆ ಇದೀಗ ಶಿಲ್ಪಿ ಇಮ್ರಾನ್ ಹುಸೇನ್ ಹಿಮದಿಂದ ಸಿಂಹಗಳನ್ನು ತಯಾರಿಸುವ ಮೂಲಕ ತನ್ನ ಕೈಚಳಕ ತೋರಿಸಿದ್ದು, ಮಸೂರಿ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯ ವಿಷಯವಾಗಿದೆ.
ಮಸೂರಿಯ ಧನಾಲ್ಟಿ ಬೈಪಾಸ್ ಎಗ್ ಫಾರ್ಮ್ನ ನಿವಾಸಿ ಸೈಯದ್ ಇಮ್ರಾನ್ ಹುಸೇನ್ ಮಣ್ಣಿನ ಮತ್ತು ಸಿಮೆಂಟಿನಿಂದ ಹಿಂದೂ ದೇವತೆಗಳ ವಿಗ್ರಹಗಳನ್ನು ಸಿದ್ಧಪಡಿಸುತ್ತಿದ್ದರು. ಈ ಬಾರಿ ಅವರು ತೀವ್ರ ಶೀತದ ಹೊರತಾಗಿಯೂ 6 ರಿಂದ 7 ಗಂಟೆಗಳ ಕಠಿಣ ಪರಿಶ್ರಮದ ನಂತರ ಸುಮಾರು 6 ಅಡಿ ಉದ್ದದ ಸಿಂಹದ ಕಲಾಕೃತಿಯನ್ನು ರಚಿಸಿದ್ದಾರೆ. ಪ್ರವಾಸಿಗರು ಈ ಕಲಾಕೃತಿಗೆ ಮಾರುಹೋಗಿ, ಅದರೊಟ್ಟಿಗೆ ಸೆಲ್ಫಿ ತೆಗೆದು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಕಲಾಕೃತಿಗಳ ಚಿತ್ರಗಳು ಸಹ ಸಾಮಾಜಿಕ ಮಾಧ್ಯಮಗಳಲ್ಲಿ ಬಹಳ ಸದ್ದು ಮಾಡುತ್ತಿವೆ.