ಬಿಹಾರ: ರಾಜ್ಯಾದ್ಯಂತ ಸಿಡಿಲಿನ ಅಬ್ಬರಕ್ಕೆ ಬುಧವಾರ ಒಂದೇ ದಿನ 12 ಜನರು ಬಲಿಯಾಗಿದ್ದು, ಮೃತರ ಕುಟುಂಬಕ್ಕೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ 4 ಲಕ್ಷ ಪರಿಹಾರ ಘೋಷಿಸಿದ್ದಾರೆ.
ಬೆಗುಸರೈ, ಭಾಗಲ್ಪುರ್, ಬಂಕಾ, ಮುಂಗರ್, ಕೈಮೂರ್ ಮತ್ತು ಜಮುಯಿ - ಈ ಆರು ಜಿಲ್ಲೆಗಳಲ್ಲಿ 12 ಮಂದಿ ಸಾವನ್ನಪ್ಪಿದ್ದಾರೆ. ಇಂತಹ ಅಪಾಯಕಾರಿ ವಾತಾವರಣದಲ್ಲಿ ಜನರು ಜಾಗರೂಕತೆಯಿಂದ ಇರಬೇಕೆಂದು ಮನವಿ ಮಾಡುತ್ತೇನೆ. ವಿಪತ್ತು ನಿರ್ವಹಣಾ ಪ್ರಾಧಿಕಾರ ನೀಡಿರುವ ಸಲಹೆಗಳನ್ನು ಅನುಸರಿಸಿ ಮನೆಯೊಳಗೆ ಸುರಕ್ಷಿತವಾಗಿರಿ ಎಂದು ಸಿಎಂ ನಿತೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.
-
...(2/2) मेरी लोगों से अपील है कि वे खराब मौसम में पूरी सतर्कता बरतें। आपदा प्रबंधन विभाग द्वारा समय-समय पर जारी किए गए सुझावों का अनुपालन करें। खराब मौसम में घरों में रहें और सुरक्षित रहें। https://t.co/nhikzQWLEg
— Nitish Kumar (@NitishKumar) July 8, 2020 " class="align-text-top noRightClick twitterSection" data="
">...(2/2) मेरी लोगों से अपील है कि वे खराब मौसम में पूरी सतर्कता बरतें। आपदा प्रबंधन विभाग द्वारा समय-समय पर जारी किए गए सुझावों का अनुपालन करें। खराब मौसम में घरों में रहें और सुरक्षित रहें। https://t.co/nhikzQWLEg
— Nitish Kumar (@NitishKumar) July 8, 2020...(2/2) मेरी लोगों से अपील है कि वे खराब मौसम में पूरी सतर्कता बरतें। आपदा प्रबंधन विभाग द्वारा समय-समय पर जारी किए गए सुझावों का अनुपालन करें। खराब मौसम में घरों में रहें और सुरक्षित रहें। https://t.co/nhikzQWLEg
— Nitish Kumar (@NitishKumar) July 8, 2020
ರಾಜ್ಯದ ಪಾಟ್ನಾ, ಭೋಜ್‌ಪುರ, ವೈಶಾಲಿ ಮತ್ತು ನಳಂದ ಸೇರಿದಂತೆ 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಗುಡುಗು-ಸಿಡಿಲು ಭಾರಿ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.
ಜುಲೈ 2 ರಂದು ಬಿಹಾರದಲ್ಲಿ ಸಿಡಿಲಿಗೆ 6 ಮಂದಿ, ಜು.3 ರಂದು 13 ಹಾಗೂ ಜು.4 ರಂದು 23 ಮಂದಿ ಮೃತಪಟ್ಟಿದ್ದರು.