ETV Bharat / bharat

ರೈಲು ಅಪಘಾತದಲ್ಲಿ ಕಾಲು ಕಳೆದುಕೊಂಡರೂ ಲಂಡನ್​​​​ಗೆ ಹೊರಟ ‘ರಾಕಿ’! - ಹರಿಯಾಣದ ಫರಿದಾಬಾದ್

ರೈಲು ಅಪಘಾತದಲ್ಲಿ ತನ್ನ ಮುಂದಿನ ಕಾಲುಗಳನ್ನು ಕಳೆದುಕೊಂಡಿದ್ದ ರಾಕಿ ಎಂಬ ನಾಯಿ ಇದೀಗ ಲಂಡನ್​ಗೆ ಪ್ರಯಾಣ ಬೆಳೆಸಲು ಸಿದ್ಧವಾಗಿ ನಿಂತಿದೆ. ಪೀಪಲ್ ಫಾರ್ ಎನಿಮಲ್ಸ್ ಸಂಸ್ಥೆಯ ಆರೈಕೆಯಲ್ಲಿ ಚೇತರಿಸಿಕೊಂಡಿದ್ದ ರಾಕಿಗೆ ಲಂಡನ್​ನಲ್ಲಿ ಹೊಸ ಮಾಲೀಕರು ಸಿಕ್ಕಿದ್ದಾರೆ. ನಾಳೆಯ ಸರಕು ವಿಮಾನದಲ್ಲಿ ರಾಕಿ ಲಂಡನ್​ಗೆ ತೆರಳಲಿದೆ.

life-battle-of-this-haryana-street-dog-ends-in-london
ರೈಲು ಅಪಘಾತದಲ್ಲಿ ಕಾಲು ಕಳೆದುಕೊಂಡರೂ ಲಂಡನ್​​​​ಗೆ ಹೊರಟ ಬೀದಿನಾಯಿ ‘ರಾಕಿ’..!
author img

By

Published : Nov 18, 2020, 8:12 AM IST

ಫರಿದಾಬಾದ್ (ಹರಿಯಾಣ)​: ಇಲ್ಲಿನ ಬೀದಿನಾಯಿಯೊಂದು ರೈಲು ಅಪಘಾತಕ್ಕೆ ಒಳಗಾಗಿ ಮುಂದಿನ ಎರಡೂ ಕಾಲುಗಳನ್ನು ಕಳೆದುಕೊಂಡಿತ್ತು. ಆದರೆ ಇದೀಗ ಲಂಡನ್​​ನಲ್ಲಿ ಹೊಸ ಮಾಲೀಕರ ಸೇರಿಕೊಳ್ಳಲು ಸಜ್ಜಾಗಿದೆ.

ಮೂರು ವರ್ಷದ ರಾಕಿ ಹೆಸರಿನ ಶ್ವಾನ ನಾಳೆ ಲಂಡನ್ ವಿಮಾನವೇರಿ ಹೊಸ ಮಾಲೀಕನ ಮನೆಗೆ ಸೇರಿಕೊಳ್ಳಲಿದೆ. ಒಂದು ವರ್ಷದ ಹಿಂದೆ ರೈಲಿಗೆ ಸಿಲುಕಿ ತನ್ನ ಇಲ್ಲಿನ ಉತ್ತರ ಹರಿಯಾಣದ ಫರಿದಾಬಾದ್​ನಲ್ಲಿ ಗಾಯಗೊಂಡು ಮಲಗಿದ್ದ ನಾಯಿಯನ್ನು ಅಲ್ಲಿನ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ಕಾನ್ಸ್​ಟೇಬಲ್​ ರಕ್ಷಿಸಿದ್ದರು. ಈ ವೇಳೆ ಮುಂದಿನ ಕಾಲು ಕಳೆದುಕೊಂಡು, ಬೆನ್ನಿನ ಭಾಗಕ್ಕೆ ಗಾಯವಾಗಿತ್ತು.

ರೈಲು ಅಪಘಾತದಲ್ಲಿ ಕಾಲು ಕಳೆದುಕೊಂಡ ರಾಕಿ ನಾಳೆ ಲಂಡನ್​ಗೆ

ಬಳಿಕ ಆ ನಾಯಿಯನ್ನು ಸಿಬ್ಬಂದಿ ಪೀಪಲ್ ಫಾರ್ ಎನಿಮಲ್ಸ್ ಸಂಸ್ಥೆಗೆ ಒಪ್ಪಿಸಿದರು. ಅಲ್ಲಿ ಸಂಸ್ಥೆಯು ಆಸ್ಪತ್ರೆಗೆ ಸೇರಿಸಿ ತೀರ ಮುತುವರ್ಜಿ ವಹಿಸಿ ಚಿಕಿತ್ಸೆ ನೀಡಲಾಯಿತು. ಈ ವೇಳೆ ಎರಡೂ ಕಾಲುಗಳನ್ನು ತೆಗೆದು ಹೆಚ್ಚಿನ ಚಿಕಿತ್ಸೆ ನೀಡಿದ ಬಳಿಕ ಚೇತರಿಸಿಕೊಂಡಿತ್ತು.

ಈ ಕುರಿತಂತೆ ಪೀಪಲ್ ಫಾರ್ ಎನಿಮಲ್ಸ್​ ಸಂಸ್ಥೆಯ ಮುಖ್ಯಸ್ಥ ರವಿ ದುಬೆ ಮಾತನಾಡಿ, ಈ ರೀತಿ ಗಾಯ ಮನುಷ್ಯರಿಗೆ ಆಗಿದ್ದರೆ ಆ ನೋವನ್ನು ಪದಗಳಲ್ಲಿ ವ್ಯಕ್ತಪಡಿಸಬಹುದಿತ್ತು. ಆದರೆ ನಾಯಿ ಆ ನೋವು ತಡೆದುಕೊಂಡು ಸಾವು ಗೆದ್ದು ಬಂದಿದೆ. ಕಾಲು ಕಳೆದುಕೊಂಡರು ರಾಕಿ ನಡೆಯಲು, ಓಡಲು ಆರಂಭಿಸಿದೆ. ಎಲ್ಲಾ ಸಾಮಾನ್ಯ ನಾಯಿಗಳಂತೆಯೇ ಅದು ಸಹ ಇದೆ ಎಂದಿದ್ದಾರೆ.

ರಾಕಿ ತುಂಬಾ ಧೈರ್ಯವಂತ. ತನ್ನ ಎರಡು ಕಾಲು ಕಳೆದುಕೊಂಡಿದ್ದರೂ, ಬದುಕುವ ಚೈತನ್ಯವನ್ನು ಮಾತ್ರ ಕಳೆದುಕೊಂಡಿರಲಿಲ್ಲ. ಈಗ ಬದುಕಲು ಸುರಕ್ಷಿತ ಮತ್ತು ಮುಕ್ತ ಸ್ಥಳವನ್ನು ಆಯ್ದುಕೊಂಡಿದೆ ಸಂತಸ ವ್ಯಕ್ತಪಡಿಸಿದೆ.

ಈ ನಡುವೆ ರಾಕಿಗೆ ಕೃತಕ ಕಾಲುಗಳನ್ನೂ ಸಹ ಜೋಡಿಸಲಾಗಿತ್ತು. ಆದರೆ ಈ ಕಾಲುಗಳ ಸಹಾಯದಿಂದ ನಡೆಯಲು ಕಷ್ಟ ಪಡುತ್ತಿತ್ತು. ರಾಕಿಗೆ ಆ ಕಾಲುಗಳು ಸರಿಹೊಂದುತ್ತಿರಲಿಲ್ಲ. ಬಳಿಕ ಕೃತಕ ಕಾಲುಗಳನ್ನು ತೆಗೆಯಲಾಯಿತು. ತಾನಾಗಿಯೇ ಹಿಂಬದಿಯ ಕಾಲುಗಳ ಮೇಲೆ ನಿಲ್ಲಲು ಆರಂಭಿಸಿತು. ಈಗ ಹಿಂದಿನ ಕಾಲುಗಳ ಸಹಾಯದೊಂದಿಗೆ ಓಡಾಡುತ್ತಿದೆ ಎಂದಿದ್ದಾರೆ.

ರಾಕಿ ಕುರಿತು ಈ ಸಂಸ್ಥೆ ಒಂದು ವಿಡಿಯೋ ಚಿತ್ರಿಸಿ ಜನರಲ್ಲಿ ಬೀದಿ ನಾಯಿಯ ಕುರಿತು ಅರಿವಿಗೆ ಮುಂದಾಗಿದ್ದರು. ಈ ವಿಡಿಯೋ ವೈರಲ್​​ ಸಹ ಆಗಿತ್ತು. ಈ ವಿಡಿಯೋವನ್ನು ಲಂಡನ್ ಮೂಲದ ವೈಲ್ಡ್​​​ ಎಟ್​​​ ಹಾರ್ಟ್ ಎಂಬ ಸಂಸ್ಥೆ ವೀಕ್ಷಿಸಿತ್ತು. ಬಳಿಕ ರಾಕಿಯನ್ನು ತಮ್ಮ ಸ್ವಂತ ಖರ್ಚಿನಲ್ಲಿ ಲಂಡನ್ ಕರೆಸಿಕೊಂಡು ಅಲ್ಲಿಯೇ ಸೂಕ್ತ ಮಾಲೀಕರನ್ನು ಹುಡುಕಲು ನಿರ್ಧರಿಸಿದೆ. ರಾಕಿ ಸರಕು ವಿಮಾನದಲ್ಲಿ ಕುಳಿತು ಲಂಡನ್‌ಗೆ ಹಾರಲಿದೆ ಮತ್ತು ಪ್ರಯಾಣಕ್ಕೆ ಸಿದ್ಧತೆಗಳು ನಡೆಯುತ್ತಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.