ಭಾರತದ ಮಾಜಿ ರಾಷ್ಟ್ರಪತಿ ಪ್ರಣಬ್ ಕುಮಾರ್ ಮುಖರ್ಜಿಯವರು, ಡಿಸೆಂಬರ್ 11, 1935 ರಂದು ಜನಿಸಿದರು. ಭಾರತದ ಅತ್ಯಂತ ಮೇಧಾವಿ ರಾಜಕಾರಣಿಯಾದ ಅವರು, 2012 ರಿಂದ 2017 ರವರೆಗೆ ಭಾರತ ದೇಶದ ರಾಷ್ಟ್ರಪತಿಗಳಾಗಿ ಸೇವೆ ಸಲ್ಲಿಸಿದರು. ರಾಷ್ಟ್ರಪತಿಯಾಗುವ ಮುನ್ನ ಇವರು 2009 ರಿಂದ 2012 ರವರೆಗೆ ಕೇಂದ್ರದ ಹಣಕಾಸು ಖಾತೆ ಸಚಿವರಾಗಿದ್ದರು.
ಪ್ರಣಬ್ ಮುಖರ್ಜಿ ಶಿಕ್ಷಣ
ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ಹಾಗೂ ಇತಿಹಾಸ ವಿಷಯದಲ್ಲಿ ಪದವಿ
ಸ್ನಾತಕೋತ್ತರ ಪದವಿ ಹಾಗೂ ಎಲ್ಎಲ್ಬಿ ಪದವಿ
ಪ್ರಣಬ್ ಆರಂಭಿಕ ಜೀವನ
ಕೋಲ್ಕತ್ತಾದ ಪೋಸ್ಟ್ ಮತ್ತು ಟೆಲಿಗ್ರಾಫ್ ಕಚೇರಿಯ ಅಕೌಂಟೆಂಟ್ ಜನರಲ್ ವಿಭಾಗದಲ್ಲಿ ಹಿರಿಯ ದರ್ಜೆ ಕಾರಕೂನರಾಗಿ ಕೆಲಸ
1963 ರಲ್ಲಿ ವಿದ್ಯಾನಗರ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿ ಆರಂಭ
ದೆಶೇರ್ ಡಾಕ್ ಎಂಬ ಪತ್ರಿಕೆಯ ವರದಿಗಾರನಾಗಿ ಕಾರ್ಯ
ಪ್ರಣಬ್ ಜೀವನದ ಕುತೂಹಲಕಾರಿ ಸಂಗತಿಗಳು
ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯರಾಗಿದ್ದ ಪ್ರಣಬ್ ತಂದೆ ಕಮದಾ ಕಿಂಕರ್ ಮುಖರ್ಜಿ
ಕಾಂಗ್ರೆಸ್ ಪಕ್ಷದಿಂದ 1952 ರಿಂದ 1964 ರವರೆಗೆ ಪಶ್ಚಿಮ ಬಂಗಾಳ ವಿಧಾನ ಪರಿಷತ್ ಸದಸ್ಯರಾಗಿದ್ದ ಪ್ರಣಬ್ ತಂದೆ
ಕಾಂಗ್ರೆಸ್ ಪಕ್ಷದಿಂದ ಪ್ರಣಬ್ ಮುಖರ್ಜಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆ
ಕೆಲವೇ ದಿನಗಳಲ್ಲಿ ಇಂದಿರಾ ಗಾಂಧಿಯವರ ನಂಬಿಕಸ್ಥ ವ್ಯಕ್ತಿಯಾದ ಪ್ರಣಬ್
1973 ರಲ್ಲಿ ಇಂದಿರಾ ಅವರ ಕ್ಯಾಬಿನೆಟ್ ಸೇರ್ಪಡೆ
1975 ರಿಂದ 77ರವರೆಗೆ ಆಂತರಿಕ ತುರ್ತು ಪರಿಸ್ಥಿತಿ ಜಾರಿ
ಆ ಸಮಯದಲ್ಲಿ ಹಲವಾರು ಆರೋಪಗಳಿಗೆ ಗುರಿಯಾದ ಪ್ರಣಬ್
1982 ರಲ್ಲಿ ಪ್ರಥಮ ಬಾರಿಗೆ ಹಣಕಾಸು ಸಚಿವರಾಗಿ ನೇಮಕ
1980 ರಿಂದ 1985 ರ ಅವಧಿಯಲ್ಲಿ ರಾಜ್ಯಸಭೆಯ ಮುಖಂಡನಾಗಿ ಸೇವೆ ಸಲ್ಲಿಕೆ
ಇಂದಿರಾ ಗಾಂಧಿ ನಂತರ ಪಕ್ಷದಲ್ಲಿ ತಾನು ಸಮರ್ಥ ವ್ಯಕ್ತಿ ಎಂದು ನಂಬಿದ್ದ ಪ್ರಣಬ್
ಇಂದಿರಾ ಗಾಂಧಿ ಸ್ಥಾನಕ್ಕೆ ರಾಜೀವ ಗಾಂಧಿ ಆಗಮನ
ಕಾಂಗ್ರೆಸ್ನಿಂದ ಹೊರಬಂದು ರಾಷ್ಟ್ರೀಯ ಸಮಾಜವಾದಿ ಕಾಂಗ್ರೆಸ್ ಪಕ್ಷ ಸ್ಥಾಪನೆ
ರಾಜೀವ ಗಾಂಧಿಯವರೊಂದಿಗೆ ನಡೆದ ಸಂಧಾನದ ಮಹತ್ವದ ಮಾತುಕತೆ
ತಮ್ಮ ಪಕ್ಷವನ್ನು ಕಾಂಗ್ರೆಸ್ನೊಂದಿಗೆ ವಿಲೀನಗೊಳಿಸಿ ಮಾತೃ ಪಕ್ಷಕ್ಕೆ ವಾಪಸ್
1991 ರಲ್ಲಿ ರಾಜೀವ್ ಗಾಂಧಿ ನಿಧನದ ನಂತರ ಮತ್ತೆ ಉಚ್ಛ್ರಾಯ ಸ್ಥಿತಿಗೆ ಬಂದ ಪ್ರಣಬ್ ರಾಜಕೀಯ ಜೀವನ
1991 ರಲ್ಲಿ ಯೋಜನಾ ಆಯೋಗದ ಉಪಾಧ್ಯಕ್ಷರನ್ನಾಗಿ ಪ್ರಣಬ್ ಆಯ್ಕೆ ಮಾಡಿದ ಪಿ.ವಿ. ನರಸಿಂಹರಾವ್
1995 ರಲ್ಲಿ ವಿದೇಶಾಂಗ ಇಲಾಖೆ ಸಚಿವರಾಗಿ ನೇಮಕ
1998 ರಲ್ಲಿ ಸೋನಿಯಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗುವಲ್ಲಿ ಪ್ರಣಬ್ ಪ್ರಮುಖ ಪಾತ್ರ
ಸೋನಿಯಾ ಗಾಂಧಿಯವರ ಎಲ್ಲ ಸಂಕಷ್ಟದ ಕಾಲಗಳಲ್ಲಿ ಮಾರ್ಗದರ್ಶಕರಾದ ಪ್ರಣಬ್
2011ರಲ್ಲಿ 'ಅತ್ಯತ್ತಮ ಆಡಳಿತಗಾರ' ಪ್ರಶಸ್ತಿಗೆ ಪ್ರಣಬ್ ಭಾಜನ
ಹಣಕಾಸು, ರಕ್ಷಣೆ ಹಾಗೂ ವಿದೇಶಾಂಗ ಮೂರೂ ಇಲಾಖೆಗಳ ಸಚಿವರಾಗಿ ಕೆಲಸ ಮಾಡಿದ ಕೆಲವೇ ರಾಜಕಾರಣಿಗಳಲ್ಲಿ ಒಬ್ಬರು
ಉದಾರೀಕರಣದ ಮುಂಚಿನ ಹಾಗೂ ಉದಾರೀಕರಣ ಜಾರಿಯಾದ ನಂತರದ ಎರಡೂ ಕಾಲದಲ್ಲಿ ಬಜೆಟ್ ಮಂಡಿಸಿದ ಏಕೈಕ ಹಣಕಾಸು ಸಚಿವ.. ಹೀಗೆ ವಿವಿಧ ರಂಗಗಳಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದರು ಟ್ರಬಲ್ ಶೂಟರ್ ಪ್ರಣಬ್ ದಾ.. ಅವರ ಅಗಲಿಕೆಗೆ ಇಂದು ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ.