ರತ್ಲಂ (ಮಧ್ಯಪ್ರದೇಶ): ಐಎನ್ಎಸ್ ವಿಕ್ರಮಾದಿತ್ಯ ಯುದ್ದನೌಕೆಯಲ್ಲಿ ಬೆಂಕಿ ಅವಘಡ ಸಂಭವಿಸಿ ಸಾವಿಗೀಡಾಗಿದ್ದ ಲೆಫ್ಟಿನೆಂಟ್ ಕಮಾಂಡೋ ಧರ್ಮೇಂದ್ರ ಸಿಂಗ್ ಚೌಹಾಣ್ ಅವರ ಅಂತಿಮ ಯಾತ್ರೆ ಅವರ ಹುಟ್ಟೂರಿನಲ್ಲಿ ನಡೆದಿದೆ.
ಕಳೆದ ರಾತ್ರಿ ಹುಟ್ಟೂರಿಗೆ ಚೌಹಾಣ್ ಮೃತ ದೇಹವನ್ನ ತರಲಾಗಿದ್ದು, ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ತೆರೆದ ವಾಹನದಲ್ಲಿ ಪಾರ್ಥಿವ ಶರೀರದ ಮೆರವಣಿಗೆ ನಡೆಸಲಾಯಿತು. ದಾರಿಯುದ್ದಕ್ಕೂ ಸೇರಿದ್ದ ಸಾವಿರಾರು ಜನ ಚೌಹಾಣ್ ಅಂತಿಮ ದರ್ಶನ ಪಡೆದರು.
ಭಾರತ ಮತ್ತು ಫ್ರಾನ್ಸ್ ನೌಕಾಪಡೆಗಳು ಮೇ ಮೊದಲ ವಾರದಲ್ಲಿ ಕಾರವಾರ ಮತ್ತು ಗೋವಾ ಸಮುದ್ರದಲ್ಲಿ ಬೃಹತ್ ಸಮರಾಭ್ಯಾಸ ನಡೆಸುವ ಕಾರಣ ನೌಕೆ ಗುಜರಾತ್ನಿಂದ ಆಗಮಿಸುತ್ತಿತ್ತು. ಲಂಗರು ಹಾಕುವ ವೇಳೆ ಬಾಯ್ಲರ್ನಲ್ಲಿ ಬೆಂಕಿ ಕಾಣಿಸಿಕೊಂಡು ಅವಘಡ ನಡೆದಿದೆ ಎನ್ನಲಾಗಿದೆ.