ETV Bharat / bharat

ಕೇಜ್ರಿ ಹೊರಡಿಸಿದ್ದ ಆದೇಶ ರದ್ಧುಗೊಳಿಸಿದ ಲೆಫ್ಟಿನೆಂಟ್​ ಗವರ್ನರ್​: ಅಸಮಾಧಾನ ಹೊರಹಾಕಿದ ಸಿಎಂ - ದೆಹಲಿ ಆಸ್ಪತ್ರೆಗಳು

ದೆಹಲಿಯಲ್ಲಿನ ಆಸ್ಪತ್ರೆಗಳು ಅಲ್ಲಿನ ಜನರಿಗೆ ಮಾತ್ರ ಚಿಕಿತ್ಸೆ ನೀಡಬೇಕು ಎಂದು ಆದೇಶ ಹೊರಡಿಸಿದ್ದ ಸಿಎಂ ನಿರ್ಧಾರ ಇದೀಗ ರದ್ಧುಗೊಳಿಸಿ ಲೆಫ್ಟಿನೆಂಟ್​ ಗವರ್ನರ್​ ಆದೇಶ ಹೊರಹಾಕಿದ್ದಾರೆ.

Arvind Kejriwal
Arvind Kejriwal
author img

By

Published : Jun 8, 2020, 8:59 PM IST

ನವದೆಹಲಿ: ದೆಹಲಿಯಲ್ಲಿರುವ ಎಲ್ಲ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಯನ್ನು ಸ್ಥಳೀಯರಿಗೆ ಮಾತ್ರ ಮೀಸಲಿಡಬೇಕು ಎಂದು ಆದೇಶ ಹೊರಡಿಸಿದ್ದ ದೆಹಲಿ ಎಎಪಿ ಸರ್ಕಾರಕ್ಕೆ ಇದೀಗ ಮುಖಭಂಗವಾಗಿದ್ದು, ಈ ಆದೇಶವನ್ನ ಲೆಫ್ಟಿನೆಂಟ್​ ಗವರ್ನರ್​​ ಅನಿಲ್​ ಬೈಜರ್​ ರದ್ಧುಗೊಳಿಸಿದ್ದಾರೆ.

ದೆಹಲಿಯಲ್ಲಿ ಪ್ರತೀಯೊಬ್ಬರಿಗೂ ಚಿಕಿತ್ಸೆ ದೊರೆಯಬೇಕು. ಕೊರೊನಾ ವೈರಸ್​ ಹರಡುತ್ತಿರುವ ಈ ಸಮಯದಲ್ಲಿ ರೋಗಿಗಳೊಂದಿಗೆ ತಾರತಮ್ಯ ಸರಿಯಲ್ಲ. ಬೇರೆ ರಾಜ್ಯದವರು ಎಂಬ ಕಾರಣಕ್ಕಾಗಿ ರೋಗಿಗಳಿಗೆ ಚಿಕಿತ್ಸೆ ನಿರಾಕರಿಸಬಾರದು ಎಂದಿದ್ದಾರೆ.

ಭಾನುವಾರ ಸುದ್ಧಿಗೊಷ್ಠಿ ನಡೆಸಿ ಮಾಹಿತಿ ನೀಡಿದ್ದ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ದೆಹಲಿಯಲ್ಲಿನ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆ ಕೇವಲ ಇಲ್ಲಿನ ಜನರಿಗೆ ಮಾತ್ರ ಚಿಕಿತ್ಸೆ ನೀಡಲು ಮೀಸಲು ಎಂದು ಘೋಷಣೆ ಹೊರಡಿಸಿದ್ದರು. ಇಲ್ಲಿನ ಆಸ್ಪತ್ರೆಗಳು ಹೊರ ರಾಜ್ಯದ ಜನರಿಂದ ತುಂಬಿ ತುಳುಕುವುದನ್ನ ತಪ್ಪಿಸಲು ಈ ನಿರ್ಧಾರ ಕೈಗೊಂಡಿದ್ದಾಗಿ ಹೇಳಿದ್ದರು. ಆದರೆ ಇದೀಗ ಈ ನಿರ್ಧಾರ ರದ್ಧುಗೊಳಿಸಲಾಗಿದೆ.

  • LG साहिब के आदेश ने दिल्ली के लोगों के लिए बहुत बड़ी समस्या और चुनौती पैदा कर दी है

    देशभर से आने वाले लोगों के लिए करोना महामारी के दौरान इलाज का इंतज़ाम करना बड़ी चुनौती है।शायद भगवान की मर्ज़ी है कि हम पूरे देश के लोगों की सेवा करें।हम सबके इलाज का इंतज़ाम करने की कोशिश करेंगे

    — Arvind Kejriwal (@ArvindKejriwal) June 8, 2020 " class="align-text-top noRightClick twitterSection" data=" ">

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್​ ಅಸಮಾಧಾನ ಹೊರಹಾಕಿ ಟ್ವೀಟ್​ ಮಾಡಿದ್ದು, ಲೆಫ್ಟಿನೆಂಟ್​ ಗವರ್ನರ್​ ತೆಗೆದುಕೊಂಡಿರುವ ನಿರ್ಧಾರದಿಂದ ದೊಡ್ಡ ಸಮಸ್ಯೆ ಉದ್ಭವವಾಗಲಿದ್ದು, ದೆಹಲಿಯಲ್ಲಿ ಸ್ಥಳೀಯ ಜನರೇ ಚಿಕಿತ್ಸೆಗೆ ಪರದಾಡಬೇಕಾಗುತ್ತದೆ ಎಂದಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಡಿಸಿಎಂ ಸಿಸೋಡಿಯಾ, ಈ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡ್ತಿದ್ದು, ಇದು ಸಲ್ಲದು ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.