ಉತ್ತರ ಪ್ರದೇಶ: ಪೊಲೀಸ್ ಅಧಿಕಾರಿಗಳಿಗೆ ತಮ್ಮ ಸಮವಸ್ತ್ರದಲ್ಲಿರುವಾಗ ತಮ್ಮ ಕೆಲಸ ಮತ್ತು ಶೌರ್ಯಕ್ಕಾಗಿ ಪದಕ, ನಗದು ಮತ್ತು ಪುರಸ್ಕಾರವನ್ನು ಸರ್ಕಾರದಿಂದ ಅಥವಾ ಮೇಲಧಿಕಾರಿಗಳಿಂದ ಪಡೆಯುವುದು ಸರ್ವೇ ಸಾಮಾನ್ಯ. ಆದರೆ, ಒಬ್ಬ ಪೊಲೀಸ್ ಅಧಿಕಾರಿಗೆ ಸಾಮಾನ್ಯ ನಾಗರಿಕರಿಂದ ಪ್ರಶಂಸೆಗಳಿಸುವುದು ಬಹಳ ಕಡಿಮೆ.
ಆದರೆ, ಇಲ್ಲೊಬ್ಬ ಉತ್ತರಪ್ರದೇಶದ ಹಿರಿಯ ಪೊಲೀಸ್ ಅಧಿಕಾರಿಗೆ 500 ರೂ.ಗಳ ಚೆಕ್ ಹೊಂದಿರುವ ಪ್ರಶಂಸನೆಯ ಪತ್ರ ಹೊಂದಿರುವ ಪೋಸ್ಟ್ವೊಂದು ಸಾಮಾನ್ಯ ವ್ಯಕ್ತಿಯಿಂದ ಬಂದಿದೆ.
ಆಗ್ರಾ ಶ್ರೇಣಿಯ ಇನ್ಸ್ಪೆಕ್ಟರ್-ಜನರಲ್ ಆಫ್ ಪೊಲೀಸ್(ಐಜಿ), ಸತೀಶ್ ಗಣೇಶ್ರವರು "ಪ್ರಶಂಸ ಪ್ರಮನ್ ಪತ್ರ" (ಮೆಚ್ಚುಗೆಯ ಪತ್ರ) ಎಂಬ ಶೀರ್ಷಿಕೆಯ ಪತ್ರವನ್ನು ಹೊಂದಿದವರು. ಈ ಪತ್ರವನ್ನು ಕಳುಹಿಸಿದವರು ಇಟಾದ ವಿಜಯ್ ಪಾಲ್ ಸಿಂಗ್. ಸಿಂಗ್ರವರು ಕಳುಹಿಸಿರುವ ಪೋಸ್ಟ್ನಲ್ಲಿ 500 ರೂಪಾಯಿ ಚೆಕ್ ಮತ್ತು ಒಂದು ಪತ್ರವನ್ನು ನೀಡಿರುವುದು, 1996ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯನ್ನು ಅವರ ಕಾರ್ಯ ಶೈಲಿಯನ್ನು ಶ್ಲಾಘಿಸಿದೆ.
-
An overwhelmed citizen sends a cheque to IG range Agra as a token of his appreciation. IG range Agra went to a PS, camouflaging as an army colonel to lodge a test FIR of theft.
— UP POLICE (@Uppolice) August 9, 2019 " class="align-text-top noRightClick twitterSection" data="
With due regards 2 his sweet gesture, we would reiterate that People’s blessings r our greatest reward pic.twitter.com/qXjLBy6bwv
">An overwhelmed citizen sends a cheque to IG range Agra as a token of his appreciation. IG range Agra went to a PS, camouflaging as an army colonel to lodge a test FIR of theft.
— UP POLICE (@Uppolice) August 9, 2019
With due regards 2 his sweet gesture, we would reiterate that People’s blessings r our greatest reward pic.twitter.com/qXjLBy6bwvAn overwhelmed citizen sends a cheque to IG range Agra as a token of his appreciation. IG range Agra went to a PS, camouflaging as an army colonel to lodge a test FIR of theft.
— UP POLICE (@Uppolice) August 9, 2019
With due regards 2 his sweet gesture, we would reiterate that People’s blessings r our greatest reward pic.twitter.com/qXjLBy6bwv
ಪತ್ರದಲ್ಲಿ ಸಿಂಗ್ ಅವರು ಕರ್ನಲ್ ಆಗಿ ಕಾರ್ಯ ನಿರ್ವಹಿಸುವಾಗ, ಪೊಲೀಸರ ಪ್ರತಿಕ್ರಿಯೆಯನ್ನು ಪರಿಶೀಲಿಸಲು ಮಥುರಾದ ಹೆದ್ದಾರಿಯಲ್ಲಿರುವ ಪೊಲೀಸ್ ಠಾಣೆಗೆ ಲ್ಯಾಪ್ಟಾಪ್ ಕಳ್ಳತನವಾಗಿದೆ ಎಂದು ಎಫ್ಐಆರ್ ದಾಖಲಿಸಲು ಹೋದಾಗ ನಡೆದ ಘಟನೆಯ ಕುರಿತು ಬರೆದಿದ್ದಾರೆ.
ಸಾಮಾನ್ಯವಾಗಿ ಪೊಲೀಸರು ಬಡವರ ಕೇಸ್ಗಳಿಗೆ ಎಫ್ಐಆರ್ ದಾಖಲಿಸಲು ಹಿಂಜರಿಯುತ್ತಾರೆ ಮತ್ತು ಅವರನ್ನು ಅವಮಾನಿಸುತ್ತಾರೆ. ಆದರೆ, ನಿಮ್ಮ ಕಾರ್ಯಶೈಲಿಯ ಬಗ್ಗೆ ನನಗೆ ಸಂತೋಷವಾಗಿದೆ ಮತ್ತು ಈ ಪತ್ರದೊಂದಿಗೆ 500 ರೂ.ಗಳ ಚೆಕ್‌ನ ಲಗತ್ತಿಸುತ್ತಿದ್ದೇನೆ" ಎಂದು ಸಿಂಗ್ ಪತ್ರದಲ್ಲಿ ತಿಳಿಸಿದ್ದಾರೆ.
ಇದಕ್ಕೆ ಪ್ರತಿಕ್ರಯಿಸಿರುವ ಗಣೇಶ್ ಅವರು, "ನನ್ನ 23 ವರ್ಷಗಳ ಪೊಲೀಸ್ ವೃತ್ತಿಜೀವನದಲ್ಲಿ ನಾನು ಅನೇಕ ಪದಕಗಳು, ಪ್ರಶಸ್ತಿಗಳು ಮತ್ತು ಮೆಚ್ಚುಗೆಯ ಪತ್ರಗಳನ್ನು ಸ್ವೀಕರಿಸಿದ್ದೇನೆ. ಆದರೆ, ಇದು ಅತ್ಯಂತ ಮೌಲ್ಯಯುತವಾಗಿದೆ ಹಾಗೂ ಇದು ಪೊಲೀಸ್ ಅಧಿಕಾರಿಯೊಬ್ಬರು ಪಡೆಯಬಹುದಾದ ಅತ್ಯುತ್ತಮ ಪ್ರಶಂಸೆಯಾಗಿದೆ. ಇದು ಚಿನ್ನದ ತೂಕಕ್ಕೆ ಯೋಗ್ಯವಾಗಿದೆ" ಎಂದಿದ್ದಾರೆ.