ETV Bharat / bharat

ವಿಶೇಷ ಅಂಕಣ: ವ್ಯಸನ ಮುಕ್ತ ಭಾರತವೇ ಸಶಕ್ತ ಭಾರತ - Better Knowledge for Better Care

ಕಳೆದ ಕೆಲ ದಶಕಗಳಲ್ಲಿ ಮಾದಕ ವಸ್ತುಗಳಿಂದಾಗಿ ದೇಶದ ಮಕ್ಕಳು ಹಾಗೂ ಯುವಜನತೆಯ ಭವಿಷ್ಯ ಹಾಳಾಗುತ್ತಿದೆ. ದೇಶದಲ್ಲಿ ಡ್ರಗ್ಸ್​ ಹಾಗೂ ಅಲ್ಕೊಹಾಲ್​ ಸೇವನೆಯಿಂದ ಸಂಭವಿಸುವ ಅರ್ಧಕ್ಕೂ ಹೆಚ್ಚು ಅಪರಾಧ ಪ್ರಕರಣಗಳು ಅಸ್ಸಾಂ, ದೆಹಲಿ, ಹರಿಯಾಣ, ಮಣಿಪುರ, ಮಿಜೋರಾಂ, ಸಿಕ್ಕಿಂ ಮತ್ತು ಉತ್ತರ ಪ್ರದೇಶ ರಾಜ್ಯಗಳಿಂದಲೇ ವರದಿಯಾಗುತ್ತಿವೆ.

Let's come together to ensure a drug-free India

author img

By

Published : Jun 26, 2020, 4:13 PM IST

ಹೈದರಾಬಾದ್: ಇಂದು (ಜೂನ್​ 26) ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆಯನ್ನು ವಿಶ್ವಾದ್ಯಂತ ಆಚರಿಸಲಾಗುತ್ತಿದೆ. ಈ ಜಗತ್ತನ್ನು ಮಾದಕ ವಸ್ತುಗಳಿಂದ ಮುಕ್ತವಾಗಿಸಿ ಆರೋಗ್ಯಕರ ಸಮಾಜ ನಿರ್ಮಾಣಕ್ಕಾಗಿ ಜಾಗತಿಕ ಸಹಕಾರ ಬೆಸೆಯಲು ಈ ದಿನ ಮುಡುಪಾಗಿದೆ.

1987 ರಲ್ಲಿ ಪ್ರಥಮ ಬಾರಿಗೆ ವಿಶ್ವಸಂಸ್ಥೆಯ ವತಿಯಿಂದ ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನ ಆಚರಿಸಲಾಯಿತು. ಮಾದಕ ವಸ್ತುಗಳ ಬಳಕೆಯನ್ನು ತಡೆಯುವುದು ಹಾಗೂ ಮಾದಕ ವಸ್ತುಗಳ ಅಕ್ರಮ ಸಾಗಾಟ ನಿಯಂತ್ರಿಸುವುದು ಈ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ.

"ಉತ್ತಮ ಆರೈಕೆಗಾಗಿ ಉತ್ತಮ ಜ್ಞಾನ" (Better Knowledge for Better Care) ಎಂಬುದು ಈ ವರ್ಷದ ಘೋಷವಾಕ್ಯವಾಗಿದೆ. ಜಗತ್ತಿನಲ್ಲಿ ಮಾದಕ ವಸ್ತುಗಳಿಂದ ಉಂಟಾಗುತ್ತಿರುವ ಅನಾಹುತ, ಇದರಿಂದ ಮನುಷ್ಯರ ಆರೋಗ್ಯದ ಮೇಲಾಗುತ್ತಿರುವ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಿ ಮಾದಕ ವಸ್ತು ಮುಕ್ತ ವಿಶ್ವವನ್ನು ನಿರ್ಮಾಣ ಮಾಡುವುದು ಈ ಘೋಷವಾಕ್ಯದ ಧ್ಯೇಯವಾಗಿದೆ.

ಭಾರತದಲ್ಲಿ ಹೆಚ್ಚುತ್ತಿದೆ ಮಾದಕ ವಸ್ತುಗಳ ಬಳಕೆ
ಕಳೆದ ಕೆಲ ದಶಕಗಳಲ್ಲಿ ಮಾದಕ ವಸ್ತುಗಳಿಂದಾಗಿ ದೇಶದ ಮಕ್ಕಳು ಹಾಗೂ ಯುವಜನತೆಯ ಭವಿಷ್ಯ ಹಾಳಾಗುತ್ತಿದೆ. ದೇಶದಲ್ಲಿ ಡ್ರಗ್ಸ್​ ಹಾಗೂ ಅಲ್ಕೊಹಾಲ್​ ಸೇವನೆಯಿಂದ ಸಂಭವಿಸುವ ಅರ್ಧಕ್ಕೂ ಹೆಚ್ಚು ಅಪರಾಧ ಪ್ರಕರಣಗಳು ಅಸ್ಸಾಂ, ದೆಹಲಿ, ಹರಿಯಾಣ, ಮಣಿಪುರ, ಮಿಜೋರಾಂ, ಸಿಕ್ಕಿಂ ಮತ್ತು ಉತ್ತರ ಪ್ರದೇಶ ರಾಜ್ಯಗಳಿಂದಲೇ ವರದಿಯಾಗುತ್ತಿವೆ. ಇನ್ನು ಡ್ರಗ್ಸ್​ ಬಳಕೆಯಲ್ಲಿ ಪಂಜಾಬ್ ರಾಜ್ಯ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ. ಇನ್ನು ಕಳೆದ ಕೆಲ ವರ್ಷಗಳಿಂದೀಚೆಗೆ ಮಾದಕ ವಸ್ತುಗಳ ಅಕ್ರಮ ಸಾಗಾಟ ದೇಶದಲ್ಲಿ ವಿಪರೀತ ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ.

ಮಾದಕ ವ್ಯಸನಕ್ಕೆ ಬಲಿಯಾದವರಲ್ಲಿ ಕಂಡು ಬರುವ ಲಕ್ಷಣಗಳು

* ಪದೇ ಪದೇ ಡ್ರಗ್ಸ್​ ಮೊರೆ ಹೋಗುವುದು

* ಮಾದಕ ಪದಾರ್ಥ ಸಿಗದಿದ್ದಾಗ ಹುಚ್ಚುಚ್ಚಾಗಿ ವರ್ತಿಸುವುದು

* ಹಿಂಸಾತ್ಮಕ ನಡವಳಿಕೆ ಹಾಗೂ ನಿರಂತರ ಹಣಕ್ಕಾಗಿ ಪೀಡಿಸುವುದು

* ವ್ಯಕ್ತಿತ್ವದಲ್ಲಿ ಬದಲಾವಣೆ

* ಯಾವಾಗಲೂ ಉದ್ವೇಗ ಅಥವಾ ಖಿನ್ನತೆ ಆವರಿಸಿರುವುದು

* ಮೂಗಿನಿಂದ ಸತತವಾಗಿ ನೀರು ಸುರಿಯುವುದು, ಕೆಂಪಾದ ಕಣ್ಣು ಹಾಗೂ ಮೈಮೇಲೆ ಇಂಜೆಕ್ಷನ್ ಮಾರ್ಕ್​ಗಳು

* ಒಮ್ಮೆಲೇ ತೂಕ ಹೆಚ್ಚಾಗುವುದು ಅಥವಾ ಕಡಿಮೆಯಾಗುವುದು

ವ್ಯಸನ ಮುಕ್ತರಾಗುವಂತೆ ನಿಮ್ಮವರಿಗೆ ಸಹಾಯ ಮಾಡಿ

ಒಂದು ವೇಳೆ ಈ ಯಾವುದಾದರೂ ಲಕ್ಷಣಗಳು ನಿಮ್ಮ ಬಂಧು ಬಾಂಧವರು ಅಥವಾ ಗೆಳೆಯರಲ್ಲಿ ಕಂಡು ಬಂದಲ್ಲಿ ಅವರನ್ನು ತಕ್ಷಣ ವೈದ್ಯರಲ್ಲಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಅಥವಾ ಆಪ್ತರಿಗೆ ಹೇಳಿ ಸಹಾಯ ಸಿಗುವಂತೆ ಮಾಡಿ. ಇನ್ನು ಅಂಥವರನ್ನು ವ್ಯಸನ ಮುಕ್ತಿ ಕೇಂದ್ರಕ್ಕೆ ದಾಖಲಿಸಿ ವ್ಯಸನಮುಕ್ತಿ ತಜ್ಞರಿಂದ ಚಿಕಿತ್ಸೆ ಕೊಡಿಸುವುದು ಸೂಕ್ತ. ವ್ಯಸನಕ್ಕೆ ಒಳಗಾದವರು ಎಷ್ಟು ತೀವ್ರತೆಯ ವ್ಯಸನಿಗಳಾಗಿದ್ದಾರೆ ಹಾಗೂ ವ್ಯಸನದಿಂದ ಅವರ ದೇಹ, ಮೆದುಳಿನ ಮೇಲೆ ಎಷ್ಟು ಪರಿಣಾಮವಾಗಿದೆ ಎಂಬುದನ್ನು ವೈದ್ಯರು ಹಾಗೂ ಮಾನಸಿಕ ತಜ್ಞರು ಗುರುತಿಸುತ್ತಾರೆ ಹಾಗೂ ಅವರಿಗೆ ಮುಂದೆ ಯಾವ ರೀತಿಯ ಚಿಕಿತ್ಸೆ ನೀಡುವುದು ಅಗತ್ಯ ಎಂಬುದನ್ನು ನಿರ್ಧರಿಸುತ್ತಾರೆ.

ವ್ಯಸನಮುಕ್ತ ಭಾರತವೇ ಸಶಕ್ತ ಭಾರತ ಎಂಬುದು ನಮ್ಮೆಲ್ಲರ ಧ್ಯೇಯವಾಗಲಿ. ಮಾದಕ ವಸ್ತುಗಳನ್ನು ದೂರವಿಡೋಣ, ಸುಂದರ ಸಮರ್ಥ ಸಮಾಜವನ್ನು ನಿರ್ಮಿಸಲು ನಾವೆಲ್ಲರೂ ಪಣ ತೊಡೋಣ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.