ಹಂದ್ವಾರ (ಜಮ್ಮು,ಕಾಶ್ಮೀರ): ಹಂದ್ವಾರದಲ್ಲಿ ಬುಧವಾರ ನಡೆದ ಎನ್‌ಕೌಂಟರ್‌ನಲ್ಲಿ ಮೃತಪಟ್ಟ ಇಬ್ಬರು ಭಯೋತ್ಪಾದಕರಲ್ಲಿ ಒಬ್ಬನನ್ನು ಲಷ್ಕರ್-ಎ-ತೊಯಿಬಾ (ಎಲ್‌ಇಟಿ)ದ ಕಮಾಂಡರ್ ನಸೀರ್-ಉದ್-ದಿನ್ ಲೋನ್ ಎಂದು ಗುರುತಿಸಲಾಗಿದೆ ಎಂದು ಕಾಶ್ಮೀರ ಐಜಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ.
ಏ. 18 ರಂದು ಸೊಪೋರ್‌ನಲ್ಲಿ 3 ಸಿಆರ್‌ಪಿಎಫ್ ಜವಾನರನ್ನು ಮತ್ತು ಮೇ 4 ರಂದು ಹಂದ್ವಾರಾದಲ್ಲಿ 3 ಸಿಆರ್‌ಪಿಎಫ್ ಜವಾನರನ್ನು ಹತ್ಯೆಗೈದ ಪ್ರಕರಣದಲ್ಲಿ ಲೋನ್ ಭಾಗಿಯಾಗಿದ್ದಾನೆ ಎಂದು ಐಜಿಪಿ ಕುಮಾರ್ ತಿಳಿಸಿದ್ದಾರೆ.
ಮೂವರು ಸಿಆರ್‌ಪಿಎಫ್ ಸಿಬ್ಬಂದಿಯಲ್ಲಿ ಒಬ್ಬರಿಂದ ಉಗ್ರರು ಕಸಿದುಕೊಂಡಿದ್ದ ಎಕೆ -47 ರೈಫಲ್ ಅನ್ನು ನಸೀರ್-ಉದ್-ದಿನ್ ಲೋನ್‌ನಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಕುಮಾರ್ ಹೇಳಿದ್ದಾರೆ.
-
#HandwaraEncounterUpdate: AK 47 rifle #snatched from CRPF jawan after attack at Vangam #Handwara on 4/5/20, recovered from LeT #terrorist Naseer also proves his involvement. Killing of Naseer and #Pakistani terrorist Danish is one of big #achievement: IGP Kashmir @JmuKmrPolice https://t.co/RJuNAw0zQF
— Kashmir Zone Police (@KashmirPolice) August 20, 2020 " class="align-text-top noRightClick twitterSection" data="
">#HandwaraEncounterUpdate: AK 47 rifle #snatched from CRPF jawan after attack at Vangam #Handwara on 4/5/20, recovered from LeT #terrorist Naseer also proves his involvement. Killing of Naseer and #Pakistani terrorist Danish is one of big #achievement: IGP Kashmir @JmuKmrPolice https://t.co/RJuNAw0zQF
— Kashmir Zone Police (@KashmirPolice) August 20, 2020#HandwaraEncounterUpdate: AK 47 rifle #snatched from CRPF jawan after attack at Vangam #Handwara on 4/5/20, recovered from LeT #terrorist Naseer also proves his involvement. Killing of Naseer and #Pakistani terrorist Danish is one of big #achievement: IGP Kashmir @JmuKmrPolice https://t.co/RJuNAw0zQF
— Kashmir Zone Police (@KashmirPolice) August 20, 2020
ಹಂದ್ವಾರಾದ ಗಣಿಪೋರಾ ಕ್ರಾಲ್‌ಗುಂಡ್ ಪ್ರದೇಶದಲ್ಲಿ ಬುಧವಾರ ಸಂಜೆ ಪ್ರಾರಂಭವಾದ ಭದ್ರತಾ ಪಡೆಗಳ ಮುಖಾಮುಖಿಯಲ್ಲಿ ಇಬ್ಬರು ಅಪರಿಚಿತ ಭಯೋತ್ಪಾದಕರು ಸಾವನ್ನಪ್ಪಿದ್ದರು. ಈ ಚಕಮಕಿ 9 ಗಂಟೆಗೆ ಕೊನೆಗೊಂಡಿತು. ಆ ಬಳಿಕ ಮೃತರ ಶವಗಳನ್ನು ಕುಪ್ವಾರಾದ ಎಂಜಾಲ್ ಪ್ರದೇಶದಲ್ಲಿ ಸಮಾಧಿ ಮಾಡಲಾಯಿತು.
ಇನ್ನು ಶೋಪಿಯಾನ್‌ನಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ನಡೆದ ಎನ್‌ಕೌಂಟರ್‌ನಲ್ಲಿ ಓರ್ವ ಅಪರಿಚಿತ ಭಯೋತ್ಪಾದಕ ಸಾವನ್ನಪ್ಪಿದ್ದಾನೆ.