ETV Bharat / bharat

ಕೋವಿಡ್​​ಗೆ ಕುಷ್ಠರೋಗ ಲಸಿಕೆ ಪರಿಣಾಮಕಾರಿ: ನಮ್ಮ ನಂಬಿಕೆ, ಔಷಧ ರಿವರ್ಸ್ ಎಂಜಿನಿಯರಿಂಗ್‌ನಲ್ಲಿದೆ..!

author img

By

Published : May 15, 2020, 7:09 PM IST

ವ್ಯಾಪಕವಾಗಿ ಹಬ್ಬುತ್ತಿರುವ ಸಾಂಕ್ರಾಮಿಕ ರೋಗ ಕೋವಿಡ್ -19 ಪ್ರಸ್ತುತ ದೊಡ್ಡ ಅನಾಹುತವನ್ನು ಸೃಷ್ಟಿಸಿದೆ. ಕರೋನಾ ವೈರಸ್ ಕಳೆದ 4 ತಿಂಗಳಿನಿಂದ ವ್ಯಾಪಕ ಹಾನಿಯನ್ನುಂಟು ಮಾಡುತ್ತಿದೆ. ಇಷ್ಟು ಅಲ್ಪಾವಧಿಯಲ್ಲಿ ಮಾರಕ ವೈರಸ್ ಅನ್ನು ಎದುರಿಸಲು ಸೂಕ್ತವಾದ ಔಷಧಗಳು ಮತ್ತು ಲಸಿಕೆಗಳನ್ನು ಕಂಡು ಹಿಡಿಯುವುದು ಬಹಳ ಕಷ್ಟ.

ಕೋವಿಡ್ -19
Leprosy Vaccine

ಹೈದರಾಬಾದ್: ಸಿಎಸ್‌ಐಆರ್‌ನ ಭಾರತೀಯ ರಾಸಾಯನಿಕ ತಂತ್ರಜ್ಞಾನ ಸಂಸ್ಥೆಯ (ಐಐಸಿಟಿ) ನಿರ್ದೇಶಕ ಡಾ. ಎಸ್. ಚಂದ್ರಶೇಖರ್ ಅವರು “ನಾವು ಕೋವಿಡ್- 19 ಅನ್ನು ನಿಯಂತ್ರಿಸಲು ಬಹುಮುಖ ತಂತ್ರದೊಂದಿಗೆ ಮುಂದುವರಿಯುತ್ತಿದ್ದೇವೆ” ಎಂದಿದ್ದಾರೆ. ವೈರಸ್ ವಿರುದ್ಧ ಪರಿಣಾಮಕಾರಿ ಕೆಲಸ ನಿರ್ವಹಿಸುವುದಕ್ಕಾಗಿ ಕಂಡುಹಿಡಿದ ಔಷಧಗಳನ್ನು ಉತ್ಪಾದಿಸುವುದರ ಜೊತೆಗೆ, ವೈರಸ್ ದೇಹಕ್ಕೆ ಬರದಂತೆ ತಡೆಯುವ ಲಸಿಕೆಗಳನ್ನು ತಯಾರಿಸುವತ್ತ ಗಮನ ಹರಿಸಲಾಗಿದೆ. ವೈಜ್ಞಾನಿಕ ಹಾಗೂ ಕೈಗಾರಿಕಾ ಸಂಶೋಧನಾ ಪರಿಷತ್ತಿನ(ಸಿಎಸ್ಐಆರ್) ಪ್ರಯೋಗಾಲಯಗಳು ಈ ಕುರಿತು ಸಂಶೋಧನೆ ನಡೆಸುತ್ತಿವೆ ಎಂದು ಐಐಸಿಟಿ ತಿಳಿಸಿದೆ. ಅವರು ರಾಜ್ಯಸಭಾ ಟಿವಿಯೊಂದಿಗೆ ಕೋವಿಡ್- 19 ಪರೀಕ್ಷೆಗಳು, ಪ್ರಸ್ತುತ ಸವಾಲುಗಳು ಮತ್ತು ಸೂಕ್ತ ಔಷಧದ ಪ್ರಗತಿಯ ಕುರಿತು ಮಾತನಾಡಿದರು.

ರಿವರ್ಸ್ ಎಂಜಿನಿಯರಿಂಗ್​​ನಲ್ಲಿ: ವ್ಯಾಪಕವಾಗಿ ಹಬ್ಬುತ್ತಿರುವ ಸಾಂಕ್ರಾಮಿಕ ರೋಗ ಕೋವಿಡ್ -19 ಪ್ರಸ್ತುತ ದೊಡ್ಡ ಅನಾಹುತವನ್ನು ಸೃಷ್ಟಿಸಿದೆ. ಕೊರೊನಾ ವೈರಸ್ ಕಳೆದ 4 ತಿಂಗಳಿನಿಂದ ವ್ಯಾಪಕ ಹಾನಿಯನ್ನುಂಟುಮಾಡುತ್ತಿದೆ. ಇಷ್ಟುಅಲ್ಪಾವಧಿಯಲ್ಲಿ ಮಾರಕ ವೈರಸ್ ಅನ್ನು ಎದುರಿಸಲು ಸೂಕ್ತವಾದ ಔಷಧಗಳು ಮತ್ತು ಲಸಿಕೆಗಳನ್ನು ಕಂಡು ಹಿಡಿಯುವುದು ಬಹಳ ಕಷ್ಟ. ಆದಾಗ್ಯೂ, ಐಐಸಿಟಿ ರಿವರ್ಸ್ ಗೇರ್ ಇಂಜಿನಿಯರಿಂಗ್ ವಿಧಾನದ ಮೂಲಕ ಜಾಗತಿಕವಾಗಿ ಕೆಲಸ ಮಾಡುವ ಕೆಲವು ಔಷಧಗಳನ್ನು ತಯಾರಿಸುವ ಕಾರ್ಯವಿಧಾನವನ್ನು ಹೊರ ತಂದಿದೆ. ಈ ಸಾಂಕ್ರಾಮಿಕ ರೋಗಕ್ಕೆ ಪ್ರಪಂಚದಲ್ಲಿ ಎಲ್ಲಿಯಾದರೂ ಔಷಧ ತಯಾರಿಸಿದರೆ ಮತ್ತು ಅದು ಪೇಟೆಂಟ್ ಹೊಂದಿದ್ದರೂ ಸಹ ಐಐಸಿಟಿ ಕಡಿಮೆ ವೆಚ್ಚದಲ್ಲಿ ಲಸಿಕೆಯನ್ನು ತಯಾರಿಸುವ ಯೋಜನೆಯನ್ನು ಹಾಕಿದೆ.

ಈ ಔಷಧವನ್ನು ಮೂಲತಃ ಬೇರೆಯದೇ ಪ್ರಕ್ರಿಯೆಯನ್ನು ಅಳವಡಿಸುವುದರ ಮೂಲಕ ತಯಾರಿಸುವುದು ಐಐಸಿಟಿ ಉದ್ದೇಶ. ಇದರಿಂದಾಗಿ ಐಐಸಿಟಿ ಲಸಿಕೆ ತಯಾರಿಕೆ ಪ್ರಕ್ರಿಯೆಯನ್ನು ಮುಂದುವರಿಸಿದೆ. ಈ ರೀತಿಯಾಗಿ, ಒಂದೇ ಔಷಧವನ್ನ ಅಗ್ಗದ ಬೆಲೆಗೆ ಲಭ್ಯವಾಗುವ ಹಾಗೆ ಮಾಡಬಹುದು. ಜೆನೆರಿಕ್ ಮೆಡಿಸಿನ್ (ಜನೌಷಧ) ಸಂಬಂಧಿತ ಔಷಧ ತಯಾರಿಕೆಯನ್ನು ರಿವರ್ಸ್ ಗೇರ್ ಇಂಜಿನಿಯರಿಂಗ್ ಮೂಲಕವೇ ಮಾಡಲಾಗುತ್ತದೆ. ಜಗತ್ತಿನಲ್ಲಿ ಎಲ್ಲೆಲ್ಲಿ ಔಷಧ ಅಥವಾ ಲಸಿಕೆ ತಯಾರಿಸಿದರೂ ಭಾರತದಲ್ಲಿ ಅದನ್ನು ತಯಾರಿಸುವುದು ಅನಿವಾರ್ಯ ಏಕೆಂದರೆ, ಬೇರೆ ದೇಶಗಳಿಗೆ ಹೋಲೊಸಿದರೆ ಭಾರತದ ವಿವಿಧ ಭಾಗಗಳಲ್ಲಿ ಹೆಚ್ಚಿನ ಸಂಖ್ಯೆಯ ಎಫ್‌ಡಿಎ ಅನುಮೋದಿತ ಔಷಧ ಉತ್ಪಾದನಾ ಘಟಕಗಳನ್ನು ಹೊಂದಿರುವ ಕಾರಣ ಹೊಸದಾಗಿ ಕಂಡುಹಿಡಿದ ಲಸಿಕೆಗಳನ್ನು ಭಾರತದಲ್ಲಿಯೂ ಆದಷ್ಟು ಬೇಗ ತಯಾರಿಸಲು ಕಾರ್ಯತಂತ್ರ ರೂಪಿಸಬೇಕು.

ಎಪಿಐವರೆಗೆ

ಕೊರೋನಾ ವೈರಸ್​​ಗೆ ಔಷಧ ಕಂಡುಹಿಡಿಯಲು ಸಿಎಸ್ಐಆರ್ ನ ಪ್ರಯೋಗಾಲಯವು ಗುಜರಾತ್ ಮೂಲದ ಕಂಪನಿಯೊಂದಿಗೆ ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿದೆ. ಗುಜರಾತ್ ಮೂಲದ ಕಂಪನಿ ಈ ಹಿಂದೆ ಎಮ್ ಡಬ್ಲ್ಯು ಎಂಬ ಲಸಿಕೆಯನ್ನು ಕುಷ್ಟರೋಗದ ಚಿಕೆತ್ಸೆಗೆ ಕಂಡು ಹಿಡಿದಿತ್ತು. ಕರೋನಾ ವೈರಸ್‌ಗೆ ಚಿಕಿತ್ಸೆ ನೀಡಲೂ ಸಹ ಕುಷ್ಠರೋಗಕ್ಕೆ ತಯಾರಿಸಿದ ಈ ಔಷಧ ಈಗ ಉಪಯುಕ್ತವಾಗಿದೆ. ಈ ಕುರಿತಾಗಿ ಡಾ. ಚಂದ್ರಶೇಖರ್ ಅವರು “ನಾವು ಪ್ರಸ್ತುತ ನಾಲ್ಕು ಆಸ್ಪತ್ರೆಗಳಲ್ಲಿ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸುತ್ತಿದ್ದೇವೆ. ಈಗಾಗಲೇ ಬಳಕೆಯಲ್ಲಿರುವ ಇತರ ಔಷಧಗಳಿಗೆ ಸಂಬಂಧಿಸಿದಂತೆ ನಾವು ಸಕ್ರಿಯ ಔಷಧೀಯ ಪದಾರ್ಥಗಳು (ಎಪಿಐ) ತಂತ್ರಜ್ಞಾನವನ್ನು ಕೂಡ ಅಭಿವೃದ್ಧಿಪಡಿಸಿದ್ದೇವೆ. ಎಪಿಐ, ರೋಗಕ್ಕೆ ಚಿಕಿತ್ಸೆ ನೀಡುವ ಮೂಲ ಔಷಧವಾಗಿದೆ. ಆದರೆ, ಅದನ್ನು ನೇರವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ರುಚಿ ಮತ್ತು ಬಣ್ಣಕ್ಕಾಗಿ ಇತರ ರಾಸಾಯನಿಕಗಳನ್ನು ಸೇರಿಸಲಾಗುತ್ತದೆ. ನಂತರ ಈ ಪದಾರ್ಥಗಳನ್ನು ಮಾತ್ರೆಗಳು ಮತ್ತು ಸಿರಪ್ ರೂಪದಲ್ಲಿ ತಯಾರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಎಪಿಐನ ತಂತ್ರಜ್ಞಾನವನ್ನು ಇಂಡಸ್ಟ್ರಿಗಳಿಗೆ ವರ್ಗಾಯಿಸಿದ ನಂತರ ಇದೆಲ್ಲವನ್ನೂ ಮಾಡಲಾಗುತ್ತದೆ. ಫಾವಿಪಿರವಿರ್ ಔಷಧದ ಎಪಿಐ ಅನ್ನು ಐಐಸಿಟಿ ವಿಜ್ಞಾನಿಗಳು 4 ವಾರಗಳ ಅವಧಿಯಲ್ಲಿ ಹಗಲು-ರಾತ್ರಿಗಳ ಅವಿರತ ಪ್ರಯತ್ನದಿಂದ ಅಭಿವೃದ್ಧಿಪಡಿಸಿದ್ದಾರೆ. ಈ ಔಷಧವನ್ನು 99.99 ರಷ್ಟು ವೈರಸ್ ನ ವಿರುದ್ದ ಕಾರ್ಯನಿರ್ವಹಿಸುವಂತೆ ಅಭಿವೃದ್ಧಿಪಡಿಸಲಾಗಿದೆ. ಈ ಔಷಧವನ್ನು ಚೀನಾ ಮತ್ತು ಜಪಾನ್‌ನಂತಹ ದೇಶಗಳಲ್ಲಿ ಔಷಧಗಳ ತಯಾರಿಕೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ನಾವು ತಂತ್ರಜ್ಞಾನವನ್ನು ದೇಶೀಯ ಫಾರ್ಮಾ ಕಂಪನಿಗೆ ವರ್ಗಾಯಿಸಿದ್ದೇವೆ. ಅವರು ದೊಡ್ಡ ಪ್ರಮಾಣದಲ್ಲಿ ಈ ಔಷಧಗಳನ್ನು ಉತ್ಪಾದಿಸಲಿದ್ದಾರೆ. ಸದ್ಯ ಅನುಮತಿ ಸಿಗುವ ಹಂತದಲ್ಲಿರುವ ಈ ಲಸಿಕೆಗೆ ಔಷಧ ನಿಯಂತ್ರಕರು ಅನುಮೋದನೆ ನೀಡುವುದನ್ನೇ ನಾವು ಕಾಯುತ್ತಿದ್ದೇವೆ.

-ಎಸ್. ಚಂದ್ರಶೇಖರ್, ಐಐಸಿಟಿ ನಿರ್ದೇಶಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.