ETV Bharat / bharat

ಗಾಯನ ನಿಲ್ಲಿಸಿದ ಗಾನ ಗಂಧರ್ವ: ಚೆನ್ನೈನ ಆಸ್ಪತ್ರೆಯಲ್ಲಿ ಡಾ. ಎಸ್​.ಪಿ.ಬಾಲಸುಬ್ರಹ್ಮಣ್ಯಂ ವಿಧಿವಶ - ಎಸ್​​ಪಿಬಿ ಇನ್ನಿಲ್ಲ

ಎಸ್​ಪಿಬಿ ಅವರಿಗೆ ಗರಿಷ್ಠ ಲೈಫ್ ಸಪೋರ್ಟ್ ನೀಡಲಾಗಿತ್ತು. ಆದರೂ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಚಿಕಿತ್ಸೆ ಫಲಕಾರಿಯಾಗದೆ ಎಸ್​.ಪಿ. ಬಾಲಸುಬ್ರಹ್ಮಣ್ಯಂ ಇವತ್ತು ಇಹಲೋಕದ ಯಾತ್ರೆ ಮುಗಿಸಿದರು.

Legendary Playback Singer S P Balasubrahmanyam passed away
ಎಸ್​. ಪಿ. ಬಾಲಸುಬ್ರಹ್ಮಣ್ಯಂ ವಿಧಿವಶ
author img

By

Published : Sep 25, 2020, 1:34 PM IST

Updated : Sep 25, 2020, 8:56 PM IST

ಚೆನ್ನೈ: ಭಾರತೀಯ ಚಿತ್ರರಂಗದ ಮೇರು ಗಾಯಕ ಡಾ. ಎಸ್​.ಪಿ. ಬಾಲಸುಬ್ರಹ್ಮಣ್ಯಂ ನಿಧನರಾಗಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು. ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಎಸ್​ಪಿಬಿ ಅವರನ್ನು ಕಳೆದ ಆಗಸ್ಟ್ 5ರಂದು ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎಸ್​ಪಿಬಿ ಅವರಿಗೆ ಗರಿಷ್ಠ ಲೈಫ್ ಸಪೋರ್ಟ್ ನೀಡಲಾಗಿತ್ತು. ಆದರೂ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಚಿಕಿತ್ಸೆ ಫಲಕಾರಿಯಾಗದೆ ಎಸ್​.ಪಿ. ಬಾಲಸುಬ್ರಹ್ಮಣ್ಯಂ ಇವತ್ತು ಇಹಲೋಕದ ಯಾತ್ರೆ ಮುಗಿಸಿದರು. ದಕ್ಷಿಣ ಭಾರತ ಮಾತ್ರವಲ್ಲದೆ ಬಾಲಿವುಡ್ ಸೇರಿದಂತೆ ದೇಶದ ವಿವಿಧ ಭಾಷೆಗಳಲ್ಲಿ 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಎಸ್​ಪಿಬಿ ಹಾಡಿದ್ದಾರೆ.

Singer S P Balasubrahmanyam passed away
ಆಸ್ಪತ್ರೆಯಿಂದ ಅಧಿಕೃತ ಪ್ರಕಟಣೆ ರಿಲೀಸ್​​

ಶ್ರೀಪತಿ ಪಂಡಿತಾರಾಧ್ಯುಲ ಬಾಲಸುಬ್ರಮಣ್ಯಂ, ಇದು ಎಸ್.ಪಿ. ಬಾಲಸುಬ್ರಮಣ್ಯಂ ಅವರ ಪೂರ್ತಿ ಹೆಸರು. 1946 ಜೂನ್ 4 ರಂದು ಆಂಧ್ರಪ್ರದೇಶದ ನೆಲ್ಲೂರಿನ ಕೊನೆಟಮ್ಮಪೇಟ ಎಂಬಲ್ಲಿ ಜನಿಸಿದ ಬಾಲು, ಹರಿಕಥಾ ವಿದ್ವಾಂಸ ಎಸ್.ಪಿ. ಸಾಂಬಮೂರ್ತಿ ಹಾಗೂ ಶಕುಂತಲಮ್ಮ ದಂಪತಿಯ ಸುಪುತ್ರ. ಅವರಿಗೆ ಒಬ್ಬ ಸಹೋದರ ಹಾಗೂ ಐವರು ಸಹೋದರಿಯರಿದ್ದಾರೆ. ಎಸ್​ಪಿಬಿ ಪತ್ನಿಯ ಹೆಸರು ಸಾವಿತ್ರಿ. ಎಸ್​ಪಿಬಿ-ಸಾವಿತ್ರಿ ದಂಪತಿಗೆ ಪಲ್ಲವಿ ಹಾಗೂ ಎಸ್.ಪಿ. ಚರಣ್ ಎಂಬ ಇಬ್ಬರು ಮಕ್ಕಳಿದ್ದು, ಎಸ್.ಪಿ. ಚರಣ್ ಕೂಡಾ ಹಿನ್ನೆಲೆ ಗಾಯಕರು. ಎಸ್​​​ಪಿಬಿ ಸಹೋದರಿ ಎಸ್.ಪಿ. ಶೈಲಜಾ ಕೂಡಾ ಖ್ಯಾತ ಹಿನ್ನೆಲೆ ಗಾಯಕಿ.

ತಂದೆ ನಿಧನದ ಬಗ್ಗೆ ಮಾಹಿತಿ ನೀಡಿದ ಮಗ ಚರಣ್​​

ವಿವಿಧ ಭಾಷೆಗಳಲ್ಲಿ 40 ಸಾವಿರಕ್ಕೂ ಹೆಚ್ಚು ಹಾಡುಗಳ ಗಾಯನ, ನಾಲ್ಕು ಭಾಷೆಗಳಲ್ಲಿ ಒಟ್ಟು 6 ರಾಷ್ಟ್ರ ಪ್ರಶಸ್ತಿಗಳು, ಪದ್ಮಶ್ರೀ, ಪದ್ಮವಿಭೂಷಣ ಪ್ರಶಸ್ತಿ, ಸುಮಾರು 25 ಬಾರಿ ಆಂಧ್ರ ಪ್ರದೇಶದ ಪ್ರತಿಷ್ಠಿತ ನಂದಿ ಪ್ರಶಸ್ತಿ, ಹಲವು ವಿಶ್ವ ವಿದ್ಯಾಲಯಗಳಿಂದ ಡಾಕ್ಟರೇಟ್, ನಟ, ಕಂಠದಾನ ಕಲಾವಿದ, ನಿರ್ಮಾಪಕ ಹೀಗೆ ಎಸ್.ಪಿ. ಬಾಲಸ್ರುಬ್ರಹ್ಮಣ್ಯಂ ಮಾಡಿರುವ ಸಾಧನೆಗಳಿಗೆ ಲಭಿಸಿರುವ ಗೌರವಗಳು ಅನೇಕ.

ಎಸ್​ಪಿಬಿ ಭೌತಿಕವಾಗಿ ಇಂದು ನಮ್ಮ ಜೊತೆ ಇಲ್ಲದಿದ್ದರೂ ಅವರ ಆದರ್ಶ ಜೀವನ, ಮೇರು ವ್ಯಕ್ತಿತ್ವ, ಅವರ ಕಂಠಸಿರಿಯಿಂದ ಹೊರಹೊಮ್ಮಿದ ಆ ಅದ್ಭುತ ಹಾಡುಗಳು ಎಂದೆಂದಿಗೂ ಜನಮನದಲ್ಲಿ ಅಚ್ಚಳಿಯದೆ ಉಳಿಯಲಿವೆ.

ಮತ್ತೆ ಹುಟ್ಟಿ ಬನ್ನಿ ಎಸ್​ಪಿಬಿ...

Last Updated : Sep 25, 2020, 8:56 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.